ದೊಡ್ಡಣ್ಣಗುಡ್ಡೆ: ಸೆ. 1 ರಂದು ದುರ್ಗಾ ಆದಿಶಕ್ತಿ ದೇವಿಗೆ ಗಾಜಿನ ಬಳೆಗಳ ಅಲಂಕಾರ

ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾದಿಶಕ್ತಿ ದೇವಿ ಕ್ಷೇತ್ರದಲ್ಲಿ ಸೆ. 1 ಶುಕ್ರವಾರದಂದು ಶ್ರೀ ಚಕ್ರ ಪೀಠ ಸುರಪೂಜಿತೆ ದೇವಿಯನ್ನು ಗಾಜಿನ ಬಳೆಗಳಿಂದ ವಿಶೇಷವಾಗಿ ಅಲಂಕೃತಗೊಳಿಸಿ ಪೂಜಿಸಲಾಗುವುದು. ಕಳೆದ ವರ್ಷ ಒಂದು ಲಕ್ಷಕ್ಕಿಂತಲೂ ಅಧಿಕ ಗಾಜಿನ ಬಳೆಗಳು ಭಕ್ತರಿಂದ ಸೇವಾ ರೂಪದಲ್ಲಿ ಹರಿದು ಬಂದಿತ್ತು. ಈ ಬಾರಿಯೂ ಸೋನೆ ತಿಂಗಳ ಈ ವಿಶೇಷ ಅಲಂಕಾರಕ್ಕೆ ಬಳೆಗಳನ್ನು ಅಥವಾ ಹಣವನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ಇವರನ್ನು ಮೊಬೈಲ್ ಸಂಖ್ಯೆ 9342749650 ಸಂಪರ್ಕಿಸಬಹುದು ಎಂದು ಕ್ಷೇತ್ರದ […]

ನಾಳೆ ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಟಿಯ ಊಟ

ಉಡುಪಿ: ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಾಳೆ ಆ. 4 ಶುಕ್ರವಾರದಂದು ಮಧ್ಯಾಹ್ನ ಶ್ರೀ ಕ್ಷೇತ್ರದ ಅನ್ನಸಂತರ್ಪಣೆಯು ಆಟಿ ತಿಂಗಳ ವಿಶೇಷ ಖಾದ್ಯವನ್ನು ಒಳಗೊಂಡಿದ್ದು, ಆಟಿಯ ಊಟವಾಗಲಿದೆ. ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಲು ದೇವಳದ ಪ್ರಕಟಣೆ ತಿಳಿಸಿದೆ.

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಿಂದ ಮುಂಬೈ ಭೇಟಿ

ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಇದೇ ತಿಂಗಳ ಜುಲೈ 22 ಭಾನುವಾರದಿಂದ ತಾರೀಕು 25ರ ಮಂಗಳವಾರ ತನಕ ಮುಂಬೈಯ ದಾದರ್(ಪೂರ್ವ) ಪರಿಸರದಲ್ಲಿ ಭಕ್ತರ ಬೇಟಿಗೆ ಲಭ್ಯರಿರುತ್ತಾರೆ. ನಂತರ ಹೈದರಾಬಾದ್ ನಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಿ ಅನುಗ್ರಹಿತ ಭಕ್ತನಾಗಿ ತನ್ನ ಸೂಕ್ತ ಮಾರ್ಗದರ್ಶನದಿಂದ ಪರಿಹಾರ ಸೂಚಿಸಿ, ಸಂಕಷ್ಟಕ್ಕೆ ಒಳಗಾದವರ ಸಂಕಷ್ಟ ನಿವಾರಿಸಿ ಭಕ್ತ ಜನರ ಮಾತನಾಡುವ ಶಕ್ತಿ ಎನಿಸಿದ ಶ್ರೀ ಗುರೂಜಿಯವರ […]

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಲಲಿತ ಮಹಾ ತ್ರಿಪುರಸುಂದರಿ ಮಹಾಯಾಗ ಸಂಪನ್ನ

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತ ಮಹಾ ತ್ರಿಪುರಸುಂದರಿ ಮಹಾ ಯಾಗವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಯ ನೇತೃತ್ವದಲ್ಲಿ ಸ್ಥಳೀಯ ಉದ್ಯಮಿಯೋರ್ವರ ಪ್ರಾಯಶ್ಚಿತ ಪೂರ್ವಕವಾಗಿ ಸಂಪನ್ನಗೊಂಡಿತು. ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾಯಾಗ ಬಹು ವಿಶಿಷ್ಟ ಹಾಗೂ ಅಪರೂಪದ್ದಾಗಿದೆ. ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ, ಲಲಿತಾ ಸಹಸ್ರನಾಮ ಅರ್ಚನೆಯಿಂದ ನೆರವೇರಿದ […]

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಷಟ್ ಶಿರ ಸುಬ್ರಮಣ್ಯ ಸ್ವಾಮಿ ವರ್ಧಂತಿ ಮಹೋತ್ಸವ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿರುವ ವಲ್ಲಿ ದೇವಯಾನಿ ಸಹಿತ ಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಇದೇ ತಿಂಗಳ ತಾರೀಕು 24ರ ಬುಧವಾರದಂದು ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿರುವುದು. ತತ್ ಸಂಬಂಧವಾಗಿ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಪಂಚ ವಿಂಷತಿ ಕಲಶಾರಾಧನೆ, ಕಲಶಾಭಿಷೇಕ, ಬ್ರಾಹ್ಮಣಾರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ […]