ಕ್ಯಾನ್ಸರ್ ಪೀಡಿತನ ಚಿಕಿತ್ಸೆಗೆ ಧನಸಹಾಯ
ಉಡುಪಿ: ಇಲ್ಲಿನ ಬನ್ನಂಜೆಯ ಶೈಲೇಶ್ ಎಂಬವರು ರಕ್ತ ಕ್ಯಾನ್ಸರ್ ಪೀಡಿತರಾಗಿದ್ದು, ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅವಶ್ಯಕತೆ ಇದ್ದು, ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಇವರಿಗೆ, ಬನ್ನಂಜೆಯ ಲಕ್ಷ್ಮೀನಾರಾಯಣ ಚಂಡೆ ವಾದ್ಯ ಬಳಗದ ಸಹಯೋಗದೊಂದಿಗೆ, ವಾಸುದೇವ ಬನ್ನಂಜೆ ಇವರ ನೇತೃತ್ವದಲ್ಲಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಾನಿಗಳಿಂದ ಪಡೆದ ಹಣವನ್ನು ಹಸ್ತಾಂತರಿಸಲಾಯಿತು. ಕಚ್ಚೂರು ಮಾಲ್ತಿದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಧರ್ಮಶ್ರೀಯಾದ ಗೋಕುಲದಾಸ್ ಬಾರಕೂರು ಹಾಗೂ ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ […]
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರ ಉದ್ಘಾಟನೆ
ಮಣಿಪಾಲ: ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ಮತ್ತು ಹಿಮೋಫಿಲಿಯಾ ಸೊಸೈಟಿ, ಮಣಿಪಾಲ ಇವುಗಳ ಸಹಯೋಗದೊಂದಿಗೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರವನ್ನು ಮೇ 28 ರಂದು ಉದ್ಘಾಟಿಸಲಾಯಿತು. ಹಿಮೋಫಿಲಿಯಾ ಅನುವಂಶಿಕ ಮತ್ತು ಗುಣಪಡಿಸಲಾಗದ ಜೀವಮಾನವಿಡೀ ಇರುವ ರಕ್ತಸ್ರಾವದ ಕಾಯಿಲೆಯಾಗಿದೆ. ಇದು ಹತ್ತು ಸಾವಿರ ಪುರುಷರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಹಿಮೋಫಿಲಿಯಾ ರೋಗಿಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಅಂಶಗಳ ಕೊರತೆ ಅಥವಾ ಅನುಪಸ್ಥಿತಿಯಿಂದ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವುದಿಲ್ಲ. ಈ ಪುನರಾವರ್ತಿತ ರಕ್ತಸ್ರಾವದ […]
ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಮಾಜಿ ಪಂಚಾಯತ್ ಸದಸ್ಯ
ಉಡುಪಿ: ಹೆಗ್ಗುಂಜೆ ಗ್ರಾಮದ ಮಾಜಿ ಪಂಚಾಯತ್ ಸದಸ್ಯರಾದ ಕೃಷ್ಣ ಮರಕಾಲ ಯಾನಿ ರಿಕ್ಷಾ ಕಿಟ್ಟ ಅಣ್ಣ ಇವರು ಶ್ವಾಸಕೋಶ ಕ್ಯಾನ್ಸರಿನಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಲಾಗಿದೆ. ಇವರ ಕುಟುಂಬ ಆರ್ಥಿಕವಾಗಿ ವಿಪರೀತ ಸಂಕಷ್ಟದಲ್ಲಿದ್ದು, ದುಡಿಯುತ್ತಿದ್ದ ವ್ಯಕ್ತಿ ಹಾಸಿಗೆ ಹಿಡಿದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇವರ ಚಿಕಿತ್ಸೆ ಮತ್ತು ಕುಟುಂಬದವರ ಮುಂದಿನ ಜೀವನಕ್ಕೆ ಸಹಾಯವಾಗುವಂತೆ ದಾನಿಗಳು ಮುಂದೆ ಬಂದು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಬೇಕಾಗಿ ವಿನಂತಿ. ದಾನಿಗಳು ನೀಡುವ ಸಣ್ಣ ಸಹಾಯವೂ ಒಂದು […]
ಮಾಹೆ: ಕ್ಯಾನ್ಸರ್ಗೆ ಬಹು-ಶಿಸ್ತಿನ ಚಿಕಿತ್ಸಾ ವಿಧಾನದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಮಣಿಪಾಲ: ಮೇ 18 ರಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಪೋರ್ಟ್ ಗ್ರೂಪ್ ನ ಉದ್ಘಾಟನೆ ಮತ್ತು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಕ್ಯಾನ್ಸರ್ಗೆ ಬಹು-ಶಿಸ್ತಿನ ಚಿಕಿತ್ಸಾ ವಿಧಾನದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಿತ್ತು. ಮುಖ್ಯ ಅತಿಥಿಗಳಾದ ವಿಶಾಖಪಟ್ಟಣದ ಹೋಮಿಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಉಮೇಶ್ ಮಹಾಂತಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ”ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವು ಕರಾವಳಿ ಕರ್ನಾಟಕ ಭಾಗದಲ್ಲಿ […]
ಆರ್.ಸಿ.ಎಮ್.ಟಿ: ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣ ಸಂಗ್ರಹ
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ (ಮಾಹೆ), ಮಣಿಪಾಲ ಸಹಯೋಗದೊಂದಿಗೆ ರೋಟರಿ ಕ್ಲಬ್ ಮಣಿಪಾಲ್ ಟೌನ್ (ಆರ್.ಸಿ.ಎಮ್.ಟಿ) ವತಿಯಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಚಿಕಿತ್ಸೆ ನೀಡಲು ಹಣವನ್ನು ಸಂಗ್ರಹಿಸಲಾಗುತ್ತಿದೆ. ಆರ್.ಸಿ.ಎಮ್.ಟಿಯು ಮೇ 2022 ರಂದು ‘ಗೋಲ್ಡನ್ ಜುಬಿಲಿ’ ಸಭಾಂಗಣ, ಕೆನರಾ ಬ್ಯಾಂಕ್, ಮಣಿಪಾಲದಲ್ಲಿ “ಸಾಂಸ್ಕೃತಿಕ ಸವಾಲು- 2022” ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಾಂಪ್ರದಾಯಿಕ ಮತ್ತು ಜಾನಪದ-ನೃತ್ಯ ಶೀರ್ಷಿಕೆಗಾಗಿ ಹಲವಾರು ತಂಡಗಳು ಸ್ಪರ್ಧಿಸಲಿವೆ. ವಿಜೇತರಿಗೆ ಪ್ರಥಮ ಬಹುಮಾನ ರೂ. 1 ಲಕ್ಷ, 2ನೇ ಬಹುಮಾನ ರೂ. 60,000 […]