ಮೈತ್ರಿ ಸರ್ಕಾರದ ಪತನಕ್ಕೆ ಕ್ಷಣಗಣನೆ: ಶೋಭಾ ಕರಂದ್ಲಾಜೆ

ಉಡುಪಿ: ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರದ ಪತನದ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಅಲೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಕೊಚ್ಚಿ ಹೋಗಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಗುರುವಾರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಚುನಾವಣೋತ್ತರ ಫಲಿತಾಂಶ ಪ್ರಕಟವಾದ ಸಂದರ್ಭ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ತಮಾಷೆ ಮಾಡಿದ್ದರು. ಆದರೆ ಆ ಸಮೀಕ್ಷೆಯೇ ನಿಜವಾಗಿದೆ.
ತುಮಕೂರಿನಲ್ಲಿ ದೇವೇಗೌಡ, ಗುಲ್ಬರ್ಗದಲ್ಲಿ ಖರ್ಗೆ, ಬಳ್ಳಾರಿ ಉಗ್ರಪ್ಪ, ಮೊಯ್ಲಿ ಕೂಡಾ ಮೋದಿ ಅಲೆಗೆ ಕೊಚ್ಚಿ ಹೋಗಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರ ರೈತ ವಿರೋಧಿ, ಜನ ವಿರೋಧಿ, ಮಹಾಘಟ್‌ ಬಂದನ್ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಈ ಫಲಿತಾಂಶದಿಂದ ಸಾಬೀತಾಗಲಿದೆ.
ಸಮ್ಮಿಶ್ರ ಸರಕಾರ‌ ಮಾಡಿದ ಪಾಪದ ಭಾರದಿಂದ ಸರಕಾರ ಕುಸಿಯುತ್ತಿದೆ. ನಾವು ಕಾಂಗ್ರೆಸ್‌ನ ಯಾವ ನಾಯಕರನ್ನು ಸಂಪರ್ಕಿಸುವುದಿಲ್ಲ. ಅವರು ಪಕ್ಷ ಬಿಟ್ಟು ರಾಜೀನಾಮೆ ಬಳಿಕ ಸಂಪರ್ಕಿಸಿ ಸ್ವಾಗತಿಸಲಾಗಿವುದು ಎಂದರು.