ಕನ್ನಡ ಚಿತ್ರಗಳ ಪೋಷಕ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರದಿಂದ ಗಮನ ಸೆಳೆದಿದ್ದ ನಟ ಲಕ್ಷ್ಮಣ್ ಅವರು ಇಂದು (ಜನವರಿ 23) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಭಾನುವಾರ (ಜನವರಿ 22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೂ ದುರದೃಷ್ಟವಶಾತ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿಡಲಾಗಿದೆ. ಲಕ್ಷ್ಮಣ್ ವಿಷ್ಣುದಾದ ಜೊತೆ ಯಜಮಾನ, ಸೂರ್ಯವಂಶ ಸೇರಿದಂತೆ ಅಂಬರೀಷ್, ಶಂಕರ್ […]

ರಂಗಸ್ಥಳದಲ್ಲೇ ಪಯಣ ಮುಗಿಸಿದ ಕಲಾವಿದ: ಗುರುವಪ್ಪ ಬಾಯಾರು ಹೃದಯಾಘಾತದಿಂದ ನಿಧನ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ ಡಿ.22 ರಂದು ರಾತ್ರಿ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ಇಹಲೋಕದ ಪಯಣ ಮುಗಿಸಿದ್ದಾರೆ. ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟದ ತ್ರಿಜನ್ಮ ಮೋಕ್ಷ ಪ್ರಸಂಗ ನಡೆಯುತಿತ್ತು. ಬಾಯಾರು ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ರಂಗಸ್ಥಳದಿಂದ […]

ಹೃದಯ ಸ್ತಂಭನ ಸಮಯದಲ್ಲಿ ಸಿಪಿಆರ್ ನೀಡಿ ವ್ಯಕ್ತಿಯ ಜೀವ ಉಳಿಸಿ: ಸಿಪಿಆರ್ ನೀಡುವ ವಿಧಾನದ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳು ಸಾಮಾನ್ಯವೆಂಬಂತಾಗಿದ್ದು, ಬಾಳಿ ಬದುಕಬೇಕಾಗಿರುವ ಎಳೆ ಜೀವಗಳು ತರಗೆಲೆಗಳಂತೆ ಧರೆಗುರುಳುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ಹತ್ತಿರದಲ್ಲೇ ವ್ಯಕ್ತಿಗಳಿದ್ದರೂ ಈ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕುನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗಾಬರಿಯಾಗದೆ ಹೃದಯ ಸ್ತಂಭನವಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡಿದಲ್ಲಿ ವ್ಯಕ್ತಿಯ ಪ್ರಾಣ ಉಳಿಸಬಹುದು. ಸಿಪಿಆರ್ ಎಂದರೇನು ಮತ್ತು ನಾವು ಅದನ್ನು ಯಾವಾಗ ಬಳಸಬೇಕು? ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ವಿಧಾನವಾಗಿದ್ದು, ಉಸಿರಾಟ […]

ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತವಾಗಲು ಕಾರಣವೇನು? ನಿಮ್ಮ ಹೃದಯದ ದನಿ ಕೇಳಿಸಿಕೊಳ್ಳಿ…

ಇತ್ತೀಚೆಗೆ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಜಿಮ್ ನಲ್ಲಿ ಇತರ ರೀತಿಯ ತೀವ್ರವಾದ ವ್ಯಾಯಾಮವನ್ನು ಮಾಡುವಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚು ಕಂಡುಬರುತ್ತಿವೆ. ವ್ಯಾಯಾಮವು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ ಎಂದು ನಂಬಲಾಗುತ್ತಿದ್ದರೂ ಇದರಿಂದ ಪ್ರತಿಕೂಲ ಪರಿಣಾಮಗಳಾಗುತ್ತಿರುವುದು ಎಲ್ಲರನ್ನೂ ವ್ಯಾಯಾಮದ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ವ್ಯಾಯಮಕ್ಕೂ ಪೂರ್ವದ ಆರೋಗ್ಯ ಸ್ಥಿತಿಯ ನಿರ್ದಿಷ್ಟ ಸಂದರ್ಭಗಳು ಮತ್ತು ವ್ಯಾಯಾಮದ ತೀವ್ರತೆಯು ಸಂದರ್ಭಾನುಸಾರವಾಗಿ ಬದಲಾಗಬಹುದು. ಈ ಸ್ಪಷ್ಟ ವಿರೋಧಾಭಾಸವನ್ನು ವಿವರಿಸಲು ಸಹಾಯ ಮಾಡುವ ಕೆಲವು […]

ತಮಿಳು ನಟ ವಿಕ್ರಂ ಆಸ್ಪತ್ರೆಗೆ ದಾಖಲು: ಎದೆಯ ಅಸ್ವಸ್ಥತೆಗಾಗಿ ಚಿಕಿತ್ಸೆ

ಚೆನ್ನೈ: ಪ್ರಖ್ಯಾತ ತಮಿಳು ಚಿತ್ರ ನಟ ಚಿಯಾನ್ ವಿಕ್ರಂಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಟುಂಬ ನೀಡಿರುವ ಮಾಹಿತಿ ಪ್ರಕಾರ ವಿಕ್ರಂಗೆ ಲಘು ಹೃದಯಾಘಾತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯಾಧಿಕಾರಿಗಳು ವಿಕ್ರಂಗೆ ಚಿಕಿತ್ಸೆ ನೀಡುತ್ತಿದ್ದು, ಸಂಜೆಯೇ ಬಿಡುಗಡೆ ಹೊಂದುವ ಸಾಧ್ಯತೆಯೂ ಇದೆ ಎನ್ನಲಾಗಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ವಿಕ್ರಂ ಅವರ ಮ್ಯಾನೇಜರ್ ಸ್ಪಷ್ಟೀಕರಣ ನೀಡಿದ್ದಾರೆ. “ಚಿಯಾನ್ ವಿಕ್ರಮ್ ಅವರಿಗೆ […]