ಟೆನಿಸ್ ಚಾಂಪಿಯನ್‌ಶಿಪ್ ಪುರುಷರ ಡಬಲ್ಸ್ ಸ್ಪರ್ಧೆ ಗೆದ್ದ ಧೋನಿ: ಮಾಹಿ ಇಲ್ಲಿಯೂ ಕಪ್ ಗೆಲ್ಲುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು
ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ನಾಯಕತ್ವದ ಸಮಯದಲ್ಲಿ ಭಾರತವು ಎಲ್ಲಾ ಐಸಿಸಿ ಪಂದ್ಯಾವಳಿಗಳನ್ನು ಗೆದ್ದಿದೆ. ಕ್ರಿಕೆಟ್ ಜೊತೆಗೆ ಅವರ ಫುಟ್ಬಾಲ್ ಪ್ರತಿಭೆಯನ್ನು ಅಭಿಮಾನಿಗಳು ನೋಡಿದ್ದಾರೆ. ನವೆಂಬರ್ 14 ರಂದು, ಸ್ಥಳೀಯ ಟೆನಿಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಧೋನಿ ಮತ್ತೊಂದು ಗರಿಯನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ)ಯು ಟೆನಿಸ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಿದ್ದು, ಪುರುಷರ ಡಬಲ್ಸ್ […]
ಮಾಹಿ 41ನೇ ಹುಟ್ಟು ಹಬ್ಬಕ್ಕೆ 41 ಫೀಟ್ ಕಟೌಟ್ ಹಾಕಿ ಸಂಭ್ರಮಿಸಿದ ವಿಜಯವಾಡಾ ಅಭಿಮಾನಿಗಳು
ವಿಜಯವಾಡಾ: ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಕೂಲ್ ಕ್ಯಾಪ್ಟನ್ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ವರ್ಷದ ಹುಟ್ಟು ಹಬ್ಬವನ್ನಾಚರಿಸುತ್ತಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ಇಡೀ ದೇಶವೆ ಅವರಿಗೆ ಶುಭಾಶಯಗಳ ಸುರಿಮಳೆಯನ್ನು ಸುರಿಸುತ್ತಿದೆ. ತಮ್ಮ ಧೋನಿ ಅಭಿಮಾನಕ್ಕೆ ಸಾಕ್ಷಿ ಎನ್ನುವಂತೆ, ವಿಜಯವಾಡದ ಜಿಲ್ಲೆಯೊಂದರಲ್ಲಿ ಅಭಿಮಾನಿಗಳು ಮಾಹಿಯ 41 ಅಡಿ ಕಟೌಟ್ ಹಾಕಿ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕಟೌಟ್‌ನಲ್ಲಿ ಧೋನಿ ಬಹು ಪ್ರಖ್ಯಾತ ಹೆಲಿಕಾಪ್ಟರ್ ಶಾಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ […]
ಎಲ್ಲರಂತೆ ತಾನೂ ಎಂಎಸ್ ಧೋನಿ ಅಭಿಮಾನಿ ಎಂದು ತೋರಿದ ಡೇಲ್ ಸ್ಟೇನ್! ಚೆನ್ನೈ ನಾಯಕನ ಆಟೋಗ್ರಾಫ್ ಪಡೆದ ಹೈದ್ರಾಬಾದ್ ಬೌಲಿಂಗ್ ಕೋಚ್!!
ಭಾರತ ತಂಡದ ಮಾಜಿ ನಾಯಕ, ಎಂಎಸ್ ಧೋನಿ ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾನುವಾರ ಸಂಜೆ (ಮೇ 01), ತಂಡದ ನಾಯಕ ರವೀಂದ್ರ ಜಡೇಜಾ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ತಂಡಕ್ಕೆ ಮರಳಿದ್ದರು. ನಾಲ್ಕು ಬಾರಿಯ ಚಾಂಪಿಯನ್ ತಂಡದ ನಾಯಕ ಐಪಿಎಲ್ 2022 ರ ಆವೃತ್ತಿಯ 46 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪುಣೆಯ ಎಮ್ ಸಿ ಎ ಸ್ಟೇಡಿಯಂನಲ್ಲಿ ಎದುರಿಸಿದರು. ಭಾನುವಾರ ಸಂಜೆ ನಡೆದ ಐಪಿಎಲ್ ಪಂದ್ಯದಲ್ಲಿ […]