ದೊಡ್ಡಣ್ಣಗುಡ್ಡೆ ಪ್ರಜ್ಞಾಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿಯವರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಪ್ಪತ್ತೈದನೇ ಸ್ವಾತ್ಯಂತ್ರ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಜ್ಞಾ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ನ್ಯಾಯವಾದಿ ಯು. ಬಾಲ ಸುಬ್ರಹ್ಮಣ್ಯ ರಾವ್ ಅವರ ಅಧ್ಯಕ್ಷತೆ ವಹಿಸಿದ್ದರು. ಮಣೂರು ನಾರಾಯಣ ಖಾರ್ವಿ ಅವರು ಧ್ವಜಾರೋಹಣ ಮಾಡಿ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಯುವ ಪೀಳಿಗೆಗೆ ಸಂದರ್ಭೋಚಿತವಾದ ಸಲಹೆಯನ್ನು ನೀಡಿ […]
ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕೋಟಿ ಗೀತಾಲೇಖನ ಯಜ್ಞ ಅಭಿಯಾನಕ್ಕೆ ಚಾಲನೆ

ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಜಾಗತಿಕ ಮಟ್ಟದ ಆಧ್ಯಾತ್ಮಿಕ ಆಂದೋಲನ ಕೋಟಿ ಗೀತಾಲೇಖನ ಯಜ್ಞ ಸ೦ಕಲ್ಪ ಅಭಿಯಾನವು ಕ್ಷೇತ್ರದ ಧರ್ಮದರ್ಶಿ ಶ್ರೀರಮಾನಂದ ಗುರೂಜಿ ಲೇಖನ ದೀಕ್ಷ ಬದ್ಧರಾಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀ ಚಕ್ರಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗುರೂಜಿಯವರು, ಶ್ರೀಕೃಷ್ಣ ಪರಮಾತ್ಮನ ಮುಖಕಮಲದಿಂದ ಹೊರಹೊಮ್ಮಿದ ಭಗವಾನ್ ಶ್ರೀ ವೇದವ್ಯಾಸರಿಂದ ರಚಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯನ್ನು […]
ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆ ಶುಕ್ರವಾರದ ಅಲಂಕಾರದಲ್ಲಿ ದುರ್ಗಾ ಆದಿಶಕ್ತಿ ದೇವಿ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿ ಅಲಂಕಾರ ನಾಗನ ಸನ್ನಿಧಿಯಲ್ಲಿ ನಡೆದ ಆಶ್ಲೇಷ ಬಲಿ ಶ್ರೀ ಮಠಾಧೀಶರ ಪರ್ಯಾಯದಲ್ಲಿ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞಕ್ಕೆ ಚಾಲನೆ ನೀಡಲಾಯಿತು. ಆಟಿಡೊಂಜಿ ದಿನದ ಖಾದ್ಯಗಳು
ದೊಡ್ಡಣಗುಡ್ಡೆ: ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರ ಶೀಚಕ್ರ ಮಂಡಲ ಪೂಜೆ ಸಂಪನ್ನ

ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ದಂಪತಿ ಸೇವಾರ್ಥವಾಗಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಂಡಿತು. ಪ್ರಾತಃಕಾಲ ಶ್ರೀ ನಾರಿಕೇಳ ಗಣಯಾಗದೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಇವರು, ದೀಪ ಪ್ರಜ್ವಲಿಸಿ ಪಂಚವರ್ಣದಿಂದ ಕೂಡಿದ ಬಿಂದುವನ್ನಿರಿಸಿ ಶ್ರೀಚಕ್ರಮಂಡಲ ರಚನೆಗೆ ಚಾಲನೆ ನೀಡಿದರು. ವಿಶೇಷವಾಗಿ ಅಲಂಕರಿಸಿದ ಮಂಟಪದೊಳಗೆ ಶ್ರೀಚಕ್ರ ಯಂತ್ರ ರಚನೆ ಮಾಡಿ ಶ್ರೀ ರಾಜರಾಜೇಶ್ವರಿಯನ್ನು ವಿವಿಧ ಪುಷ್ಪಗಳಿಂದ ಅರ್ಚಿಸಿ, […]
ಎಸ್.ಸಿ.ಡಿ.ಸಿ.ಸಿ ಮೊದಲ ಮೊಬೈಲ್ ಬ್ಯಾಂಕ್ ಘಟಕ ದೊಡ್ಡಣಗುಡ್ಡೆಯಲ್ಲಿ ಕಾರ್ಯಾರಂಭ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯಲ್ಲಿ ದೇಶದ ಬ್ಯಾಂಕಿಂಗ್ ಇತಿಹಾಸದಲ್ಲಿಯೇ ಪ್ರಥಮ ಆವಿಷ್ಕಾರವಾದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನಿಂದ ಪರಿಚಯಿಸಲ್ಪಟ್ಟ ಮೊಬೈಲ್ ಬ್ಯಾಂಕ್ ಘಟಕ ಕಾರ್ಯಾರಂಭಿಸಿದೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಬ್ಯಾಂಕಿನ ಸಾಧನೆ ಮತ್ತು ಮೊಬೈಲ್ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಮೊಬೈಲ್ ಬ್ಯಾಂಕಿನ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಉಡುಪಿ ಲೀಡ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಪಿ. ಎಂ. ಪಿಂಜಾರ್ , ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಗ್ರಾಹಕ […]