ದೊಡ್ಡಣ್ಣಗುಡ್ಡೆ: ಮೇ. 3 ರಿಂದ 6 ರವರೆಗೆ ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರದ ನಾಗಾಲಯದಲ್ಲಿ ನಾಗದೇವರ ಪುನರ್ ಪ್ರತಿಷ್ಠೆ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.3 ರಿಂದ 6 ರವರೆಗೆ ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಶ್ರೀ ಕಾಲಭೈರವ ಬಿಂಬ ಪ್ರತಿಷ್ಠಾಪನೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಮಹಾಚಂಡಿಕಾಯಾಗ, ನಿರಂತರ ಮಹಾ ಅನ್ನಸಂತರ್ಪಣೆಯು ಜರುಗಲಿದ್ದು ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿಗಳು ತಿಳಿಸಿದ್ದಾರೆ.
ದೊಡ್ಡಣ್ಣಗುಡ್ಡೆ: ಮೇ. 4 ರಂದು ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವೀಕೃತ ನಾಗಾಲಯದ ಪುನ: ಪ್ರತಿಷ್ಠಾ ಮಹೋತ್ಸವ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನ: ಪ್ರತಿಷ್ಠೆ ಮೇ 4 ರಂದು ನೆರವೇರಲಿದೆ. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಆ ಪ್ರಯುಕ್ತ ಮೇ 3ರ ಸಂಜೆ ಗಂಟೆ 5 ರಿಂದ ತೋರಣ ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆ, ಸಪರಿವಾರ ನಾಗ ಬಿಂಬ, ಆದಿ ವಾಸ ಪ್ರಕ್ರಿಯೆ, ಮೇ 4ರ […]
ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಾಗ ಸಂಕೋಚ ಪ್ರಕ್ರಿಯೆ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗ ಬಿಂಬ ಸಂಕೋಚ ಪ್ರಕ್ರಿಯೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ನಾಗ ಬಿಂಬ ಸಂಕೋಚದ ಜೊತೆಗೆ ಬ್ರಹ್ಮಲಿಂಗೇಶ್ವರ ರಕ್ತೇಶ್ವರಿ, ನಂದಿಕೋಣ ಕ್ಷೇತ್ರಪಾಲ, ಸಂಕೋಚ ಪ್ರಕ್ರಿಯೆಯು ನೆರವೇರಿ ಶಿಲಾ ಬಿಂಬಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿದ ಬಾಲಾಲಯದಲ್ಲಿ ಇರಿಸಲಾಯಿತು. ಆ ಪ್ರಯುಕ್ತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಸಂಪನ್ನಗೊಂಡವು. ನವೀಕೃತ ನಾಗಾಲಯದ ನೂತನ ಆರೂಢದಲ್ಲಿ ಸಪರಿವಾರ ಸಹಿತವಾಗಿ ನಾಗಶಿಲಾ […]
ದೊಡ್ಡಣ್ಣಗುಡ್ಡೆ: ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿಕ್ಷೇತ್ರ ಕುಬೇರ ಲಕ್ಷ್ಮಿ ಪ್ರತಿಷ್ಠ ವರ್ಧಂತಿ ಸಂಪನ್ನ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದ ಪ್ರಥಮ ಪ್ರತಿಷ್ಠ ವಾರ್ಷಿಕ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು. ಆ ಪ್ರಯುಕ್ತ ಕ್ಷೇತ್ರದಲ್ಲಿ ಕಪಿಲ ಮಹರ್ಷಿಗಳ ಸನ್ನಿದಾನದಲ್ಲಿ ಸ್ನಪನ ಕಳಶಾಭಿಷೇಕ, ಕುಬೇರ ಲಕ್ಷ್ಮಿ ಸನ್ನಿಧಿಯಲ್ಲಿ ಲಕ್ಷ್ಮಿ ಸಹಸ್ರನಾಮ, ಪಾಯಸ ಹೋಮ, ಕುಬೇರ ಮಂತ್ರ ಹೋಮ, ಪಂಚವಂಶತಿ ಕಲಶ ಅಭಿಷೇಕ ನೆರವೇರಿತು. ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ […]
ದೊಡ್ಡಣ್ಣಗುಡ್ಡೆ: ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸತ್ಯನಾರಾಯಣ ಕಥೆ ಉದ್ಯಾಪನಾ ಮಹೋತ್ಸವ

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತಕಥ ಪೂಜೆಯ ಉದ್ಯಾಪನ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಭಕ್ತರ ಸಮಕ್ಷಮದಲ್ಲಿ ನಿರಂತರ ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು. ಏಪ್ರಿಲ್ 6 ರಂದು ಹುಣ್ಣಿಮೆಯ ಪರ್ವಕಾಲದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ವಿಶೇಷ ಗುರುಪೂಜೆ ಸಲ್ಲಿಸಿ ಆದ್ಯ ಗಣಪತಿಯಾಗ, ಉದ್ಯಾಪನ ಮಹಾಯಾಗ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು. […]