ಕಾಂತಾರ-1 (ಪ್ರೀಕ್ವಲ್) ಚಿತ್ರೀಕರಣ ಆರಂಭ: ರಾಜನ ಪಾತ್ರಧಾರಿಗೆ ದೈವದ ಅಭಯ

ಕುಂದಾಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದ ಕಾಂತಾರ ಚಿತ್ರದ ಪ್ರೀಕ್ವಲ್ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಸದ್ದಿಲ್ಲದೇ ಕಾಂತಾರ 1 ಚಲನಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ ಎನ್ನಲಾಗಿದ್ದು, ಕುಂದಾಪುರದ ಕೆರಾಡಿಯಲ್ಲಿ ಹಾಕಿರುವ ಸೆಟ್ ನಲ್ಲೇ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾದಲ್ಲಿ ರಾಜನ ಪಾತ್ರವನ್ನು ಮಾಡುತ್ತಿರುವ ವಿನಯ್ ಬಿದ್ದಪ್ಪ ಪುತ್ತೂರಿನ ಕಲ್ಲುರ್ಟ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾರೆ. ಸಿನಿಮಾ ಕುರಿತಂತೆ ದೈವ ಅವರಿಗೆ ಅಭಯ ನೀಡಿದೆ ಎಂದು ವರದಿ ಹೇಳಿದೆ.

ಬಹುನಿರೀಕ್ಷಿತ ಕಾಂತಾರ-2 ಪ್ರೀಕ್ವಲ್ ನ ಪೋಸ್ಟರ್ ಬಿಡುಗಡೆ; ಶೀಘ್ರವೆ ಚಿತ್ರೀಕರಣ ಆರಂಭ…

ದೇಶ ವಿದೇಶಗಳಲ್ಲಿ ಖಾತಿ ಗಳಿಸಿದ ಕಾಂತಾರ-1 ರ ಪ್ರೀಕ್ವಲ್ ಕಾಂತಾರ-2ರ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ X ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರೀಕರಣ ಶೀಘ್ರವೆ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹೊಂಬಾಳೆ ಫಿಲಂಮ್ಸ್ ನ ಪ್ರಭಾಸ್-ಪ್ರಶಾಂತ್ ನೀಲ್-ಪೃಥ್ವಿರಾಜ್ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ ‘ಸಲಾರ್’ ಟೀಸರ್ ರಿಲೀಸ್

ಪ್ರಭಾಸ್ ನಟನೆ, ಹೊಂಬಾಳೆ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವನ್ನು 2020 ರಲ್ಲಿ ಘೋಷಿಸಲಾಯಿತಾದರೂ ಕೋವಿಡ್ ನಿಂದಾಗಿ ಚಿತ್ರ ನಿರ್ಮಾಣದ ಕೆಲಸವು ಹಿನ್ನಡೆಯನ್ನು ಅನುಭವಿಸಿತು. ಎರಡು ವರ್ಷಗಳ ಬಳಿಕ ಇದೀಗ ಮೊದಲನೆ ಬಾರಿಗೆ ಸಲಾರ್ ನ ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ 5.12 ಕ್ಕೆ ರಿಲೀಸ್ ಮಾಡಲಾಗಿದೆ. ಇತರ ಚಲನಚಿತ್ರ ನಿರ್ಮಾಪಕರು ಮಧ್ಯರಾತ್ರಿಯಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದರೆ, ಸಲಾರ್ ನಿರ್ಮಾಪಕರು ವಿಚಿತ್ರ ಸಮಯವನ್ನು ಆರಿಸಿಕೊಂಡರು. ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ […]

ದಾಖಲೆ ಬೆಲೆಗೆ ಮಾರಾಟವಾಯ್ತು ಬಾಕ್ಸ್ ಆಫೀಸ್ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ವಿದೇಶೀ ಹಕ್ಕು!

ಭಾರತೀಯ ಚಿತ್ರರಂಗದ ಬಾಹುಬಲಿ ಎಂದೇ ಖ್ಯಾತನಾಮ ಪ್ರಭಾಸ್, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹಾಗೂ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದುಮಾಡುತ್ತಿರುವ ವರದಿಗಳಾಗಿವೆ. ವರದಿಗಳನ್ನು ನಂಬುವುದಾದರೆ, ಸಲಾರ್‌ನ ವಿದೇಶಿ ಹಕ್ಕುಗಳು 90 ರಿಂದ100 ಕೋಟಿ ರೂ.ಗೆ ಮಾರಾಟವಾಗಿದೆ. ಈ ಅಂಕೆಯೊಂದಿಗೆ, ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಅತಿ ಹೆಚ್ಚು ವಿದೇಶಿ ಹಕ್ಕುಗಳ ಒಪ್ಪಂದ ಹೊಂದಿದ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. https://twitter.com/box0fficeindia/status/1642119837295194112?ref_src=twsrc%5Etfw%7Ctwcamp%5Etweetembed%7Ctwterm%5E1642119837295194112%7Ctwgr%5E91090cc57ea5e82f0daabbf964368ca74396f145%7Ctwcon%5Es1_&ref_url=https%3A%2F%2Fwww.indiatvnews.com%2Fentertainment%2Fregional-cinema%2Fprabhas-starrer-salaar-scripts-history-with-highest-overseas-rights-heres-what-we-know-latest-entertainment-news-2023-04-01-859614 ಪ್ರಭಾಸ್ ಅವರ […]

ಶತದಿನೋತ್ಸವ ಆಚರಿಸಿದ ಕಾಂತಾರ: ಅಂದು ಕಾಂತಾರದಲ್ಲಿ ಕೆರಾಡಿ; ಇಂದು ಕೆರಾಡಿಯಲ್ಲಿ ಕಾಂತಾರ

ತುಳುನಾಡಿನ ಸಂಸ್ಕೃತಿಯನ್ನು ಸಾರುವ ಕಾಂತಾರ ಚಲನಚಿತ್ರವು ಶತದಿನೋತ್ಸವವನ್ನು ಆಚರಿಸಿದೆ. ಈ ಬಗ್ಗೆ ಹೊಂಬಾಳೆ ಫಿಲಮ್ಸ್ ತನ್ನ ಸಂತಸವನ್ನು ಹಂಚಿಕೊಂಡಿದೆ. “ಬೆಳಕು ಆದರೆ ಇದು ಬೆಳಕಲ್ಲ100 ದಿನದ ದರ್ಶನ. ನಾವು ಯಾವಾಗಲೂ ಗೌರವಿಸುವ ಚಲನಚಿತ್ರವು ನಮ್ಮನ್ನು ನಮ್ಮ ಮೂಲಕ್ಕೆ ಮರಳಿ ಕರೆದೊಯ್ದು ನಮ್ಮ ಸಂಪ್ರದಾಯಗಳ ಬಗ್ಗೆ ವಿಸ್ಮಯ ಪಡುವಂತೆ ಮಾಡಿತು. ಇದನ್ನು ಮಾಡಿದ ಎಲ್ಲರಿಗೂ ವಂದನೆಗಳು” ಎಂದು ಹೊಂಬಾಳೆ ಟ್ಬೀಟ್ ಮಾಡಿದೆ. ಏತನ್ಮಧ್ಯೆ, ಯಾವ ಕೆರಾಡಿಯೆಂಬ ಹಳ್ಳಿಯಲ್ಲಿ ಕಾಂತಾರ ಚಲನಚಿತ್ರವನ್ನು ಚಿತ್ರೀಕರಿಸಲಾಯಿತೋ ಅಲ್ಲಿ ಜ.8 ಭಾನುವಾರದಂದು ಕಾಂತಾರ ಚಲನಚಿತ್ರ […]