ಬ್ರಹ್ಮಾವರ: ಕರ್ಜೆ ಸರಕಾರಿ ಪ.ಪೂ ಕಾಲೇಜಿಗೆ ನೂರು ಶೇಕಡಾ ಶೇ 100 ಫಲಿತಾಂಶ
ಬ್ರಹ್ಮಾವರ: ತಾಲೂಕಿನ ಕರ್ಜೆ ಸರಕಾರಿ ಪ.ಪೂ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಿಂದ 12 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದಿಂದ 30 ವಿದ್ಯಾರ್ಥಿಗಳು ಒಟ್ಟು 42 ವಿದ್ಯಾರ್ಥಿಗಳು ಹಾಜರಾಗಿದ್ದು ಇಬ್ಬರು ವಿಶಿಷ್ಟ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬ್ರಹ್ಮಾವರ: ಎಸ್.ಎಮ್.ಎಸ್ ಕಾಲೇಜಿನಲ್ಲಿಉದ್ಯೋಗಾಧಾರಿತ ಕೌಶಲ ಕುರಿತ ಮಾಹಿತಿ ಕಾರ್ಯಗಾರ
ಬ್ರಹ್ಮಾವರ: ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರದ ಹೆಚ್.ಆರ್.ಡಿ ಸೆಲ್ ಹಾಗೂ ಎಮ್.ಐ.ಟಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಏ. 15 ರಂದು ಅಂತಿಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲಗಳ ಕುರಿತ ಮಾಹಿತಿ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ , ಲರ್ನಿಂಗ್ ಇನ್ನೋವೇಷನ್ & ಕಂಟೆಂಟ್ ಡಿಜಿಟಲ್ ಸೊಲ್ಯೂಷನ್ಸ್ ಇದರ ನಿರ್ದೇಶಕ ದರ್ಶನ್ ಪಾಟೀಲ್ ಹಾಗೂ ಮ್ಯಾನೇಜರ್ ಮಧುಚಂದ್ರ ಕೊಟ್ಟಾರಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಉಡುಪ ಅಧ್ಯಕ್ಷತೆ […]
ಬ್ರಹ್ಮಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಸಾದ್ ರಾಜ್ ಕಾಂಚನ್
ಬ್ರಹ್ಮಾವರ: ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಪ್ರಸಾದ್ ರಾಜ್ ಕಾಂಚನ್, ಶ್ರೀಮಹಾಲಿಂಗೇಶ್ವರ ದೇವರ ದರ್ಶನ ಪಡೆದು ದೇವರ ಪ್ರಸಾದ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಡಳಿತ ಮಂಡಳಿ ಶಾಲು ಹೊದಿಸಿ ಅಭಿನಂದಿಸಿ ಶುಭ ಹಾರೈಸಿದರು.
ಬ್ರಹ್ಮಾವರ: ಎಸ್. ಎಂ.ಎಸ್ ಕಾಲೇಜಿನಲ್ಲಿ ಫುಡ್ ಫೆಸ್ಟ್ 2023
ಬ್ರಹ್ಮಾವರ: ಎಸ್.ಎಂ.ಎಸ್.ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಫುಡ್ ಫೆಸ್ಟ್ 2023 ಕಾರ್ಯಕ್ರಮವು ಏಪ್ರಿಲ್ 8 ರಂದು ಅದ್ದೂರಿಯಾಗಿ ನೆರವೇರಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು 18 ತಂಡಗಳಲ್ಲಿ 200 ಕ್ಕೂ ಅಧಿಕ ಆಹಾರ ಪದಾರ್ಥಗಳನ್ನು ತಯಾರಿಸಿ ತೀರ್ಪುಗಾರರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಓ.ಎಸ್.ಸಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಕಾಲೇಜಿನ ಸಂಚಾಲಕರಾದ ರೆ.ಫಾ ಎಂ.ಸಿ.ಮಥಾಯ್, ಓ.ಎಸ್.ಸಿ.ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷ ರೆ.ಫಾ. ಲಾರೆನ್ಸ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಅಲೆನ್ ರೋಹನ್ ವಾಜ್, ಕಾರ್ಯದರ್ಶಿ ಅಲ್ವರಿಸ್ ಡಿಸಿಲ್ವಾ, […]
ಮಾ.5 ರಿಂದ 12 ರವರೆಗೆ ಬ್ರಹ್ಮಾವರ ಜನನಿ ಎಂಟರ್ ಪ್ರೈಸಸ್ ನಲ್ಲಿ ವಿನಿಮಯೋತ್ಸವ: ಈ ಆಫರ್ ನಲ್ಲಿ ಏನೇನಿದೆ ಗೊತ್ತಿದೆಯೆ?
ಬ್ರಹ್ಮಾವರ: ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಮನ ಗೆದ್ದಿರುವ ಜನನಿ ಹೊಸ ಹೊಸ ಆಫರ್ ಗಳ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು ಹೊಸತೇನಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯ ಜೊತೆಗೆ ಆಕರ್ಷಕ ಉಡುಗೊರೆ, ಸುಲಭ ಕಂತುಗಳ ಸೌಲಭ್ಯಗಳೊಂದಿಗೆ ಉಚಿತ ಸಾಗಾಟದ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದು, ಈ ಬಾರಿ ತಮ್ಮ ಗ್ರಾಹಕರಿಗಾಗಿಯೆ ಅತಿದೊಡ್ಡ ಎಕ್ಸ್ ಚೇಂಜ್ ಆಫರ್ ಅನ್ನು ಮಾರ್ಚ್ 5 ರಿಂದ 12 ತನಕ ಆಯೋಜಿಸಿದ್ದು, […]