ಮಾ.5 ರಿಂದ 12 ರವರೆಗೆ ಬ್ರಹ್ಮಾವರ ಜನನಿ ಎಂಟರ್ ಪ್ರೈಸಸ್ ನಲ್ಲಿ ವಿನಿಮಯೋತ್ಸವ: ಈ ಆಫರ್ ನಲ್ಲಿ ಏನೇನಿದೆ ಗೊತ್ತಿದೆಯೆ?

ಬ್ರಹ್ಮಾವರ: ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಮನ ಗೆದ್ದಿರುವ ಜನನಿ ಹೊಸ ಹೊಸ ಆಫರ್ ಗಳ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು ಹೊಸತೇನಲ್ಲ.

 

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯ ಜೊತೆಗೆ ಆಕರ್ಷಕ ಉಡುಗೊರೆ, ಸುಲಭ ಕಂತುಗಳ ಸೌಲಭ್ಯಗಳೊಂದಿಗೆ ಉಚಿತ ಸಾಗಾಟದ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದು, ಈ ಬಾರಿ ತಮ್ಮ ಗ್ರಾಹಕರಿಗಾಗಿಯೆ ಅತಿದೊಡ್ಡ ಎಕ್ಸ್ ಚೇಂಜ್ ಆಫರ್ ಅನ್ನು ಮಾರ್ಚ್ 5 ರಿಂದ 12 ತನಕ ಆಯೋಜಿಸಿದ್ದು, ತಮ್ಮ ಹಳೆಯ ಗೃಹೋಪಕರಣಗಳನ್ನು ಹೊಸದಾಗಿಸಿಕೊಳ್ಳಲು ಒಂದು ಸುವರ್ಣಾವಕಾಶ.

ಬಾರೀ ರಿಯಾಯತಿಯೊಂದಿಗೆ ಎಕ್ಸ್ ಚೇಂಜ್ ಆಫರ್

ನಿಮ್ಮ ನೆಚ್ಚಿನ ಮೊಬೈಲ್, ಎಲೆಕ್ಟ್ರಾನಿಕ್ಸ್, ಹೋಂ ಅಪ್ಲಾಯೆನ್ಸಸ್, ಕಿಚನ್ ಅಪ್ಲೈಯನ್ಸಸ್, ಪೀಠೋಪಕರಣ, ಸೋಲಾರ್ ವಾಟರ್ ಹೀಟರ್, ಇನ್ವರ್ಟರ್ ಸೆಟ್ ಮತ್ತು ಮ್ಯಾಟ್ರೆ ಗಳ ಮೇಲೆ ಬಾರೀ ರಿಯಾಯತಿಯೊಂದಿಗೆ ವಿನಿಮಯ ಸೌಲಭ್ಯಗಳು ದೊರೆಯಲಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೀಮಿತ ಅವಧಿಯ ಆಫರ್ನಲ್ಲಿ ತಮ್ಮ ಹಳೆಯ ವಸ್ತುಗಳನ್ನು ಹೊಸದಾಗಿಸಿಕೊಳ್ಳಬಹುದು.

ಎಕ್ಸ್ ಚೇಂಜ್ ವಸ್ತುಗಳಿಗೂ ಕಂತುಗಳ ಸೌಲಭ್ಯ

ತಾವು ವಿನಿಮಯದ ಮೂಲಕ ಖರೀದಿಸುವ ಹೊಸ ವಸ್ತುಗಳುಗೆ ಸುಲಭ ಕಂತುಗಳ ಸೌಲಭ್ಯವಿದ್ದು, ಪ್ರತಿ ತಿಂಗಳು ಪಾವತಿಸುವ ಮೂಲಕ ತಮ್ಮ ಇಚ್ಛೆಯ ವಸ್ತುಗಳನ್ನು ಮುಂಗಡವಾಗಿ ಖರೀದಿಸಬಹುದು. ಎಲ್ಲಾ ಮಾದರಿಯ ವಸ್ತುಗಳಿಗೂ ಕಂತುಗಳ ಸೌಲಭ್ಯವಿದ್ದು ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಗಳಿಗೆ 0% ಬಡ್ಡಿದರದಲ್ಲಿ ಪೀಠೋಪಕರಣಗಳಿಗೆ ಕನಿಷ್ಟ ಬಡ್ಡಿ ದರದಲ್ಲಿ ಈ ಸೌಲಭ್ಯಗಳು ಲಭ್ಯವಿದೆ.

ಎಕ್ಸ್ ಚೇಂಜ್ ಖರೀದಿಗೂ ಆಕರ್ಷಕ ಉಡುಗೊರೆ

ಸಾಮಾನ್ಯವಾಗಿ ಎಕ್ಸ್ ಚೇಂಜ್ ಗಳ ಮೂಲಕ ಖರೀದಿಸುವ ಹೊಸ ಉತ್ಪನ್ನಗಳಿಗೆ ಇತರ ಆಫರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಆದರೆ, ಜನನಿ ವಿನಿಮಯೋತ್ಸವದಲ್ಲಿ ಎಕ್ಸ್ ಚೇಂಜ್ ಖರೀದಿಗೂ ಆಕರ್ಷಕ ಉಡುಗೊರೆಗಳೂ ಲಭ್ಯವಿರುತ್ತದೆ.

ಪೀಠೋಪಕರಣಗಳ ವಿನಿಮಯ-ಎಕ್ಸ್ ಚೇಂಜ್ ಆಫರ್ ನ ಆಕರ್ಷಣೆ

ಈಗಿನ ಜೀವನ ಶೈಲಿಗೆ ತಕ್ಕಂತೆ ಹಳೆಯ ವಸ್ತುಗಳನ್ನು ವಿನಿಮಯ ಮಾಡಿ ಹೊಸ ಹೊಸ ಮಾದರಿಯ ಉತ್ಪನ್ನಗಳನ್ನು ಬಳಕೆ ಮಾಡುವುದು ಸರ್ವೆ ಸಾಮಾನ್ಯವಾಗಿದ್ದು ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್ ಎಕ್ಸ್ ಚೇಂಜ್ ಆಫರ್ ಗಳು ಗ್ರಾಹಕರಿಗೆ ಬಹಳಷ್ಟು ಲಭ್ಯವಿದೆ. ಆದರೆ, ಪೀಠೋಪಕರಣ ಹಾಗೂ ಮ್ಯಾಟ್ರೆಸ್ ಗಳ ಮೇಲಿನ ಎಕ್ಸ್ ಚೇಂಜ್ ಆಫರ್ ಜನನಿಯ ವಿಶೇಷ ಆಕರ್ಷಣೆಯಾಗಿದ್ದು, ತಮ್ಮ ಹಳೆಯ ಪೀಠೋಪಕರಣ ಮತ್ತು ಮ್ಯಾಟ್ರೆಸ್ ಗಳನ್ನು ಹೊಸದಾಗಿಸಿಕೊಳ್ಳಲು ಇಂದೇ ಬ್ರಹ್ಮಾವರ ಜನನಿ ಮಳಿಗೆಗೆ ಭೇಟಿ ಕೊಡಿ.

ಆಫರ್ ಮಾರ್ಚ್ 5 ರಿಂದ 12 ರ ವರೆಗೆ ಮಾತ್ರ

ನಿಮ್ಮ ಹಾಳಾದ ಟಿವಿ, ವಾಷಿಂಗ್ ಮಶೀನ್, ಎ.ಸಿ, ರೆಫ್ರಿಜರೇಟರ್, ಮೊಬೈಲ್ ಮೊದಲಾದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಸ್ಟವ್, ಗ್ರಂಡರ್, ಪ್ಯಾನ್, ಕುಕ್ಕರ್, ಮಿಕ್ಸಿ, ಇನ್ವರ್ಟರ್, ಬ್ಯಾಟರಿ ಇತ್ಯಾದಿ ಉತ್ಪನ್ನಗಳು, ಸೋಫಾ, ಕಾಟ್, ಡೈನಿಂಗ್ ಸೆಟ್, ಕಪಾಟು, ಬೆಡ್, ಕುರ್ಚಿ ಇತ್ಯಾದಿ ಪೀಠೋಪಕರಣಗಳನ್ನು ವಿನಿಮಯ ಮಾಡಿಕೊಳ್ಳಲು ಮಾರ್ಚ್ 12 ತನಕ ಅವಕಾಶವಿದ್ದು ಅಧಿಕ ಉಳಿತಾಯದೊಂದಿಗೆ ಹಳೆಯದನ್ನು ಹೊಸದಾಗಿಸಿಕೊಂದು ತಮ್ಮ ಮನೆಯ ಸೌಂದರ್ಯವನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳಿ.