ದೊಡ್ಡಣ್ಣಗುಡ್ಡೆ: ವೇದ ಮಾತೆ ಗಾಯತ್ರಿ ದೇವಿಯ ನೂತನ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ
ಉಡುಪಿ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮಾ.28 ರಂದು ನೆರವೇರಲಿದೆ. ಈ ಪ್ರಯುಕ್ತ ಕ್ಷೇತ್ರದಲ್ಲಿ ರುದ್ರಯಾಗವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ನಿಧಿ ಕುಂಭದಲ್ಲಿ ಭಕ್ತರು ತಮ್ಮ ಕೈಲಾದಷ್ಟು ಚಿನ್ನ ಬೆಳ್ಳಿ ನವರತ್ನಗಳನ್ನು ಸಮರ್ಪಿಸಲು ಅವಕಾಶವಿದೆ. ಭಕ್ತರು ನಗದು ರೂಪದಲ್ಲಿಯೂ ದೇಣಿಗೆಯನ್ನು ನೀಡಬಹುದು. ಈ ಮಹತ್ ಕಾರ್ಯದಲ್ಲಿ ಭಕ್ತರೆಲ್ಲ ಪಾಲ್ಗೊಂಡು ಗಾಯತ್ರಿ ದೇವಿಯ […]
ದೊಡ್ಡಣ್ಣಗುಡ್ಡೆ: ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ದೇವಿ ಅನುಗ್ರಹಿತ ಭಕ್ತ ಶ್ರೀ ರಮಾನಂದ ಗುರೂಜಿ ಮಾ. 23 ಶನಿವಾರದಿಂದ 24ರ ಭಾನುವಾರ ತನಕ ಹಾಗೂ 27ರ ಬುಧವಾರ ಮುಂಬೈನ ಲೋವರ್ ಪರೇಲಿನಲ್ಲಿರುವ ಸೈಂಟ್ ರಿಜಿಸ್(St. Regis) ಪಂಚತಾರಾ ಹೊಟೇಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾ.26ರಂದು ಇಂದೋರಿಗೆ ಭೇಟಿ ನೀಡಲಿದ್ದು, ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟಕೊಳಗಾದವರ ಸಂಕಷ್ಟ ನಿವಾರಿಸಿ ಭಕ್ತ ಜನರ […]
ಮಾರ್ಚ್ 6: ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಲಿತ ಮಹಾ ತ್ರಿಪುರ ಸುಂದರಿ ಮಹಾಯಾಗ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಇಂದು ಶ್ರೀ ಲಲಿತ ಮಹಾ ತ್ರಿಪುರ ಸುಂದರಿ ಮಹಾಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ. ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿ ನಿತ್ಯ ನಿರಂತರ ಶ್ರೀಚಕ್ರ ಆರಾಧನೆ ನಡೆಯುತ್ತಿರುವ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿಗೆ ಅತಿ ಪ್ರಿಯವೆನಿಸಿದ ಈ ಮಹಾನ್ ಯಾಗವು ಕ್ಷೇತ್ರ ಸ್ವಾಮಿಣಿಯಿಂದ ಅನುಗ್ರಹಿತರಾದ ಅನುಸೂಯ ಭಟ್ ಮತ್ತು ಮಕ್ಕಳ ಬಾಪ್ತು ಪ್ರಾಯಶ್ಚಿತ್ತ ಪೂರಕವಾಗಿ ಕ್ಷೇತ್ರದಲ್ಲಿ […]
ದೊಡ್ಡಣ್ಣಗುಡ್ಡೆ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿಯಾಗ ಸಂಪನ್ನ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವಿಪ್ರಮೋತ್ತಮರ ಸಹಭಾಗಿತ್ವದಲ್ಲಿ ನೆರವೇರಿತು. ದೇವಿ ಪ್ರೀತ್ಯರ್ಥ ನೆರವೇರಿದ ಈ ಮಹಾನ್ ಯಾಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಕದಳೀಹಣ್ಣನ್ನು ತ್ರಿಮಧುರಯುಕ್ತವಾಗಿ ಕಾಳಿ ‘ಕ’ಕಾರ ಸಹಸ್ರನಾಮದಲ್ಲಿ ಹೋಮಿಸಿ, ಕಾಳಿ ಅಷ್ಟೋತ್ತರ ನಾಮದಲ್ಲಿ ಅರ್ಚಿಸಿ ಯಾಗ ನೆರವೇರಿಸಲಾಯಿತು. ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ಮಹಾ ಅನ್ನಸಂತರ್ಪಣೆ ನೆರವೇರಿತು. ಬಹು […]
ದೊಡ್ಡಣ್ಣಗುಡ್ಡೆ: ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ದೊಡ್ಡಣ್ಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ದೊಡ್ಡಣ್ಣಗುಡ್ಡೆಯ ಪುಷ್ಪ ಹರಾಜು ಕೇಂದ್ರದಲ್ಲಿ ಆಯೋಜಿಸಲಾದ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು […]