ಬೆಂಗಳೂರು: ದೇಶದ ಪ್ರಪ್ರಥಮ 3ಡಿ-ಮುದ್ರಿತ ಅಂಚೆ ಕಚೇರಿ ಉದ್ಘಾಟನೆ; 43 ದಿನಗಳಲ್ಲಿ ಕಾಮಗಾರಿ ಪೂರ್ಣ!!
ಬೆಂಗಳೂರು: ಕೇಂದ್ರ ರೈಲ್ವೇ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ದೇಶಕ್ಕೆ ಸಮರ್ಪಿಸಿದರು. ಜನರಲ್ ಪೋಸ್ಟ್ ಆಫೀಸ್ ಕಟ್ಟಡದಿಂದ ವರ್ಚುವಲ್ ಮೂಲಕ ಅಂಚೆ ಕಚೇರಿಯನ್ನು ಉದ್ಘಾಟಿಸಿದರು. The spirit of Aatmanirbhar Bharat!🇮🇳India’s first 3D printed Post Office. 📍Cambridge Layout, Bengaluru pic.twitter.com/57FQFQZZ1b — Ashwini Vaishnaw (@AshwiniVaishnaw) August 18, 2023 ಕಚೇರಿಯು ಅದರ ಗಡುವಿಗಿಂತಲೂ […]
ಬೆಳ್ತಂಗಡಿಯ ಥೋಮಸ್ ನೀಲಿಯಾರ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ಕಣಕ್ಕೆ?
ಮಂಗಳೂರು: ಮೂಲತಃ ದ.ಕ ಜಿಲ್ಲೆಯ ಬೆಳ್ತಂಗಡಿಯ ಗಂಡಿಬಾಗಿಲು ಗ್ರಾಮದ ನಿವಾಸಿಯಾಗಿರುವ, ಪ್ರಸ್ತುತ 25 ವರ್ಷಗಳಿಂದ ಬೆಂಗಳೂರು ಸರ್ವಜ್ಞನಗರದಲ್ಲಿ ನೆಲೆಯಾಗಿರುವ ಥೋಮಸ್ ನೀಲಿಯಾರ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವೀಧರರಾಗಿರುವ ಇವರು, ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಸದಸ್ಯರು ಮತ್ತು ಕೇರಳದ ಪ್ರಭಾರಿ ಆಗಿದ್ದು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿದ್ದಾರೆ. ಥೋಮಸ್(ಸುರೇಶ್) ಚೆರಿಯನ್ ನೀಲಿಯಾರ ಸರ್ವಜ್ಞ ನಗರ ಕ್ಷೇತ್ರದ ಬಿಜೆಪಿ ನಾಮಾಂಕಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಹಾಲಿ ಕಾಂಗ್ರೆಸ್ […]
ಬೆಂಗಳೂರು: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೇಲಿಂದ 10 ರೂ ಮುಖಬೆಲೆ ನೋಟು ಎಸೆದ ವ್ಯಕ್ತಿ; ಸಂಚಾರ ಅಸ್ತವ್ಯಸ್ತ
ಬೆಂಗಳೂರು: ಇಲ್ಲಿನ ಕೆಆರ್ ಮಾರುಕಟ್ಟೆಯ ಫ್ಲೈಓವರ್ ಮೇಲಿನಿಂದ ವ್ಯಕ್ತಿಯೊಬ್ಬ ಹಣ ಎಸೆದಿರುವ ಘಟನೆ ಮಂಗಳವಾರದಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಕಪ್ಪು ಶರ್ಟ್ ಧರಿಸಿರುವ ಫ್ಲೈಓವರ್‌ನಲ್ಲಿದ್ದ ಅರುಣ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹಣವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಆತ ಎಸೆದ ಹಣದಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಕೂಡಲೇ ಫ್ಲೈಓವರ್ ಕೆಳಗೆ ಜಮಾಯಿಸಿದ ಜನರು ನೋಟುಗಳನ್ನು ಹೆಕ್ಕಲು ಆರಂಭಿಸಿದರು. ಹಣ ಹೆಕ್ಕುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ […]
ಬೆಂಗಳೂರು-ಮಂಗಳೂರು ಮಾರ್ಗಕ್ಕೆ ಗತಿ ಶಕ್ತಿ: ರಾ.ಹೆ -75ರ ನೆಲಮಂಗಲ-ದೇವಿಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ
ಬೆಂಗಳೂರು: ಬೆಂಗಳೂರು-ಮಂಗಳೂರು ರಾ.ಹೆ-75 ರಲ್ಲಿ ನೆಲಮಂಗಲ-ದೇವಿಹಳ್ಳಿ ನಡುವಿನ ವಿಭಾಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ವಿಭಾಗವು ಮೈಸೂರು, ಸಕಲೇಶಪುರ, ಹೆಳೇಬೀಡು, ಧರ್ಮಸ್ಥಳ ಮುಂತಾದ ಪ್ರವಾಸಿ ತಾಣಗಳಿಗೆ ವೇಗದ ಸಂಪರ್ಕವನ್ನು ಸಶಕ್ತಗೊಳಿಸುತ್ತದೆ . ವಾರಾಂತ್ಯದಲ್ಲಿ ಈ ಮಾರ್ಗವು ಸುಮಾರು 30000 ವಾಹನಗಳನ್ನು ಧಾರಣೆ ಮಾಡುವ ಸಾಮಾರ್ಥ್ಯ ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ-ಸಕಲೇಶಪುರ-ಧರ್ಮಸ್ಥಳವನ್ನು ಸಂಪರ್ಕಿಸುವ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ. ಮೈಕ್ರೊ-ಸರ್ಫೇಸಿಂಗ್ ಮಿಶ್ರಣದ ಬಾಗುವ ಶಕ್ತಿಯನ್ನು ಹೆಚ್ಚಿಸಲು ಫೈಬರ್ ಬಲವರ್ಧಿತ […]
ವಿಧಾನಸಭೆ ಅಧಿವೇಶನ: ಒಳಗೆ ವೀರ ಸಾವರ್ಕರ್ ಭಾವಚಿತ್ರ; ಹೊರಗೆ ಪ್ರತಿಪಕ್ಷಗಳ ಪ್ರತಿಭಟನೆ
ಬೆಂಗಳೂರು: ರಾಜ್ಯ ವಿಧಾನಸಭೆಯ ಒಳಗೆ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಿರುವ ಕರ್ನಾಟಕ ಬಿಜೆಪಿ ಸರ್ಕಾರದ ಕ್ರಮವು ವಿಧಾನಸೌಧ ಕಟ್ಟಡದ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು. ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಆದರೆ ವಿರೋಧ ಪಕ್ಷಗಳು ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ವಿಧಾನಸಭೆಯಲ್ಲಿ ವಿವಾದಾತ್ಮಕ ವ್ಯಕ್ತಿಯನ್ನು ಪ್ರದರ್ಶಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ವೀರ ಸಾವರ್ಕರ್ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ ಅಭಿಯಾನದ ಭಾಗವಾಗಿ ಬಿಜೆಪಿಯು […]