ದ.ಕ. ಜಿಲ್ಲೆಯನ್ನು‌ ಮಾದರಿ‌ ಜಿಲ್ಲೆಯನ್ನಾಗಿಸುವುದು ನನ್ನ ಗುರಿ: ನಳಿನ್

ಮಂಗಳೂರು: ದೇಶದ‌ ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಉತ್ತಮ ಆಡಳಿತದಿಂದಾಗಿ‌ ಜಿಲ್ಲೆಯ ಜನತೆ ನನಗೆ ಆಸೀರ್ವಾದ ಮಾಡಿದ್ದಾರೆ. ಮುಂದೆ ಹಲವು ಯೋಜನೆಗಳ‌ ಮೂಲಕ ಈ ಜಿಲ್ಲೆಯನ್ನು ಮಾದರಿಯನ್ನಾಗಿಸುವುದೇ ನನ್ನ ಗುರಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯ ಸರಕಾರ ಎಲ್ಲ ಭಾಗದಲ್ಲೂ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ಅಲ್ಲದೇ ಈ ಜಿಲ್ಲೆಯ ಏಳು ಶಾಸಕರ ಉತ್ತಮ ಕಾರ್ಯಗಳಿಂದಾಗಿಯೂ ನನ್ನ ಗೆಲುವು ಸುಲಭವಾಗಿದೆ.
ಪಕ್ಷದಲ್ಲಿ ನಾನು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟು ಕೊಂಡಿಲ್ಲ. ಅಂಥ ರಾಜಕಾರಣಕ್ಕೆ ನಾನು ಬಂದಿಲ್ಲ. ಆದರ್ಶದ ರಾಜಕಾರಣ ‌ಮಾಡಲು ಬಂದಿದ್ದೇನೆ ಎಂದು‌ ತಿಳಿಸಿದ್ದಾರೆ.