ನರೇಂದ್ರ ಮೋದಿ‌ 2ನೇ ಬಾರಿಗೆ ಪ್ರಮಾಣ ವಚನ, ಕಡಿಯಾಳಿ ಶ್ರೀನಿವಾಸ ಹೋಟೆಲ್ ನಿಂದ ಸಾರ್ವಜನಿಕರಿಗೆ ಉಚಿತ ಹಾಲು‌ ಪಾಯಸ ಸೇವೆ

ಉಡುಪಿ: ಉಡುಪಿ ಕಡಿಯಾಳಿ ಶ್ರೀನಿವಾಸ ಹೋಟೆಲ್ ವತಿಯಿಂದ ಮೇ. 30ರಂದು ಶ್ರೀ  ನರೇಂದ್ರ ಮೋದಿ 2ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹಾಲು ಪಾಯಸ ಸೇವೆ ರೂಪವಾಗಿ ವಿತರಿಸಲಾಯಿತು. ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಸಭಾ ಸದಸ್ಯ ಗಿರೀಶ ಅಂಚನ್, ಗೀತಾ ಶೇಠ್ ಅವರು ಉಚಿತ ಹಾಲು ಪಾಯಸ ವಿತರಣೆಗೆ ಚಾಲನೆ ನೀಡಿದರು. ಶ್ರೀನಿವಾಸ ಹೋಟೆಲ್ ಮಾಲೀಕರಾದ ನರಸಿಂಹ ಕಿಣಿ, ರಾಘವೇಂದ್ರ ಕಿಣಿ, ದಾವೂದ್ […]

ಗಂಗೊಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಗಂಗೊಳ್ಳಿ :  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಅದ್ಭುತ ಸಾಧನೆ ಮಾಡಿದೆ. ಬಿಜೆಪಿಯನ್ನು ಒಂದಂಕಿಗೆ ತಂದು ನಿಲ್ಲಿಸುವುದಾಗಿ ಹೇಳುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದೂ ಕಂಡರಿಯದ ಸೋಲನ್ನು ಅನುಭವಿಸಿ ಒಂದಂಕಿಗೆ ಬಂದು ನಿಂತಿವೆ ಎಂದು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿದ ಹಿನ್ನಲೆಯಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಮತ್ತು ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಗುರುವಾರ ಸಂಜೆ ಜರಗಿದ ಬಿಜೆಪಿ ಕಾರ್ಯಕರ್ತರ […]

ನವಭಾರತಕ್ಕಾಗಿ ಫಕೀರನ ಜೋಳಿಗೆ ತುಂಬಿಸಿದ್ದಾರೆ ದೇಶದ ಜನತೆ.. ದೇಶದ ಜನತೆಗೆ ಮೋದಿ ಅಭಿನಂದನೆ

ನವದೆಹಲಿ: ನವಭಾರತಕ್ಕಾಗಿ ದೇಶದ ಕೋಟಿ ಕೋಟಿ ನಾಗರಿಕರು ಫಕೀರನ ‌ಜೋಳಿಗೆಯನ್ನು ಈ ಜನತೆ ತುಂಬಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ‌ಮತದಾನವಾಗಿದೆ.‌ ಈ ಗೆಲುವನ್ನು ಜನತಾ ಜನಾರ್ದನನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ‌ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೋದಿ ಅವರು, ಭಾಷಣ ಪ್ರಾರಂಭಿಸುತ್ತಲೇ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ, ಹಿರಿಯ ನಾಯಕರು ಹಾಗೂ ದೇಶದ ಕೋಟಿ ಕೋಟಿ‌ ಕಾರ್ಯಕರ್ತರಿಗೆ, ಎಲ್ಲ ಜಯಗಳಿಸಿದ ಅಭ್ಯರ್ಥಿಗಳಿಗೆ ಮೋದಿ ಅಭಿನಂದನೆ […]

ದ.ಕ. ಜಿಲ್ಲೆಯನ್ನು‌ ಮಾದರಿ‌ ಜಿಲ್ಲೆಯನ್ನಾಗಿಸುವುದು ನನ್ನ ಗುರಿ: ನಳಿನ್

ಮಂಗಳೂರು: ದೇಶದ‌ ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಉತ್ತಮ ಆಡಳಿತದಿಂದಾಗಿ‌ ಜಿಲ್ಲೆಯ ಜನತೆ ನನಗೆ ಆಸೀರ್ವಾದ ಮಾಡಿದ್ದಾರೆ. ಮುಂದೆ ಹಲವು ಯೋಜನೆಗಳ‌ ಮೂಲಕ ಈ ಜಿಲ್ಲೆಯನ್ನು ಮಾದರಿಯನ್ನಾಗಿಸುವುದೇ ನನ್ನ ಗುರಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ಯ ಸರಕಾರ ಎಲ್ಲ ಭಾಗದಲ್ಲೂ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ಅಲ್ಲದೇ ಈ ಜಿಲ್ಲೆಯ ಏಳು ಶಾಸಕರ ಉತ್ತಮ ಕಾರ್ಯಗಳಿಂದಾಗಿಯೂ ನನ್ನ ಗೆಲುವು ಸುಲಭವಾಗಿದೆ. […]

ಮೈತ್ರಿ ಸರ್ಕಾರದ ಪತನಕ್ಕೆ ಕ್ಷಣಗಣನೆ: ಶೋಭಾ ಕರಂದ್ಲಾಜೆ

ಉಡುಪಿ: ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರದ ಪತನದ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಅಲೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಕೊಚ್ಚಿ ಹೋಗಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಗುರುವಾರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಚುನಾವಣೋತ್ತರ ಫಲಿತಾಂಶ ಪ್ರಕಟವಾದ ಸಂದರ್ಭ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ತಮಾಷೆ ಮಾಡಿದ್ದರು. ಆದರೆ ಆ ಸಮೀಕ್ಷೆಯೇ ನಿಜವಾಗಿದೆ. ತುಮಕೂರಿನಲ್ಲಿ ದೇವೇಗೌಡ, ಗುಲ್ಬರ್ಗದಲ್ಲಿ ಖರ್ಗೆ, ಬಳ್ಳಾರಿ ಉಗ್ರಪ್ಪ, ಮೊಯ್ಲಿ ಕೂಡಾ […]