ಕಡಬ: ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಾಡಾನೆ ದಾಳಿ; ಪ್ರಯಾಣಿಕರು ಅಪಾಯದಿಂದ ಪಾರು

ಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಆಣಿಲ ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಯೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದಾಳಿ ಮಾಡಿ ವಾಹನಕ್ಕೆ ಹಾನಿ ಮಾಡಿರುವ ಘಟನೆ ವರದಿಯಾಗಿದೆ. ಮಾಹಿತಿಗಳ ಪ್ರಕಾರ ಘಟನೆ ಜೂನ್ 1 ರಂದು ತಡರಾತ್ರಿ ನಡೆದಿದೆ. ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಪುತ್ತೂರು, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು ಎನ್ನಲಾಗಿದೆ. ಆಣಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡ ಬಸ್ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ಆನೆ ಬಸ್ಸಿನ ಎಡಭಾಗಕ್ಕೆ ಗುದ್ದಿ ಹಾನಿ ಮಾಡಿದೆ. ಅದೃಷ್ಟವಶಾತ್ […]

ಕಡಬ: ಆಲ್ಟೋ ಕಾರು- ಜೀಪ್ ಮುಖಾಮುಖಿ ಡಿಕ್ಕಿ: ನಾಲ್ವರ ಸಾವು; ಹಲವರಿಗೆ ಗಾಯ

ಕಡಬ: ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ನೆಟ್ಟಣ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಎರಡು ವಾಹನಗಳಲ್ಲಿ ಒಟ್ಟು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಹಾಸನದ ಬೇಲೂರು ತಾಲೂಕಿನ ಟಗರೆ ಮತ್ತು ಚಂದನಹಳ್ಳಿ ನಿವಾಸಿಗಳಾದ ಉಲ್ಲಾಸ್ (28), ಗಣೇಶ್ (26), ತನ್ವಿಕ್ (4) ಮತ್ತು ನೇತ್ರಾವತಿ (28) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆಲ್ಟೋ ಕಾರು ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರು […]

ನ.27 ರಿಂದ 30 ರವರೆಗೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

ಕಡಬ: ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ 30 ರವರೆಗೆ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ-2022 ಜರುಗಲಿದೆ. ಉತ್ಸವದ ವಿವರಗಳು: ನ.27 ಆದಿತ್ಯವಾರದಂದು ರಾತ್ರಿ ಹೂವಿನ ತೇರಿನ ಉತ್ಸವ, ನ.28 ಸೋಮವಾರದಂದು ರಾತ್ರಿ ಪಂಚಮಿ ರಥೋತ್ಸವ ಮತ್ತು ತೈಲ್ಯಾಭ್ಯಂಜನ, ನ.29 ಮಂಗಳವಾರದಂದು ಚಂಪಾಷಷ್ಠಿ ಮಹಾರಥೋತ್ಸವ, ನ.30 ಬುಧವಾರದಂದು ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ನ. 27 ಮತ್ತು 28 ರಂದು ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಹಾಗೂ ನ.29 ರಂದು ಮಧ್ಯಾಹ್ನ […]

ಕಡಬ: ಬೆಡ್ ಶೀಟ್ ಮಾರಾಟಗಾರರಿಂದ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನ

ಕಡಬ: ಬೆಡ್ ಶೀಟ್ ಮಾರಾಟಗಾರರ ಸೋಗಿನಲ್ಲಿ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಮನೆಯಲ್ಲಿದ್ದ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ. ರಫೀಕ್ ಹಾಗೂ ರಮೀಝುದ್ದೀನ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಬೆಡ್ ಶೀಟ್ ಮಾರಾಟ ಮಾಡಲು ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿಗೆ ಬಂದಿದ್ದು, ಆ ಸಂದರ್ಭ ಆರೋಪಿಗಳು ಮಹಿಳೆಯ ಮೈಮೇಲೆ ಕೈ ಹಾಕಿ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಂದಿಗ್ದ ಸನ್ನಿವೇಶದಲ್ಲಿ ಅಪಾಯವನ್ನರಿತು ಮಹಿಳೆಯು ಬೊಬ್ಬೆ ಹಾಕಿದ್ದು, ಇದರಿಂದ ಹೆದರಿದ ಆರೋಪಿಗಳು ಸ್ಥಳದಿಂದ […]

ಮಂಗಳೂರು: ಕಾರುಗಳೆರಡರ ಮಧ್ಯೆ ಢಿಕ್ಕಿ, ಎಂಟು ಮಂದಿಗೆ ಗಾಯ

ಮಂಗಳೂರು: ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬದಲ್ಲಿ ಕಾರುಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಎಂಟು ಮಂದಿ‌ ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ. ಕಾರಿನಲ್ಲಿದ್ದ ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕಾರು ಹಾಗೂ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಮತ್ತೊಂದು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.