ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯ ಚಿಕಿತ್ಸೆ ಪಡೆಯುವ ವಿದೇಶೀ ಪ್ರಜೆಗಳಿಗಾಗಿ ‘ಆಯುಷ್ ವೀಸಾ’ ಪರಿಚಯಿಸಿದ ಕೇಂದ್ರ

ನವದೆಹಲಿ: ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಗಳ ಮೂಲಕ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ಹೊಸದಾಗಿ ‘ಆಯುಷ್ ವೀಸಾ’ ವನ್ನು ಪರಿಚಯಿಸಲಾಗಿದೆ. ಈ ವೀಸಾ ವರ್ಗದ ಪರಿಚಯವು ವಿಶೇಷ ವೀಸಾ ಯೋಜನೆಯನ್ನು ರಚಿಸುವ ಪ್ರಸ್ತಾಪವನ್ನು ಪೂರೈಸುತ್ತದೆ, ಇದು ಆಯುಷ್ ವ್ಯವಸ್ಥೆಗಳು ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸಕ ಆರೈಕೆ, ಕ್ಷೇಮ ಮತ್ತು ಯೋಗ ಚಿಕಿತ್ಸೆಗಳಿಗಾಗಿ ಪ್ರತ್ಯೇಕವಾಗಿ ಭಾರತಕ್ಕೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ವೀಸಾ ಕೈಪಿಡಿಯಲ್ಲಿ […]

ಪೂನಾದ ಆಸ್ಪತ್ರೆಯೊಂದಕ್ಕೆ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದಾರೆ

ಪೂನಾದಲ್ಲಿರುವ ಆಸ್ಪತ್ರೆಯೊಂದಕ್ಕೆ ಅನುಭವಿ ಆಯುರ್ವೇದ ಚಿಕಿತ್ಸಕರು ಬೇಕಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9767892255 ಸಂಪರ್ಕಿಸಿ

ಭಾರತೀಯ ಆಯುರ್ವೇದ ಪರಂಪರೆಗೆ ಪಕೃತಿ ನೀಡಿದ ವರದಾನ: ‘ಅಮೃತಬಳ್ಳಿಯ’ ಅನನ್ಯ ಆರೋಗ್ಯ ಪ್ರಯೋಜನಗಳು

ವಿಶ್ವದಾದ್ಯಂತ ನಡೆಸಿದ ಅನೇಕ ಅಧ್ಯಯನಗಳ ಆಧಾರದಲ್ಲಿ ಭಾರತದ ಆಯುರ್ವೇದ ಚಿಕಿತ್ಸೆಯನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೋಗ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಆಯುರ್ವೇದ ಪರಂಪರೆಯಲ್ಲಿ ಪಕೃತಿ ವರವಾಗಿ ನೀಡಿರುವ ಮೂರು ಅಮೃತ ಸಸ್ಯಗಳಿವೆ. ಬೆಳ್ಳುಳ್ಳಿ, ಹರೀತಕಿ ಮತ್ತು ಅಮೃತಬಳ್ಳಿ ಇವೇ ಆ ಮೂರು ಸಸ್ಯಗಳು. ಹೆಸರೇ ಸೂಚಿಸುವಂತೆ ಸಾವಿನದವಡೆಯಲ್ಲಿರುವವರನ್ನೂ ಬದುಕಿಸುವ ಶಕ್ತಿ ಉಳ್ಳ ಸಸ್ಯವೇ ಅಮೃತ ಬಳ್ಳಿ. ಸಂಸ್ಕೃತದಲ್ಲಿ ಅಮೃತವಲ್ಲಿ, ಅಮೃತ, ಗುಡೂಚಿ ಮತ್ತು ಹಿಂದಿಯಲ್ಲಿ ಗಿಲೋಯ್ ಎಂದು ಕರೆಯಲ್ಪಡುವ […]

ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್‌, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]

ಶಸ್ತ್ರಚಿಕಿತ್ಸೆ ಇಲ್ಲದೆ ಪ್ರಾಣಾಯಾಮ ಮತ್ತು ಆಯುರ್ವೇದದಿಂದ ವೆರಿಕೋಸ್ ವೈನ್ಸ್ ಮುಕ್ತ ಸಮಾಜಕ್ಕೆ ಪಣತೊಟ್ಟಿರುವ ಡಾ. ಎಂ.ವಿ ಉರಾಳ್

‘ಆರೋಗ್ಯವೇ ಭಾಗ್ಯ’ ಎಂಬುದು ತಿಳಿದಿದ್ದರೂ, ಇಂದಿನ ವೇಗದ ಬದುಕಿನ ಶೈಲಿ ಮತ್ತು ದಿನಚರಿಯ ಕ್ರಮಗಳು ನಮ್ಮಆರೋಗ್ಯವನ್ನು ಸೂಕ್ಷ್ಮವಾಗಿಸಿವೆ. ಇಂದಿನ ದಿನ ಮನೆಯ ಕೆಲಸದಿಂದ ಹಿಡಿದು ಉದ್ಯೋಗದವರೆಗೂ ನಿಂತು ಮಾಡುವ ಕೆಲಸಗಳು ಅಥವಾ ಸುಧೀರ್ಘಕಾಲ ಕುಳಿತುಕೊಂಡು ಮಾಡುವ ಕೆಲಸಗಳೇ ಹೆಚ್ಚು. ಹೀಗೆ ಸತತ ನಿಲ್ಲುವಿಕೆಯು ಕೆಲವೊಮ್ಮೆ ಕಾಲಿನ ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೈನ್ಸ್” ಎನ್ನುತ್ತಾರೆ. ಇದರಿಂದುಂಟಾಗುವ ನೋವು ಕ್ರಮೇಣ ಹೆಚ್ಚಾಗಿ, ಚರ್ಮಕಪ್ಪಾಗುವಿಕೆ ಮತ್ತು ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯಿಂದ ಬೆರಳು ಅಥವಾ ಕಾಲುಗಳನ್ನು ಕತ್ತರಿಸುವ […]