ದೊಡ್ಡಣ್ಣಗುಡ್ಡೆ: ಏ. 6 ರಂದು ದುರ್ಗಾ ಆದಿಶಕ್ತಿ ಕ್ಷೇತ್ರ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆ ಉದ್ಯಾಪನಾ ಮಹೋತ್ಸವ

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತ ಕಲ್ಪೋಕ್ತ ಪೂಜೆಯ ಉದ್ಯಾಪನಾ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಏ. 6 ಗುರುವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಳ್ಳಲಿರುವುದು. ಆ ಪ್ರಯುಕ್ತ ಕ್ಷೇತ್ರದಲ್ಲಿ ಏ. 5 ರಂದು ಗಂಟೆ 5 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಋತ್ವಿಜರ ಸ್ವಾಗತ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ […]

ದೊಡ್ಡಣ್ಣಗುಡ್ಡೆ: ಏಪ್ರಿಲ್ 3 ರಂದು ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಾಗ ತನು ತರ್ಪಣ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಪ್ರಿಲ್ 3ರಂದು ನಾಗ ತನು ತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ. ಆ ಪ್ರಯುಕ್ತ ಕ್ಷೇತ್ರದ ನಾಗಾಲಯದಲ್ಲಿ ಬೆಳಿಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾ ಅಭಿಷೇಕ, ಸುಬ್ರಹ್ಮಣ್ಯ ದೇವರಿಗೆ ಪವಮಾನ ಕಲಶಾಭಿಷೇಕ, ಪ್ರಸನ್ನ ಪೂಜೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿರುವುದು. ಸಮಸ್ತ ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ್ತ ಪೂರ್ವಕವಾಗಿ ನೆರವೇರಲಿರುವ ಈ […]

ನಿಷೇಧಿತ ಪ್ಲಾಸ್ಟಿಕ್ ಮಾರಾಟ: 75 ಕೆ.ಜಿ ವಶ; ದಂಡ ವಸೂಲಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆ ಬಳಿ ಅಂಗಡಿಗಳಿಗೆ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನ ವಾಹನದ ಮೇಲೆ ಬುಧವಾರದಂದು ನಗರಸಭೆ ಆರೋಗ್ಯ ಶಾಖೆಯ ಅಧಿಕಾರಿಗಳು ದಾಳಿ ನಡೆಸಿ, 75 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 5000 ರೂ. ದಂಡ ವಿಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು ಕಂಡು ಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗುವುದು. ಪ್ಲಾಸ್ಟಿಕ್ […]

ನ.23 ರಂದು ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರದಲ್ಲಿ ಏಕಕಾಲದಲ್ಲಿ ಪಂಚದಶ ದುರ್ಗಾನಮಸ್ಕಾರ ಪೂಜೆ

ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನ.23 ರಂದು ಸಂಜೆ ಪಂಚದಶ ದುರ್ಗಾ ನಮಸ್ಕಾರ ಪೂಜೆ ಮತ್ತು ರಂಗಪೂಜೆ ದೀಪೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದ್ದು, ರಾತಿ ಅನ್ನಸಂತರ್ಪಣೆ ನಡೆಯಲಿದೆ. 15 ಎಂದರೆ (1+5=6) ಇದು ಲಕ್ಷ್ಮಿಯ ಸಂಕೇತ. ಲೋಕ ಕಲ್ಯಾಣ ಮತ್ತು ಭಕ್ತರಿಗಾಗಿ ಆಯೋಜಿಸಿರುವ ಈ ಪೂಜೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಉದ್ಯೋಗಾಂಕ್ಷಿಗಳು ಪಾಲ್ಗೊಂಡು ದೇವಿಯ ಅನುಗ್ರಹ ಪಡೆಯಬಹುದು. ಕಾರ್ತಿಕ ಮಾಸದಲ್ಲಿ ಒಂದು […]

ತೋಟಗಾರಿಕಾ ಆಸಕ್ತರ ಗಮನ ಸೆಳೆಯುತ್ತಿದೆ ರಂಗುಬಿರಂಗಿ ಹೂಗಿಡಗಳ ಸಸ್ಯಸಂತೆ

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನ.5 ರಿಂದ 7 ರ ವರೆಗೆ ನಡೆಯುವ ಸಸ್ಯಸಂತೆ ಕಾರ್ಯಕ್ರಮದಲ್ಲಿ 40 ಕ್ಕೂ ಅಧಿಕ ಜಾತಿಯ ಅಲಂಕಾರಿಕಾ ಸಸ್ಯಗಳು, 15 ಕ್ಕೂ ಅಧಿಕ ಜಾತಿಯ ಹಣ್ಣಿನ ಸಸ್ಯಗಳು, ತೆಂಗು, ಕಾಳು ಮೆಣಸಿನ ಸಸಿಗಳು, 50 ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣಿನ ಬೀಜಗಳ ಮಾರಾಟ ಕೃಷಿ ಮತ್ತು ತೋಟಗಾರಿಕಾ ಆಸಕ್ತರನ್ನು ಗಮನ ಸೆಳೆಯುತ್ತಿದೆ. ತೋಟಗಾರಿಕಾ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಲ್ಲಿ ಬೆಳೆಸಿರುವ […]