ಜನವರಿ 29ರಂದು ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ಉದ್ಘಾಟನೆ

ಮೈಸೂರು: ಇಲ್ಲಿನ ಎಚ್​.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಡಾ.ವಿಷ್ಣುವರ್ಧನ್​ ಅವರ ಸ್ಮಾರಕದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಚಿತ್ರನಟ ಅನಿರುದ್ದ್ ಹೇಳಿದ್ದಾರೆ.

‘ಸಾಹಸ ಸಿಂಹ’ ಡಾ.ವಿಷ್ಣವರ್ಧನ್ ರವರ ಸ್ಮಾರಕದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲಿದ್ದಾರೆ.ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಅನಿರುದ್ಧ್ ಹೇಳಿದ್ದಾರೆ.