ಮಾಹಿ 41ನೇ ಹುಟ್ಟು ಹಬ್ಬಕ್ಕೆ 41 ಫೀಟ್ ಕಟೌಟ್ ಹಾಕಿ ಸಂಭ್ರಮಿಸಿದ ವಿಜಯವಾಡಾ ಅಭಿಮಾನಿಗಳು

ವಿಜಯವಾಡಾ: ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ಕೂಲ್ ಕ್ಯಾಪ್ಟನ್ ಥಲಾ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 41ನೇ ವರ್ಷದ ಹುಟ್ಟು ಹಬ್ಬವನ್ನಾಚರಿಸುತ್ತಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ಇಡೀ ದೇಶವೆ ಅವರಿಗೆ ಶುಭಾಶಯಗಳ ಸುರಿಮಳೆಯನ್ನು ಸುರಿಸುತ್ತಿದೆ.

ತಮ್ಮ ಧೋನಿ ಅಭಿಮಾನಕ್ಕೆ ಸಾಕ್ಷಿ ಎನ್ನುವಂತೆ, ವಿಜಯವಾಡದ ಜಿಲ್ಲೆಯೊಂದರಲ್ಲಿ ಅಭಿಮಾನಿಗಳು ಮಾಹಿಯ 41 ಅಡಿ ಕಟೌಟ್ ಹಾಕಿ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕಟೌಟ್‌ನಲ್ಲಿ ಧೋನಿ ಬಹು ಪ್ರಖ್ಯಾತ ಹೆಲಿಕಾಪ್ಟರ್ ಶಾಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಪತ್ನಿ ಸಾಕ್ಷಿಯೊಂದಿಗೆ ಇತ್ತೀಚೆಗಷ್ಟೆ ತಮ್ಮ 12 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು ಮತ್ತು ವರದಿಗಳ ಪ್ರಕಾರ ಕುಟುಂಬವು ಲಂಡನ್‌ನಲ್ಲಿದ್ದು ಅಲ್ಲಿಯೇ ಸಿಎಸ್‌ಕೆ ನಾಯಕನ 41 ನೇ ಹುಟ್ಟುಹಬ್ಬವನ್ನು ಆಚರಿಸುತ್ತದೆ ಎನ್ನಲಾಗಿದೆ.