ಮುಂಡ್ಕಿನಜೆಡ್ಡು: ಫೆ.19 ರಿಂದ 26 ರವರೆಗೆ 47 ನೇ ವರ್ಷದ ಭಜನಾ ಸಪ್ತಾಹ
ಚೇರ್ಕಾಡಿ: ಇಲ್ಲಿನ ಮುಂಡ್ಕಿನಜೆಡ್ಡು ಶ್ರೀಗೋಪಾಲಕೃಷ್ಣ ಮಂದಿರದಲ್ಲಿ 47 ನೇ ವರ್ಷದ ಭಜನಾ ಸಪ್ತಾಹವು ಫೆ.19 ರಿಂದ 26 ರವರೆಗೆ ನಡೆಯಲಿದ್ದು, ಹಲವು ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯು ತಿಳಿಸಿದೆ.
ತೆಂಕಪೇಟೆ: ಕಾಶೀಮಠಾಧೀಶರಿಂದ ಭಜನಾ ಸಪ್ತಾಹ ಪೌಳಿ ರಜತ ಅಲಂಕಾರಿಕ ಮಂಟಪ ಸಮರ್ಪಣೆ
ತೆಂಕಪೇಟೆ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಶನಿವಾರದಂದು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ನೂತನ ಸುವರ್ಣ ಖಚಿತ ಶ್ರೀಲಕ್ಷ್ಮೀಹಾರ ಸಮರ್ಪಣೆ ಮಾಡಿದರು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಭಜನಾ ಸಪ್ತಾಹ ಪೌಳಿಯಲ್ಲಿ ನೂತನವಾಗಿ ನಿರ್ಮಿಸಿದ ರಜತ ಅಲಂಕಾರಿಕ ಮಂಟಪವನ್ನು ಪೂಜ್ಯ ಶ್ರೀಗಳ ಆರತಿ ಬೆಳಗಿಸಿ ಉದ್ಘಾಟಿಸಿದರು. ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು. ದೇವಳದ […]
ಶ್ರೀಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಮಹೋತ್ಸವ ಆರಂಭ
ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆಯುವ ಭಜನಾ ಸಪ್ತಾಹವು ಸೋಮವಾರದಂದು ಪ್ರಾರಂಭವಾಯಿತು. ಶ್ರೀದೇವರಿಗೆ ಅರ್ಚಕರಾದ ಕೆ. ಜಯದೇವ್ ಭಟ್ ರವರ ಉಪಸ್ಥಿತಿಯಲ್ಲಿ ಪ್ರಾರ್ಥನೆಯನ್ನುಸಲ್ಲಿಸಿ, ಮಂಗಳಾರತಿ ಬೆಳಗಿಸಿ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಯಲ್ಲಿರಿಸಿ ಮಹಾ ಮಂಗಳಾರತಿ ಬೆಳಗಿಸಿ ಬಳಿಕ ಭಜನಾ ದೀಪಸ್ತಂಭಕ್ಕೆ ಪ್ರಧಾನ ಅರ್ಚಕರಾದ ಜಯದೇವ್ ಭಟ್ ಆರತಿ ಬೆಳಗಿಸಿದರು. ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ಶ್ರೀದೇವರನ್ನು ಹಾಗೂ ಪರಿವಾರ ದೇವರನ್ನು ವಿಶೇಷ […]
ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋ ರಾತ್ರಿ ಭಜನಾ ಸಪ್ತಾಹ ಸಂಪನ್ನ
ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಊರ ಪರಊರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನಡೆದು ಮಂಗಳವಾರದಂದು 122ನೇ ಭಜನಾ ಸಾಪ್ತಾಹ ಮಂಗಲೋತ್ಸವ ಸಂಪನ್ನಗೊಂಡಿತು. ದೇವಳದ ಅರ್ಚಕ ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಭಜನಾ ಆರಾಧ್ಯ ದೇವರಾದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ದೀಪ ಸ್ತಂಭಕ್ಕೆ ಪ್ರದಕ್ಷಿಣೆ ಗೈದರು. ಶ್ರೀ ದೇವರಿಗೆ […]