ಅಂಧರ ಟಿ20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ: ಮೂರನೇ ಬಾರಿಯೂ ಕಪ್ ನಮ್ದೇ
ಬೆಂಗಳೂರು: ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್ನ ಅಂತಿಮ ಹಣಾಹಣಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಈ ಬಾರಿಯೂ ಕಪ್ ನಮ್ದೇ ಎಂದು ಬೀಗಿದೆ. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ 120 ರನ್ಗಳ ಬೃಹತ್ ಅಂತರದಿಂದ ಎದುರಾಳಿಗಳನ್ನು ಸೋಲಿಸಿದೆ. ಆರಂಭದಿಂದಲೂ ಆತಿಥೇಯ ತಂಡವು ತಮ್ಮ ನೆರೆಯ ಬಾಂಗ್ಲಾದೇಶದ ವಿರುದ್ಧ ಫೈನಲ್ಗೆ ಹೋಗುವ ನೆಚ್ಚಿನ ತಂಡವಾಗಿತ್ತು ಮತ್ತು ಬೆಂಗಳೂರಿನ ಮೈದಾನದಲ್ಲಿ ಇತಿಹಾಸವನ್ನು ಸೃಷ್ಟಿಸಿ ಅದ್ಭುತ ವಿಜಯವನ್ನು ಪೂರ್ಣಗೊಳಿಸಿತು. #TeamIndia beat Bangladesh by […]
ಬೈಂದೂರು ಹುಡುಗರ ಬೇಕರಿ ದುರಸ್ತಿಗೊಳಿಸಿ ಮಾನವೀಯತೆ ಮೆರೆದ ಡಾ. ಗೋವಿಂದ ಬಾಬು ಪೂಜಾರಿ
ಬೆಂಗಳೂರು: ಇತ್ತೀಚೆಗಷ್ಟೆ ಕುಂದನಹಳ್ಳಿ ಗೇಟ್ ಸಮೀಪ ಬೈಂದೂರಿನ ಬೇಕರಿ ಹುಡುಗರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾದ ಡಾ. ಗೋವಿಂದ ಬಾಬು ಪೂಜಾರಿಯವರು ಹಾನಿಗೊಳಗಾದ ಬೇಕರಿಯನ್ನು ದುರಸ್ತಿ ಮಾಡುವ ಭರವಸೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಅವರ ಸಿಬ್ಬಂದಿ ವರ್ಗದವರು ಆದಿತ್ಯವಾರ ಹಾಗೂ ಸೋಮವಾರದಂದು ಬೇಕರಿ ಹುಡುಗರ ಜೊತೆಗಿದ್ದು ಹಾನಿಗೊಳಗಾದ ಉಪಕರಣಗಳನ್ನು ದುರಸ್ತಿಗೊಳಿಸಿ ಡಾ. ಗೋವಿಂದ ಬಾಬು ಪೂಜಾರಿಯವರ ಪರವಾಗಿ ಪೂಜೆ ಸಲ್ಲಿಸಿ ಬೇಕರಿಯನ್ನು ಪುನರಾಂಭಿಸಿದ್ದಾರೆ. ದೂರದ ಬೆಂಗಳೂರಿಗೆ ಬದುಕು […]
ಬೆಂಗಳೂರಿನಲ್ಲಿ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ: ಕಠಿಣ ಕ್ರಮಕ್ಕೆ ಒಕ್ಕೊರಲ ಆಗ್ರಹ
ಬೆಂಗಳೂರು: ಹೊಟ್ಟೆಪಾಡಿಗೆಂದು ಊರು ಬಿಟ್ಟು ಪರವೂರು ಸೇರಿ ನಿಯತ್ತಿನಿಂದ ದುಡಿಯುತ್ತಿದ್ದ ಯುವಕರ ಮೇಲೆ ಸಿಗರೇಟಿನ ಹಣ ಕೇಳಿದರೆನ್ನುವ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ. ಬೆಂಗಳೂರಿನ ಕುಂದಲಹಳ್ಳಿ ಎಚ್.ಎ.ಎಲ್ ಸಮೀಪ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರ ಬೈಂದೂರು ಮೂಲದ ನವೀನ್ ಕುಮಾರ್, ಪ್ರಜ್ವಲ್ ಶೆಟ್ಟಿ, ನಿತಿನ್ ಶೆಟ್ಟಿ ಎಂಬುವರ ಮೇಲೆ ಗುರುವಾರದಂದು ಬೆಂಗಳೂರಿನ ಪುಡಿ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಗಳ […]
ಮೈಸೂರು ಮತ್ತು ಚೆನ್ನೈ ನಡುವೆ ಚಲಿಸುವ ದಕ್ಷಿಣ ಭಾರತ ಪ್ರಥಮ ವಂದೇ ಭಾರತ್ ರೈಲು ಇಂದು ಉದ್ಘಾಟನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನಿಂದ ಭಾರತದ ಐದನೇ ವಂದೇ ಭಾರತ್ಗೆ ಚಾಲನೆ ನೀಡಲಿದ್ದು, ಇದು ದಕ್ಷಿಣದ ಮೊದಲ ಸೆಮಿ-ಹೈ-ಸ್ಪೀಡ್ ರೈಲಾಗಿದೆ. ರೈಲು ಮೈಸೂರು ಮತ್ತು ಚೆನ್ನೈ ನಡುವೆ ಚಲಿಸಲಿದ್ದು, ಈ ಮಾರ್ಗದ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ವಂದೇ ಭಾರತ್ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಉದ್ಘಾಟನೆಗೊಂಡು ನಂತರ ಚೆನ್ನೈಗೆ ಆಗಮಿಸಲಿದೆ. ಹೊಸ ವಂದೇ ಭಾರತ್ ರೈಲಿನ ಪ್ರಮುಖ ಅಂಶಗಳು: ಚೆನ್ನೈನಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರು ಕಾರ್ ಕುರ್ಚಿಗೆ 1,200 ರೂ ಮತ್ತು […]
ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾನ ಮಹಾನ್ ಚೇತನ ಶಂಕರ್ ನಾಗ್ ರವರ 68 ನೇ ಜನ್ಮ ದಿನ
ಇವತ್ತು ಕನ್ನಡ ಚಿತ್ರರಂಗದ ಯಶಸ್ಸನ್ನು ಕಂಡಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ವಿಚಾರ ಶಂಕರ್ ನಾಗ್ ಇದ್ದಿದ್ದರೆ ಈ ಯಶಸ್ಸು ಯಾವತ್ತೋ ಬಂದಿರುತ್ತಿತ್ತು. ಶಂಕರ್ ನಾಗ್ ಬರಿಯ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅದಮ್ಯ ಚೈತನ್ಯ, ಎಂದಿಗೂ ಬತ್ತದ ಉತ್ಸಾಹ, ಕಾಲಕ್ಕಿಂತ ಒಂದು ಹೆಜ್ಜೆ ಮುಂದಿರಬೇಕೆನ್ನುವ ತುಡಿತ. ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾಗಿ 32 ವರ್ಷಗಳು ಸಂದರೂ ಶಂಕರ್ ನಾಗ್ ನೆನಪು ಎಳ್ಳಷ್ಟೂ ಮಾಸಿಲ್ಲ. ಅವರಿಂದು ನಮ್ಮ ಜೊತೆಗಿರುತ್ತಿದ್ದರೆ ಅವರಿಗೆ 68 ವರ್ಷ ತುಂಬುತ್ತಿತ್ತು. ಇಷ್ಟು ವರ್ಷಗಳಲ್ಲಿ […]