ಸಾಹಸಸಿಂಹ ಕನ್ನಡ ಚಿತ್ರ ರಸಿಕರ ನೆಚ್ಚಿನ ನಟ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ

ಮೈಸೂರು: ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕ ಭವನದ ಉದ್ಘಾಟನೆಯು ಭಾನುವಾರ ನಡೆಯಿತು. ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸ್ವಭಾವತಃ ಭಾವುಕ ಹಾಗೂ ಮಾನವೀಯತೆಯ ಗುಣಗಳುಳ್ಳ ಜೀವಿಯಾಗಿದ್ದ ವಿಷ್ಣುವರ್ಧನ್, ತೆರೆಯ ಮೇಲಿನ ಅವರ ಚಿತ್ರಗಳಲ್ಲಿಯೂ ಸಹ ಅದೇ ಗುಣಗಳುಳ್ಳ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮಾನವೀಯತೆಯ ಗುಣಗಳನ್ನು ತುಂಬಿದ್ದ ಯಜಮಾನರಾಗಿರಾದ್ದರು. ಅವರು ಸ್ಮಾರಕ ವಿಚಾರದಲ್ಲಿ ಹಲವಾರು ಅಡೆತಡೆಗಳು ಬಂದರೂ, ಕೊನೆಗೂ ವಿಷ್ಣುವರ್ಧನ್ ರವರ ಹುಟ್ಟೂರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು. […]

ಜನವರಿ 29ರಂದು ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಉದ್ಘಾಟನೆ

ಮೈಸೂರು: ಇಲ್ಲಿನ ಎಚ್​.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಡಾ.ವಿಷ್ಣುವರ್ಧನ್​ ಅವರ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಚಿತ್ರನಟ ಅನಿರುದ್ದ್ ಹೇಳಿದ್ದಾರೆ. ‘ಸಾಹಸ ಸಿಂಹ’ ಡಾ.ವಿಷ್ಣವರ್ಧನ್ ರವರ ಸ್ಮಾರಕದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲಿದ್ದಾರೆ.ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಅನಿರುದ್ಧ್ ಹೇಳಿದ್ದಾರೆ.

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಯವರ್ಧನ್ : ಎಸ್.ನಾರಾಯಣ್ ‘ಸೂರ್ಯವಂಶ’ ದಿಂದ ಮತ್ತೆ ಕಿರುತೆರೆಗೆ ಅನಿರುದ್ದ್

ಅಭಿಮಾನಿಗಳ ನೆಚ್ಚಿನ ಆರ್ಯವರ್ಧನ್ ಖ್ಯಾತಿಯ ಅನಿರುದ್ದ್ ಮತ್ತೆ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ರವರು ಅನಿರುದ್ದ್ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡಿ ಹೆಸರುಗಳಿಸಿರುವ ಎಸ್.ನಾರಾಯಣ್ ಉದಯ ಟಿವಿಗಾಗಿ “ಸೂರ್ಯವಂಶ” ಧಾರಾವಾಹಿಯನ್ನು ರಚಿಸಿ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ಡಾ. ವಿಷ್ಣುವರ್ಧನ್ ರವರು ನಟಿಸಿದ್ದ ಸೂರ್ಯವಂಶ ಹೆಸರಿನ ಧಾರಾವಾಹಿಯಲ್ಲಿ ಅನಿರುದ್ದ್ ನಟಿಸುತ್ತಿರುವುದು. ವಿಷ್ಣು ದಾದಾ ನಟಿಸಿದ್ದ ಸೂರ್ಯವಂಶ ಚಿತ್ರವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಅಳಿಯ ಅನಿರುದ್ದ್ […]

ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹೊಸ ಮನೆ ‘ವಲ್ಮೀಕ’ ದ ಅದ್ದೂರಿ ಗೃಹಪ್ರವೇಶ

ಬೆಂಗಳೂರು: ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿರುವ ಸಹೃದಯ ವ್ಯಕ್ತಿತ್ವದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹಪ್ರವೇಶ ಭಾನುವಾರದಂದು ಬಹಳ ಅದ್ದೂರಿಯಾಗಿ ನೆರವೇರಿದೆ. ಮನೆಯ ದ್ವಾರದಲ್ಲೇ ಸಿಂಹದ ಕಂಚಿನ ಪ್ರತಿಮೆ ವಿಷ್ಣುರವರಿಗೆ ಸಮರ್ಪಿತವಾಗಿದ್ದು ಎಲ್ಲರನ್ನೂ ಸ್ವಾಗತಿಸುತ್ತಿದೆ. ಮುಂಭಾಗದಲ್ಲಿ ಕೃಷ್ಣನ ಬೆಳ್ಳಿಯಿಂದ ಅಲಂಕೃತ ಮೂರ್ತಿಯನ್ನಿಡಲಾಗಿದೆ. ಜಯನಗರದ 4ನೇ ಟಿ ಬ್ಲಾಕ್ ನಲ್ಲಿ ನಿರ್ಮಾಣವಾಗಿರುವ ಈ ಮನೆಗೆ ‘ವಲ್ಮೀಕ’ ಎಂದು ಹೆಸರಿಡಲಾಗಿದೆ. ನೂತನ ಗೃಹದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಶುಭ ಹಾರೈಸಿದರು. ಹಾಗೆಯೇ […]