ಏಕನಾಥ್ ಶಿಂಧೆಗೆ ‘ಮಹಾ’ ಕಮಾನು: ಶಿವಸೇನೆಗೆ ಬೆಂಬಲ ನೀಡಲಿದೆ ಬಿಜೆಪಿ

ಮುಂಬಯಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಂತರ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾದ ಫಡ್ನವಿಸ್ ಮತ್ತು ಶಿಂಧೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬಿಜೆಪಿ ಬೆಂಬಲ ನೀಡಲಿದ್ದು, ಶಿಂಧೆ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ 7.30 ಕ್ಕೆ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಶಿಂಧೆ ಜೊತೆಗಿದ್ದ ಶಾಸಕರು […]
ಉದಯಪುರ ಅಮಾಯಕನ ಶಿರಚ್ಛೇದಗೈದ ಇಬ್ಬರು ಭಯೋತ್ಪಾದಕರಿಗೆ ಅದೇ ಮಾದರಿಯ ಶಿಕ್ಷೆಯಾಗಲಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಅಮಾಯಕ ವ್ಯಕ್ತಿಯ ಶಿರಚ್ಛೇದಗೈದು ಹತ್ಯೆ ಮಾಡಿರುವ ಭಯೋತ್ಪಾದಕ ಜಂತುಗಳನ್ನು ಕೇವಲ ವ್ಯಕ್ತಿಗಳು ಮಾಡಿದ ಕೃತ್ಯ ಎಂದು ಸಂಭೋಧಿಸಿ, ಇಂತಹ ಘಟನೆಗಳು ಬಿಜೆಪಿ ಪ್ರೇರಿತ ಭಯೋತ್ಪಾದನೆ ಎಂದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಚೋದನಕಾರಿ ಹೇಳಿಕೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದಿರುವ ಬಿ.ಕೆ. ಹರಿಪ್ರಸಾದ್ ರವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ […]
ಎಂ.ಎಲ್.ಸಿ ಕೆ.ಪಿ ನಂಜುಂಡಿ ಮತ್ತು ಬೆಂಬಲಿಗರಿಗೆ ಬುದ್ಧಿ ಹೇಳಿ: ವಿಶ್ವಕರ್ಮ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಸಮಾಜ ಅತ್ಯಂತ ಬೆಳವಣಿಗೆ ಕಾಣುತ್ತಿರುವ ಸಮಾಜವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಹಿತ ಅನೇಕ ಕ್ಷೇತ್ರಗಳಲ್ಲಿ ತನ್ನದೇ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ವಿಶ್ವಕರ್ಮ ನಿಗಮದ ಅಧ್ಯಕ್ಷ ಶ್ರೀ ಬಾಬು ಪತ್ತರ್ ಮತ್ತು ಸಮುದಾಯದ ಹಿರಿಯ ಸ್ವಾಮೀಜಿಯವರಾದ ಹಾಸನ ಜಿಲ್ಲೆಯ ಹರೆ ಮಾದನ ಹಳ್ಳಿ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ […]
ಟೈಲರ್ ಕನ್ಹಯ್ಯಾ ಲಾಲ್ ಆರೋಪಿಗಳಿಗೆ ಮರಣ ದಂಡನೆಯೇ ಸೂಕ್ತ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್

ಉಡುಪಿ: ನೂಪುರ್ ಶರ್ಮಾ ಹೇಳಿಕೆ ಪರವಾಗಿ ಪೋಸ್ಟ್ ಮಾಡಿದನ್ನೆ ನೆಪವಾಗಿಟ್ಟುಕೊಂಡು ರಾಜಸ್ಥಾನದ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ನನ್ನು ಮತಾಂಧ ಶಕ್ತಿಗಳು ತಾಲಿಬಾನ್ ಮಾದರಿಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಉಗ್ರವಾಗಿ ಖಂಡಿಸಿದ್ದಾರೆ. ರಾಜಸ್ಥಾನದ ಈ ಘಟನೆ ಹೇಯ ಕೃತ್ಯವಾಗಿದ್ದು, ಮಾನವೀಯ ಸಮಾಜ ಕ್ಷಮಿಸಲಾರದ ಘಟನೆಯಾಗಿದೆ. ತಾಲಿಬಾನ್ ಮಾದರಿಯಲ್ಲಿ ಹತ್ಯೆಯ ಚಿತ್ರಣ ಮಾಡಿ ದೇಶದಲ್ಲಿ ಭಯದ ವಾತಾವರಣ ಮೂಡಿಸಲು ಕೆಲ ಶಕ್ತಿಗಳು ಪ್ರಯತ್ನ ಮಾಡುತ್ತಿದೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ […]
ಉಪಚುನಾವಣಾ ಫಲಿತಾಂಶ: ಎಲ್ಲ ಪಕ್ಷಗಳಿಗೂ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಅನುಭವ

ನವದೆಹಲಿ: ಮೂರು ಲೋಕಸಭಾ ಸ್ಥಾನಗಳಿಗೆ ಉತ್ತರ ಪ್ರದೇಶದ ಅಜಂಗಢ ಮತ್ತು ರಾಂಪುರ ಹಾಗೂ ಪಂಜಾಬ್‌ನ ಸಂಗ್ರೂರ್ ಮತ್ತು ವಿಧಾನಸಭಾ ಸ್ಥಾನಗಳಿಗೆ ತ್ರಿಪುರಾ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ದೆಹಲಿಯಲ್ಲಿ ಉಪಚುನಾವಣೆಗಳು ನಡೆದಿದ್ದವು. ಚುನಾವಣಾ ಫಲಿತಾಂಶದಲ್ಲಿ ಉತ್ತರಪ್ರದೇಶದ ರಾಮ್‌ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಲೋಧಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ದೆಹಲಿಯ ರಾಜಿಂದರ್ ನಗರ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದೆ. ಏತನ್ಮಧ್ಯೆ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಟೌನ್ […]