ಕಾಂತಾರ ದೈವನರ್ತಕ ನವೀನ್ ಬೊಂದೆಲ್ ಗೆ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ
ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂದೆಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ನವೀನ್ ಅವರಿಗೆ ಅವಕಾಶ ದೊರೆತಿದೆ. ನವೀನ್ ಬೊಂದೆಲ್ ಒಬ್ಬ ನಟ ಮತ್ತು ನಿರ್ದೇಶಕ. ಕಾಂತಾರ ಚಿತ್ರದಲ್ಲಿ ಕಾಣಿಸಿಳ್ಳುವುದಕ್ಕೂ ಮುನ್ನ ಅವರು ಹಲವಾರು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು […]
ಕಾಂತಾರ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡವುದು ಸಾಧ್ಯವಿಲ್ಲ: ರಿಷಭ್ ಶೆಟ್ಟಿ
ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವ ಕಾಂತಾರ ಚಿತ್ರವು ಚಿತ್ರರಂಗದ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಕಾಂತಾರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಇದು ತಾನಾಗಿಯೆ ಸಂಭವಿಸಿತು. ಸಿನಿಮಾಗೆ ಒಂದು ನಿರ್ದಿಷ್ಟ ಶಕ್ತಿಯಿದೆ ಮತ್ತು ಚಿತ್ರದಲ್ಲಿ ನಮ್ಮ ಸಂಸ್ಕೃತಿ ಮತ್ತು ಜನಪದದ ಬಗ್ಗೆ ಮಾತನಾಡಿದ್ದೇವೆ. ಹಾಗಾಗಿ, ದೇವರ ಆಶೀರ್ವಾದದಿಂದ ಚಿತ್ರವು ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಸಂಸ್ಕೃತಿ ಮತ್ತು ಜನಪದದ […]
ಹೊಂಬಾಳೆ ಫಿಲಮ್ಸ್ ನಿರ್ಮಾಣಗಳ ಪೈಕಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ: ಕೆ.ಜಿ.ಎಫ್ ದಾಖಲೆ ಧೂಳೀಪಟ!!
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ.. ಈ ರೀತಿಯಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ತಮಿಳು ಚಿತ್ರರಂಗದ ದಿಗ್ಗಜ ತಲೈವಾ ರಜನಿಕಾಂತ್ ಕೂಡಾ ಕಾಂತಾರ ಕಂಡು ತಮ್ಮ ಮೆಚ್ಚುಗೆ […]
ಕಾಸರಗೋಡು: ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ 69 ಗ್ರಾಮಸ್ಥರು!
ಕಾಸರಗೋಡು: ಎಲ್ಲೆಲ್ಲೂ ಕಾಂತಾರ ಮಾಯೆ ಆವರಿಸಿದೆ. ಹಳ್ಳಿ, ನಗರ, ದೇಶ, ಭಾಷೆಗಳ ಗಡಿಯನ್ನು ಮೀರಿ ಕಾಂತಾರ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ, ಮತ್ತು ಈಗಲೂ ತುಳುವ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಕುಂಟಮುಕ್ಕಲ ಗ್ರಾಮದ ಒಟ್ಟು 69 ಜನರು ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ. ಕಾಸರಗೋಡಿನ ಸಮೀಪದ ಚಿತ್ರಮಂದಿರದಲ್ಲಿ ಕಾಂತಾರವನ್ನು ವೀಕ್ಷಿಸಲು ಈ ಉತ್ಸಾಹಭರಿತ ಗ್ರಾಮಸ್ಥರ ಗುಂಪು ಒಂದೇ ಬಸ್ ಹತ್ತಿದೆ […]
ಇತಿಹಾಸ ಸೃಷ್ಟಿಸಿದ ಕಾಂತಾರ: 15 ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂ ಗಳಿಕೆ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾಗಳ ಪೈಕಿ ಕಾಂತಾರವೂ ಒಂದಾಗಿದ್ದು, ಸಿನಿಮಾವು 15 ದಿನಗಳಲ್ಲಿ ವಿಶ್ವದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಭಾರತದ ನಿವ್ವಳ ಸಂಗ್ರಹ 78.14 ಕೋಟಿ ರೂಗಳಾಗಿವೆ. ಇದಕ್ಕೂ ಮುಂಚೆ ಕನ್ನಡದ 5 ಚಲನಚಿತ್ರಗಳು ಈ ಇತಿಹಾಸ ನಿರ್ಮಿಸಿದ್ದು, ಕಾಂತಾರ ಸದ್ಯ 6 ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 1207 ಕೋಟಿ ರೂ ಗಳಿಸುವ ಮೂಲಕ ಹೊಂಬಾಳೆ ಬ್ಯಾನರ್ಸ್ ನ ಯಶ್ ಅಭಿನಯದ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಇದರ ಹಿಂದಿನ […]