10ನೇ ವರ್ಷದ ಕಕ್ಯೆಪದವು ಸತ್ಯ – ಧರ್ಮ ಜೋಡುಕರೆ ಕಂಬಳ ಕೂಟದ ಫಲಿತಾಂಶ

10ನೇ ವರ್ಷದ ಕಕ್ಯೆಪದವು ಸತ್ಯ – ಧರ್ಮ ಜೋಡುಕರೆ ಕಂಬಳ ಕೂಟದ ಫಲಿತಾಂಶ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 02 ಜೊತೆ ಅಡ್ಡಹಲಗೆ: 09 ಜೊತೆ ಹಗ್ಗ ಹಿರಿಯ: 19 ಜೊತೆ ನೇಗಿಲು ಹಿರಿಯ: 31 ಜೊತೆ ಹಗ್ಗ ಕಿರಿಯ: 26 ಜೊತೆ ನೇಗಿಲು ಕಿರಿಯ: 75 ಜೊತೆ ನೇಗಿಲು ಸಬ್ ಜೂನಿಯರ್: 52 ಒಟ್ಟು ಕೋಣಗಳ ಸಂಖ್ಯೆ: 214 ಜೊತೆ ಕನೆಹಲಗೆ: (ಸಮಾನ ಬಹುಮಾನ) ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: […]

ಕಂಬಳ ಕ್ಷೇತ್ರದ ಸಾಧಕ ಇರುವೈಲು ಪಾಣಿಲ ಬಾಡ ಪೂಜಾರಿ ವಿಧಿವಶ

ಮಂಗಳೂರು: ಕಂಬಳ ಕ್ಷೇತ್ರದ ಸಾಧಕ ಯಜಮಾನರಾದ ಇರುವೈಲು ಪಾಣಿಲ ಬಾಡ ಪೂಜಾರಿಯವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನಿಕೆಯ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದವು. ಇವರ ಯಜಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಅಶ್ವಥಪುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಬಾಡ ಪೂಜಾರಿಯವರ ಕೋಣಗಳು ಅನೇಕ ಪದಕಗಳನ್ನು ಹಾಗೂ ದಾಖಲೆಗಳನ್ನು ನಿರ್ಮಿಸಿದ್ದವು.

2022-23 ನೇ ಸಾಲಿನ ಕಂಬಳ ವೇಳಾಪಟ್ಟಿ

ಉಡುಪಿ/ ಮಂಗಳೂರು: 2022-23ರ ನವೆಂಬರ್ 5 ರಿಂದ ಏಪ್ರಿಲ್ 8 ರ ವರೆಗೆ ಒಟ್ಟು 23 ಕಂಬಳಗಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ. ನವೆಂಬರ್.5 -ಶಿರ್ವ ನ.12- ಪಿಲಿಕುಳ ನ.19-ಪಜೀರ್ ನ-26-ಕಕ್ಯಪದವು ಡಿಸೆಂಬರ್.3-ವೇಣೂರು ಡಿ.10-ಬಾರಾಡಿ ಬೀಡು ಡಿ.17-ಹೊಕ್ಕಾಡಿಗೋಳಿ ಡಿ.24- ಮೂಡಬಿದ್ರೆ ಡಿ.31-ಮೂಲ್ಕಿ ಜನವರಿ.14-ಅಡ್ವೆ ನಂದಿಕೂರು ಜ.21-ಮಂಗಳೂರು, ಬಂಗ್ರಕೂಳೂರು ಜ.28-ಐಕಳ ಬಾವ ಫೆಬ್ರವರಿ.4-ಪುತ್ತೂರು ಫೆ.11- ಕಟಪಾಡಿ ಬೀಡು ಫೆ.18- ವಾಮಂಜೂರು ತಿರುವೈಲ್ ಫೆ. 25- ಜಪ್ಪು ಮಾರ್ಚ್. 4 -ಬಂಟ್ವಾಳ ನಾವೂರು ಮಾ.11-ಉಪ್ಪಿನಂಗಡಿ ಮಾ.18 ಬಂಗಾಡಿ ಮಾ.25-ಪೈವಳಿಕೆ […]

ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ- ಈ ವರ್ಷದ ಪ್ರಥಮ ಕಂಬಳಕ್ಕೆ ವೈಭವದ ಚಾಲನೆ

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿ  ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ  ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳ ಮತ್ತು ಈ ವರ್ಷದ ಪ್ರಥಮ ಕಂಬಳಕ್ಕೆ ಭಾನುವಾರ ಬೆಳಿಗ್ಗೆ ಅದ್ದೂರಿ ಚಾಲನೆ ನೀಡಲಾಯಿತು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ  ಉದ್ಘಾಟಿಸಿದರು. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಇಲ್ಲಿನ ಮುಜಿಲ್ನಾಯಿ ದೈವಸ್ಥಾನ ಜೊತೆಗೆ ವಿಶೇಷ ಧಾರ್ಮಿಕ ನಂಟು ಹೊಂದಿರುವ   […]

ಜ.26 ರಿಂದ ಐಕಳ ಕಾಂತಾಬಾರೆ– ಬೂದಾಬಾರೆ ಕಂಬಳ್ಳೋತ್ಸವ

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವ ಶನಿವಾರ ಬೆಳಿಗ್ಗೆ 11ಕ್ಕೆ ಐಕಳ ಮಂಜೊಟ್ಟಿ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅಂತರರಾಷ್ಟ್ರೀಯ ವಾಸ್ತು ಜೋತಿಷಿ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಲಿದ್ದು, ₹20 ಲಕ್ಷ ಅನುದಾನದ ಪ್ರೇಕ್ಷಕ ಗ್ಯಾಲರಿಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಭೂಮಿಪೂಜೆ ನೆರವೇರಿಸುವರು. ಕಂಬಳ ಕರೆಗಳನ್ನು ಯುಪಿಸಿಎಲ್‌ ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಉದ್ಘಾಟಿಸುವರು. ಐಕಳ ಬಾವ ಯಜಮಾನರಾದ ದೋಗಣ್ಣ ಸಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು. ಜನಪ್ರತಿನಿಧಿಗಳ ಸಹಿತ ಇತರ ಗಣ್ಯರು ಪಾಲ್ಗೊಳ್ಳುವರು. […]