ಧಾರಾವಾಹಿಯಲ್ಲಿ ದೈವಾರಾಧನೆಯ ದೃಶ್ಯ: ಪ್ರಕರಣ ದಾಖಲಿಸಲು ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಒತ್ತಾಯ

ಮಂಗಳೂರು: ತುಳುನಾಡಿನ ಕಟ್ಟುಕಟ್ಟಳೆಯಾದ ದೈವಾರಾಧನೆಯ ಹಿನ್ನೆಲೆಯಿರುವ ಚಿತ್ರಗಳು, ಕಿರುಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿದ್ದು ಇದೀಗ ಧಾರಾವಾಹಿಯಲ್ಲೂ ದೈವಾರಾಧನೆಯ ದೃಶ್ಯಗಳನ್ನು ಅಳವಡಿಸಿಕೊಂಡಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ರೀಲಿಸ್ ಆಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದೆ. ಇದಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ […]

ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ಗಾಯಕ ಸಾಯಿ ವಿಘ್ನೇಶ್ ಕೃಷ್ಣ ಮಠ ಭೇಟಿ

ಉಡುಪಿ: ಬಹು ಚರ್ಚಿತ ಕಾಂತರ ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ ಹಾಡಿನ ಮೂಲಕ ಮನೆಮಾತಾಗಿರುವ ಸುಮಧುರ ಕಂಠದ ಗಾಯಕ ಸಾಯಿ ವಿಘ್ನೇಶ್ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ವೇಳೆ ಇಲ್ಲಿನ ಶ್ರೀಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ದರ್ಶನದ ಬಳಿಕ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಸುಶ್ರೀಂದ್ರ ತೀರ್ಥರ ಸಮ್ಮುಖದಲ್ಲಿ ವರಾಹ ರೂಪಂ ಹಾಡು ಹಾಡಿದರು. ವಿಘ್ನೇಶ್ ಅವರ ಹಾಡು ಕೇಳಿ ಶ್ರೀಪಾದರು ಸಂತೋಷ ವ್ಯಕ್ತಪಡಿಸಿದರು. ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು […]

ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು

ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಆಯ್ಕೆ

  ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2023- ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಆಯ್ಕೆಯಾಗಿದ್ದಾರೆ. ರಿಷಬ್ ಅವರು ಫೆ.20ರಂದು ಮುಂಬೈನ ತಾಜ್ ಲ್ಯಾಂಡ್ ಎಂಡ್ ಹೋಟೆಲ್‌ನಲ್ಲಿ ಪ್ರಶಸ್ತಿ ಯನ್ನು ಸ್ವೀಕರಿಸಲಿದ್ದಾರೆ.  

ಕಾಂತಾರದಿಂದ ರಾಜ್ಯದ ಶ್ರೀಮಂತ ಸಂಪ್ರದಾಯಗಳ ಪರಿಚಯ: ಅಮಿತ್ ಶಾ

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ತುಳುನಾಡಿನ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಭಾಗವಹಿಸಿದ್ದು, ತುಳುನಾಡಿನ ಸಂಸ್ಕೃತಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವಿಶ್ವದಾದ್ಯಂತ ಜನಮನ್ನಣೆ ಪಡೆದ ಕಾಂತಾರ ಚಲನಚಿತ್ರವನ್ನು ಹೊಗಳಿದ್ದಾರೆ. ಕಾಂತಾರನನ್ನು ಈಗಷ್ಟೇ ನೋಡಿದ್ದೇನೆ. ಕಾಂತಾರರನ್ನು ನೋಡಿದ ನಂತರ ಈ ರಾಜ್ಯವು ಅಂತಹ ಶ್ರೀಮಂತ ಸಂಪ್ರದಾಯಗಳಿಂದ ಕೂಡಿದೆ ಎಂದು ನನಗೆ ತಿಳಿಯಿತು. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಬೇಸಾಯ ಮಾಡುವ ಮೂಲಕ ದೇಶವನ್ನು ಸುಭಿಕ್ಷ ಮಾಡುವ ಪ್ರದೇಶಗಳು ದೇಶದಲ್ಲಿ ವಿರಳ ಎಂದು ಅವರು ಹೇಳಿದ್ದಾರೆ. ಈ […]