ರಾಜ್ಯರಾಜಧಾನಿಯಲ್ಲಿ ಕರಾವಳಿಯ ಕಲರವ: ‘ನಮ್ಮ ಕರಾವಳಿ ಉತ್ಸವ’ಕ್ಕೆ ಅಭೂತಪೂರ್ವ ಜನ ಬೆಂಬಲ
ಬೆಂಗಳೂರು: ಜೆ.ಪಿ.ನಗರದ ಬಿಬಿಎಂಪಿ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ‘ನಮ್ಮ ಕರಾವಳಿ ಉತ್ಸವ’ವನ್ನು ಕರಾವಳಿ ಒಕ್ಕೂಟದವರೆಲ್ಲಾ ಸೇರಿ ಅದ್ಧೂರಿಯಾಗಿ ಆಯೋಜಿಸಿದರು. ಕರಾವಳಿಗರ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರು, ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದಲ್ಲಿ ಕರಾವಳಿ ಭಾಗದವರು ಮುಂದೆ, ಇದರ ಹಿಂದೆ ಹಿರಿಯರ ಮಾರ್ಗದರ್ಶನ, ಪರಂಪರೆ, ಸಂಸತಿ ಪ್ರಮುಖ ಕಾರಣ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ಮಹಿಳೆಯರು ತಮ್ಮ ದಿನನಿತ್ಯದ ಕೆಲಸದೊಂದಿಗೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ […]
2,000 ಮರಗಳನ್ನು ಕಡಿಯಲು 48 ಗಂಟೆಯಲ್ಲಿ ಅರ್ಜಿ ಸಲ್ಲಿಸಿದ ಬೆಂಗಳೂರು ನಾಗರಿಕರು!!
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಪಾಯ ಹಾಗೂ ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕಡಿಯಲು ಸಾರ್ವಜನಿಕರಿಗೆ ಅರ್ಜಿ ಹಾಕುವಂತೆ ಹೇಳಿತ್ತು. ಆಶ್ಚರ್ಯವೆಂದರೆ ಬರೀ 48 ಗಂಟೆಯಲ್ಲಿ 2,000 ಮರಗಳನ್ನು ಕಡಿಯಲು ಅರ್ಜಿಗಳು ಬಂದಿವೆ.ಆದರೆ ಈ ಎಲ್ಲ ಮರಗಳನ್ನು ಕಡಿಯುವುದಿಲ್ಲ. ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ಹಾಗೂ ಸಮಾಲೋಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಮರಗಳನ್ನು ಕಡಿಯುವ ಬದಲು, ಕೆಲ ಕೊಂಬೆಗಳನ್ನು ಕಡಿದು ಮರಗಳನ್ನು ಉಳಿಸುಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಸತ್ತ ಮರಗಳು […]
ಬೆಂಗಳೂರು ರಸ್ತೆಯಲ್ಲಿ ಗಂಡಾತರದ ಗುಂಡಿಗಳು: ಬಿಬಿಎಂಪಿಗೆ ಎಚ್ಚರಿಕೆ ನೀಡಿದ ರಾಜ್ಯ ಹೈಕೋರ್ಟ್
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೋಮವಾರದಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಎಚ್ಚರಿಕೆ ನೀಡಿದ್ದು, ನ್ಯಾಯಾಲಯವು ನಾಗರಿಕ ಸಂಸ್ಥೆಯ ಮೇಲೆ ಕೂಗಾಡದೆ ಇರಬಹುದು, ಅದರರ್ಥ ನಗರದಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಖಾತ್ರಿಪಡಿಸುವ ಬಗ್ಗೆ ಅದು ಗಂಭೀರವಾಗಿಲ್ಲ ಎಂದಲ್ಲ ಎಂದು ಹೇಳಿದೆ. ಬಿಬಿಎಂಪಿ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿ ವರ್ತಿಸುವಂತೆಯೂ ಹೈಕೋರ್ಟ್ ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿ ವಕೀಲರಿಗೆ, “ನೀವು ತುರ್ತು ಅವಶ್ಯಕತೆಯನ್ನು ತಿಳಿಸಿರಿ, ಈ ಪರಿಸ್ಥಿತಿಯ ಗಂಭೀರತೆ ಮತ್ತು […]
ಬೆಂಗಳೂರು: ನಗರದ ಸಮಸ್ಯೆಗಳ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆ ನಟ ಅನಿರುದ್ದ್ ಚರ್ಚೆ
ಬೆಂಗಳೂರು: ಶನಿವಾರ ನಮ್ಮ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಅವರ ತಂಡದೊಡನೆ ಚಿತ್ರನಟ ಅನಿರುದ್ದ್ ಚರ್ಚೆ ನಡೆಸಿದ್ದಾರೆ. ಬೆಂಗಳೂರು ನಗರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅನಿರುದ್ದ್, ಬಿಬಿಎಂಪಿ ಎದುರು ಕೆಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಘನತ್ಯಾಜ್ಯ ನಿರ್ವಹಣೆ, ಸುರಕ್ಷತೆ, ಹಸಿರು ಹೊದಿಕೆಯ ಹೆಚ್ಚಳ ಮತ್ತು ಆರೋಗ್ಯ ಹಾಗೂ ನೈರ್ಮಲ್ಯ, ಕೆರೆಗಳ ಪುನರುಜ್ಜೀವನ ಮುಂತಾದ ವಿಷಯಗಳ ಕುರಿತು ಸಮಾನ ಸಂಖ್ಯೆಯ ಮಹಿಳೆಯರನ್ನೊಳಗೊಂಡ ವಿಜ್ಞಾನಿಗಳು, ಇಂಜಿನಿಯರ್ ಗಳು, ನಗರ ಯೋಜಕರು, […]