ಬ್ರಹ್ಮಾವರ ಎಂ.ಸಿ.ಸಿ ಬ್ಯಾಂಕ್ ನ 17 ನೇ ಶಾಖೆ ಉದ್ಘಾಟನೆ: ಸಾರವಜನಿಕರ ಸಹಕಾರದಿಂದ ಸಹಕಾರಿ ರಂಗ ಮುನ್ನಡೆ: ಯಶ್ ಪಾಲ್ ಸುವರ್ಣ
ಬ್ರಹ್ಮಾವರ: ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿಬ್ಯಾಂಕಿನ 17 ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ಮಾ. 3 ರಂದು ಉದ್ಘಾಟನೆಗೊಂಡಿತು. ಹೊಸ ಶಾಖೆಯ ಉದ್ಘಾಟನೆಯನ್ನು ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿ ಮಾತನಾಡಿ, ಬ್ರಹ್ಮಾವರದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು. ಆರ್.ಬಿ.ಐ ಮಾನದಂಡದೊಂದಿಗೆ ಸಹಕಾರಿ ರಂಗವನ್ನು ಮುನ್ನಡೆಸುವುದು ಹೂವಿನ ಹಾಸಿಗೆಯಲ್ಲ. ಆದರೂ, ಸಾರ್ವಜನಿಕರ ಸಹಕಾರ […]
ಬ್ರಹ್ಮಾವರ: ಮಾ.2 ಮತ್ತು 3 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಲೋಕಾರ್ಪಣೆ ಹಾಗೂ ಗುರುಗಳ ಮೂರ್ತಿ ಪ್ರತಿಷ್ಠೆ
ಬ್ರಹ್ಮಾವರ: ಬಿಲ್ಲವ ಸಮಾಜ ಸೇವಾ ಸಂಘ(ರಿ.) ಬ್ರಹ್ಮಾವರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಲೋಕಾರ್ಪಣೆ ಹಾಗೂ ಗುರುಗಳ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮವು ಮಾ. 3 ರಂದು ಸಂಜೆ ೫ ಗಂಟೆಗೆ ವಾರಂಬಳ್ಳಿ ನಾರಾಯಣಗುರು ಸಭಾಭವನದಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಆರ್ಯ ಈಡಿಗ ಸಮಾಜ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಾವರ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಅವಕಾಶ
ಉಡುಪಿ: ಜಿಲ್ಲೆಯ ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕುಗಳನ್ನು ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಆಧಿನಿಯಮದ ವಿಧಿ 3(4) ರಡಿ ನೀಡಿದ ಅಧಿಕಾರದನ್ವಯ 2022-2023 ರ ಮಾಸ್ಟರ್ ಸುತ್ತೋಲೆಯ ಅಧ್ಯಾಯ 4.2.3 ರ ಅನ್ವಯ ಬರಪೀಡಿತ ತಾಲೂಕುಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಹೆಚ್ಚುವರಿಯಾಗಿ 50 ದಿನಗಳ ಅಂದರೆ ಒಟ್ಟು 150 ದಿನಗಳ ಉದ್ಯೋಗ […]
ನಾಳೆ (ಆ.5) ಕಾನೂನು ಸಚಿವ ಎಚ್.ಕೆ.ಪಾಟೀಲ್ ಜಿಲ್ಲಾ ಪ್ರವಾಸ
ಉಡುಪಿ: ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು,ಸಂಸದೀಯ ವ್ಯವಹಾರ,ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಅವರು ಆಗಸ್ಟ್ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಚಿವರು ಆಗಸ್ಟ್ 4 ರಂದು ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದು, ಆಗಸ್ಟ್ 5 ರಂದು ಬೆಳಗ್ಗೆ 10.30 ಕ್ಕೆ, ಬಹ್ಮಾವರದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ, 4.30 ಕ್ಕೆ ಉಡುಪಿಯ […]
ಬ್ರಹ್ಮಾವರ: ನಾಳೆ(ಆ.5) ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನೆ
ಬ್ರಹ್ಮಾವರ: ಬ್ರಹ್ಮಾವರವು ತಾಲೂಕು ಕೇಂದ್ರವಾಗಿದ್ದು, ಆ.5 ರಂದು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ತಿಳಿಸಿದರು. ನಗರದಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನ್ಯಾಯಾಲಯ ಕಟ್ಟಡದ ಉದ್ಘಾಟನೆಯನ್ನು ಬೆಳಿಗ್ಗೆ 10.30 ಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಜಿಲ್ಲಾ ನ್ಯಾಯಾಂಗ ಕಟ್ಟಡ ಸಮಿತಿಯ ಅಧ್ಯಕ್ಷ ಪಿ.ಎಸ್.ದಿನೇಶ್ ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ ಅರುಣ್ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ […]