ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ತುಳುನಾಡಿನ ಕಂಬಳ: 100ಕ್ಕೂ ಹೆಚ್ಚು ಕೋಣಗಳ ಪ್ರಯಾಣಕ್ಕೆ ಭರದ ಸಿದ್ದತೆ
ಮಂಗಳೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ‘ಕಂಬಳ’ದ ಅನಾವರಣವಾಗಲಿದ್ದು ಸುಮಾರು 100 ರಿಂದ 130 ಕೋಣಗಳು ಮಂಗಳೂರಿನಿಂದ ಮೆರವಣಿಗೆಯಲ್ಲಿ ಸಾಗಲಿವೆ ಎಂದು ಟಿಒಐ ವರದಿ ಮಾಡಿದೆ. ಶನಿವಾರದಂದು ಕಂಬಳದ ಕೋಣಗಳ ಮಾಲಕರೊಂದಿಗೆ ಪ್ರಾಥಮಿಕ ಸಭೆ ನಡೆಸಿದ ಬಳಿಕ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉಡುಪಿ ಮತ್ತು ದ.ಕ ಜಿಲ್ಲೆಗಳ ಜಿಲ್ಲಾ […]
ತುಳು ಕೂಟದ 50ನೇ ವರ್ಷಾಚರಣೆ: ಉದ್ಯಾನ ನಗರ ಬೆಂಗಳೂರಿನಲ್ಲಿ ಕಂಬಳದ ಕೋಣದ ಓಡಿಸಲು ಭರದ ಸಿದ್ದತೆ
ಬೆಂಗಳೂರು: ಬೆಂಗಳೂರು ತುಳು ಕೂಟದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜಿಸಲು ತಂಡ ಸಿದ್ಧವಾಗಿದೆ. ಕಂಬಳದ ಕೋಣಗಳನ್ನು ಓಡಿಸಲು ಸ್ಥಳದ ಅವಶ್ಯಕತೆ ಇದ್ದು ಇದಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕೋಣಗಳನ್ನು ಓಡಿಸಿ, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕೆರೆ […]
ಜಲ್ಲಿಕಟ್ಟು- ಕಂಬಳ-ಎತ್ತಿನ ಗಾಡಿ ಓಟಕ್ಕೆ ಅನುಮತಿ: ಸಾಂಸ್ಕೃತಿಕ ಪರಂಪರೆ ನ್ಯಾಯಾಂಗದ ಭಾಗವಾಗಬಾರದು ಎಂದ ಸುಪ್ರೀಂ ಕೋರ್ಟ್
ನವದೆಹಲಿ: ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, “ ಶಾಸಕಾಂಗವು ಇದನ್ನು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂಬ ದೃಷ್ಟಿಕೋನವನ್ನು ತೆಗೆದುಕೊಂಡಿದೆ ಆದ್ದರಿಂದ ನಾವು ಶಾಸಕಾಂಗದ ದೃಷ್ಟಿಕೋನವನ್ನು ಅಡ್ಡಿಪಡಿಸುವುದಿಲ್ಲ. ಸಂವಿಧಾನದ ಮುನ್ನುಡಿಯಲ್ಲಿ ಇದನ್ನು ತಮಿಳುನಾಡಿನ ಸಂಸ್ಕೃತಿ […]
ಕಟಪಾಡಿ ಕಂಬಳದಲ್ಲಿ ಪ್ರಥಮ ಸ್ಥಾನ ಪಡೆದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣ
ಕಟಪಾಡಿ: ಇತಿಹಾಸ ಪ್ರಸಿದ್ದ ಕಟಪಾಡಿ ಕಂಬಳದಲ್ಲಿ ಭಾಗವಹಿಸಿದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣವು ನೇಗಿಲ ಹಿರಿಯ ವಿಭಾಗದಲ್ಲಿ 84 ಜೋಡಿ ಕೋಣಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕೋಣವನ್ನು ರಾಜ್ಯ ಪ್ರಶಸ್ತಿ ವಿಜೇತ ಮಿಜಾರು ಅಶ್ವತ್ಥಪುರ ಶ್ರೀನಿವಾಸ್ ಗೌಡ ಓಡಿಸಿದ್ದು, ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಕಟಪಾಡಿ ಬೀಡು “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾoಶ
ಫೆ.25 ರಂದು ನಡೆದ ಕಟಪಾಡಿ ಬೀಡು ಮೂಡು ಪಡು ಜೋಡುಕರೆ ಕಂಬಳ ಕೂಟದ ಫಲಿತಾಂಶ ಇಂತಿದೆ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 05 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 28 ಜೊತೆ ಹಗ್ಗ ಕಿರಿಯ: 25 ಜೊತೆ ನೇಗಿಲು ಕಿರಿಯ: 84 ಜೊತೆ ಒಟ್ಟು ಕೋಣಗಳ ಸಂಖ್ಯೆ: 168 ಜೊತೆ ಕನೆಹಲಗೆ: ( ನೀರು ನೋಡಿ ಬಹುಮಾನ ) ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ […]