ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್‌, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

Buy Cardamom Powder/Elaichi Powder/Green Cardamom Powder/Velduda Powder (25  Gms) Online at Low Prices in India - Amazon.in

ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ

ಏಲಕ್ಕಿ ಚಹಾವು ಅಜೀರ್ಣ, ಎದೆಯುರಿ, ತೇಗು, ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಸೆಳೆತದಂತಹ ಜಠರಗರುಳಿನ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆಮದ್ದು. ಏಲಕ್ಕಿಯ ತಂಪು ಗುಣವು ಆಮ್ಲೀಯತೆಯನ್ನು(ಆಸಿಡಿಟಿ) ನಿವಾರಿಸಲು ಸಹಾಯ ಮಾಡುತ್ತದೆ. ಒಂದೆರಡು ಏಲಕ್ಕಿಯನ್ನು ಜಗಿಯುವುದು ವಾಕರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಲಕ್ಕಿಯನ್ನು ನೇರವಾಗಿ ಅಥವಾ ಆಹಾರದ ಮೂಲಕ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಹಸಿವನ್ನು ಹೆಚ್ಚಿಸಬಹುದು.

ಖಿನ್ನತೆಯ ವಿರುದ್ಧ ಹೋರಾಡುತ್ತದೆ

ತನ್ನ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಗಳಿಂದಾಗಿ ಖಿನ್ನತೆ, ಒತ್ತಡ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಏಲಕ್ಕಿಯನ್ನು ಔಷಧದಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಏಲಕ್ಕಿಯ ಖಿನ್ನತೆ-ಶಮನಕಾರಿ ಗುಣಗಳನ್ನು ಇನ್ನೂ ಅಧ್ಯಯನ ಮಾಡಲಾಗಿಲ್ಲ. ಆಯುರ್ವೇದದ ಪ್ರಕಾರ, ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಸೇವಿಸಬಹುದು ಅಥವಾ ನಿಮ್ಮ ಚಹಾಕ್ಕೆ ಸೇರಿಸಿ ಪ್ರಯೋಜನಗಳನ್ನು ಪಡೆಯಬಹುದು.

Satvaa Cardamom Tea at Rs 100/kg in Mumbai | ID: 22219449612

ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ

ಏಲಕ್ಕಿ ಬೀಜಗಳು ಮತ್ತು ಹಣ್ಣುಗಳು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಅದು ನಿಮ್ಮ ಬಾಯಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಈ ಮಸಾಲೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಹಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಬಾಯಿಯ ಹುಣ್ಣು ಮತ್ತು ಬಾಯಿ ಮತ್ತು ಗಂಟಲಿನ ಸೋಂಕುಗಳಿಗೆ ನೈಸರ್ಗಿಕ ಪರಿಹಾರವಾಗಿಯೂ ಇದನ್ನು ಸೂಚಿಸಲಾಗುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ಅಪಧಮನಿಯ ಗೋಡೆಗಳಿಗೆ ಅಂಟಿಕೊಳ್ಳುವ ಮೂಲಕ ಏಲಕ್ಕಿಯು ಪ್ಲೇಟ್ಲೆಟ್ ಗಳ ಒಟ್ಟುಗೂಡಿಸುವಿಕೆಯನ್ನು ತಡೆಗಟ್ಟುತ್ತದೆ ಮತ್ತು ಹೃದಯದಲ್ಲಿ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆಸ್ತಮಾ ಮತ್ತು ಬ್ರಾಂಕೈಟಿಸ್‌ನಿಂದ ಬಳಲುತ್ತಿರುವ ಜನರಿಗೆ ಇದು ಅದ್ಭುತವಾದ ಔಷಧವಾಗಿದೆ ಏಕೆಂದರೆ ಇದು ರಕ್ತ ತೆಳುವಾಗಿಸುವ ಮೂಲಕ ಶ್ವಾಸಕೋಶದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

Benefits of Cardamom And Its Side Effects | Lybrate
Image: Lybrate

ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಪರಿಹಾರ

ಆಯುರ್ವೇದದಲ್ಲಿ, ಏಲಕ್ಕಿಯನ್ನು ಶಕ್ತಿಯುತವಾದ ಕಾಮೋತ್ತೇಜಕ ಎಂದು ವಿವರಿಸಲಾಗಿದೆ. ಇದು ದುರ್ಬಲತೆ ಮತ್ತು ಪೂರ್ವ ಸ್ಖಲನದಂತಹ ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಪರಿಹರಿಸುತ್ತದೆ. ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಪ್ರತಿದಿನ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಸ್ವಲ್ಪ ಪ್ರಮಾಣದ ಏಲಕ್ಕಿ ಬೀಜ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.

ದೇಹದ ವಿಷಕಾರಿ ಅಂಶಗಳನ್ನು ಕಡಿಮೆಗೊಳಿಸುತ್ತದೆ

ಏಲಕ್ಕಿಯು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಿಂದ ತ್ಯಾಜ್ಯ, ಉಪ್ಪು, ಹೆಚ್ಚುವರಿ ನೀರು ಮತ್ತು ವಿಷವನ್ನು ತೆಗೆದುಹಾಕುವ ಮೂಲಕ ಮೂತ್ರನಾಳ, ಮೂತ್ರಕೋಶ ಮತ್ತು ಮೂತ್ರಪಿಂಡಗಳ ಕಶ್ಮಲಗಳನ್ನು ಖಾಲಿ ಮಾಡಲು ಸಹಾಯ ಮಾಡುತ್ತದೆ. ಈ ಮಸಾಲೆ ದೇಹದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Black Cardamom Can Help You Score Flawless Skin And More-Black Cardamom Can  Help You Score Flawless Skin And More

ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ

ಏಲಕ್ಕಿಯ ಉರಿಯೂತದ ಮತ್ತು ಹೆಪ್ಪುಗಟ್ಟುವಿಕೆ-ನಿರೋಧಕ ಗುಣಲಕ್ಷಣಗಳಿಂದಾಗಿ ಮಹಿಳೆಯರ ಋತುಚಕ್ರದ ನೋವು ಮತ್ತು ಇತರ ಮುಟ್ಟು ಸಂಬಂಧಿತ ತೊಂದರೆಗಳನ್ನು ನಿವಾರಿಸುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಪ್ರಯೋಜನಗಳಿಗಾಗಿ ತಜ್ಞರ ಬಳಿ ಸಮಾಲೋಚನೆ ನಡೆಸಿ ಬಳಸುವುದು ಸೂಕ್ತ. ಏಲಕ್ಕಿಯ ಅತಿಯಾದ ಸೇವನೆಯು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಬಳಸುವ ಮುನ್ನ ತಜ್ಞರ ಬಳಿ ಸಮಾಲೋಚಿಸುವುದು ಒಳಿತು.

ಮಾಹಿತಿ: ದ ಹೆಲ್ತ್ ಸೈಟ್.ಕಾಮ್