ಆರ್.ಸಿ.ಎಮ್.ಟಿ: ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣ ಸಂಗ್ರಹ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ (ಮಾಹೆ), ಮಣಿಪಾಲ ಸಹಯೋಗದೊಂದಿಗೆ ರೋಟರಿ ಕ್ಲಬ್ ಮಣಿಪಾಲ್ ಟೌನ್ (ಆರ್.ಸಿ.ಎಮ್.ಟಿ) ವತಿಯಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಚಿಕಿತ್ಸೆ ನೀಡಲು ಹಣವನ್ನು ಸಂಗ್ರಹಿಸಲಾಗುತ್ತಿದೆ.

ಆರ್.ಸಿ.ಎಮ್.ಟಿಯು ಮೇ 2022 ರಂದು ‘ಗೋಲ್ಡನ್ ಜುಬಿಲಿ’ ಸಭಾಂಗಣ, ಕೆನರಾ ಬ್ಯಾಂಕ್, ಮಣಿಪಾಲದಲ್ಲಿ “ಸಾಂಸ್ಕೃತಿಕ ಸವಾಲು- 2022” ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಸಾಂಪ್ರದಾಯಿಕ ಮತ್ತು ಜಾನಪದ-ನೃತ್ಯ ಶೀರ್ಷಿಕೆಗಾಗಿ ಹಲವಾರು ತಂಡಗಳು ಸ್ಪರ್ಧಿಸಲಿವೆ. ವಿಜೇತರಿಗೆ ಪ್ರಥಮ ಬಹುಮಾನ ರೂ. 1 ಲಕ್ಷ, 2ನೇ ಬಹುಮಾನ ರೂ. 60,000 ಮತ್ತು ತೃತೀಯ ಬಹುಮಾನ ರೂ. 25,000 ಗಳನ್ನು ನೀಡಲಾಗುವುದು. ಸ್ಪರ್ಧಿಗಳು ಈ ಲಿಂಕ್ ನಲ್ಲಿ https://forms.gle/ubBMszebyWBRmTpK7 ತಮ್ಮ ಹೆಸರನ್ನು ನೋಂದಾಯಿಸಬಹುದು.

ಕಾರ್ಯಕ್ರಮದಿಂದ ಗಳಿಸಲಾದ ಹಣವನ್ನು ಬಡತನದಿಂದ ಬಳಲುತ್ತಿರುವ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಹೆಗೆ ಹಸ್ತಾಂತರಿಸಲಾಗುವುದು. ಈ ಉದಾತ್ತ ಉದ್ದೇಶಕ್ಕಾಗಿ ಉದಾರವಾಗಿ ದೇಣಿಗೆ ನೀಡಿ ಎಂದು ಆರ್.ಸಿ.ಎಮ್.ಟಿ ಟ್ರಸ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ದೇಣಿಗೆಗೆ ಐಟಿ ವಿಭಾಗ 80 ಜಿ. ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದು ಎಂದು ಟ್ರಸ್ಟ್ ತಿಳಿಸಿದೆ.

ದೇಣಿಗೆ ನೀಡಲು ಬ್ಯಾಂಕ್ ಖಾತೆ ವಿವರಗಳು: ಖಾತೆ ಹೆಸರು: ರೋಟರಿ ಕ್ಲಬ್ ಮಣಿಪಾಲ ಟೌನ್ ಚಾರಿಟೇಬಲ್ ಟ್ರಸ್ಟ್ ಖಾತೆ ಸಂಖ್ಯೆ: 74520100001094; IFSC: BARB0VJMMAN (ಐದನೇ ಅಕ್ಷರ ಶೂನ್ಯ), ಬ್ಯಾಂಕ್ ಆಫ್ ಬರೋಡಾ, ಸಿಂಡಿಕೇಟ್ ಸರ್ಕಲ್, ಮಣಿಪಾಲ. ಹೆಚ್ಚಿನ ಮಾಹಿತಿಗಾಗಿ, ಇಮೇಲ್: rcmtcharitabletrust@gmail.com ಅಥವಾ 9844547477 ಗೆ ಕರೆ ಮಾಡಿ ಎಂದು ಪ್ರಕಟನೆಯು ತಿಳಿಸಿದೆ.