ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆ: ಕ್ರಿಯೇಟಿವ್ ಪದವಿ ಪೂರ್ವಕಾಲೇಜಿನ 7 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ: ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಉದ್ಭವ್ ಎಂ ಆರ್, ಜಾಗೃತಿ ಕೆ ಪಿ, ಆದಿತ್ಯ ವಿ ಹೊಳ್ಳ, ಅಭಯ್ ಎಸ್ ಎಸ್, ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ, ಸೂರಜ್ ಕುಮಾರ್ ಎನ್, ಪ್ರಣವ್ ಪಿ ಸಂಜೀ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಉದ್ಭವ್ ಎಂ ಆರ್ PREP-ST ಯಲ್ಲಿ 3 ನೇ […]
ಕಾರ್ಕಳ: ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶುಭದರಾವ್

ಕಾರ್ಕಳ: ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ. ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ, ಬೇಳೆ, ಸಾಂಬಾರು ಹುಡಿ ಮತ್ತು ಮೊಟ್ಟೆ ಮೊದಲಾದ ಪೋಷಕಾಂಶದ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಂಬಾರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ […]
ಕಾರ್ಕಳ: ಜೂ. 21 ರಂದು ಶ್ರೀ ಕ್ಷೇತ್ರ ಅತ್ತೂರು ಪರ್ಪೆಲೆಗಿರಿಗೆ ಶಿಲಾಯಾತ್ರೆ

ಕಾರ್ಕಳ: ಕಲ್ಕುಡ ಸ-ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯ ಪುನರುತ್ಥಾನದ ನಿಮಿತ್ತ ಜೂ. 21 ರಂದು ಬೆಳಿಗ್ಗೆ 7:30 ಗಂಟೆಗೆ ಶಿಲಾಯಾತ್ರೆ ನಡೆಯಲಿದೆ. ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ಶಿಲಾಯಾತ್ರೆ ಅನಂತಶಯನ ಮಾರ್ಗವಾಗಿ ಗೊಮ್ಮಟ ಬೆಟ್ಟ, ಆನೆಕೆರೆ, ಶ್ರೀ ಕೃಷ್ಣ ದೇವಸ್ಥಾನ, ಬಾಲಾಜಿ ಅಯ್ಯಪ್ಪ ಶಿಬಿರ, ದೂಪದಕಟ್ಟೆಯಿಂದ ಅತ್ತೂರು ಪರ್ಪಲೆಗಿರಿಗೆ ತಲುಪಲಿದೆ. ನಂತರ 10 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶಿಲಾಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಕಾರ್ಕಳ: ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನಡೆದ ವಿದ್ಯಾರ್ಥಿವೇತನ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ದಾಖಲಾತಿಯ ಶೇ10 ರಷ್ಟು ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ಪ್ರಥಮ ಪಿಯುಸಿ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿಗೆ ದಾಖಲಾದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಹತಾ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ […]
ಆಗುಂಬೆ ಘಾಟ್ ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯೇಟಿವ್ ಹಾಗೂ ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳು ಭಾಗಿ

ಕಾರ್ಕಳ: ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು “ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ತಿಂದು ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅವುಗಳ ಜೀವನ ಅಪಾಯದಲ್ಲಿದೆ. ಆದ್ದರಿಂದ ನಾವು ಪ್ರಕೃತಿಯನ್ನು […]