ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವಿಚಾರ ಸಂಕಿರಣ

ಕಾರ್ಕಳ: ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕೀರ್ಣವು ಇತ್ತೀಚೆಗೆ ನಡೆಯಿತು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗುರುರಾಜ್ ತಂತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವೈದ್ಯರಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯಕೀಯ ವಿಚಾರ ಸಂಕಿರಣಗಳ ಮಹತ್ವವನ್ನು ತಿಳಿಸಿದರು. ಮೊದಲ ದಿನದ ಸಂಪನ್ಮೂಲ ವ್ಯಕ್ತಿ, ಮಿತ್ರ ಆಸ್ಪತ್ರೆಯ ನಿರ್ದೇಶಕರಾದ ಡಾ. ಶ್ರೀಧರ್ ಹೊಳ್ಳ ಮತ್ತು ಮಿತ್ರ ಆಸ್ಪತ್ರೆಯ ಚಿಕಿತ್ಸಕರಾದ ಡಾ. ಸಾರಿಕಾ ಹೊಳ್ಳ ಇವರು ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಿದರು. ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕ […]

ಬಾಲರೋಗ ಮತ್ತು ಪ್ರಸೂತಿತಂತ್ರ ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರ

ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತುಆಸ್ಪತ್ರೆಯ ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗದ ವತಿಯಿಂದ ಮೇ 23 ರಿಂದ 28 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00 ಘಂಟೆಯವರೆಗೆ ಮಕ್ಕಳ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ, ಹಾಗೂ ಮಾಹಿತಿ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕದಿಂದ ಕಾರ್ಯಕ್ರಮ

ಮುನಿಯಾಲು: ಗುರುವಾರದಂದು ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ಎನ್. ಎಸ್. ಎಸ್. ಘಟಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಯುನಿಸೆಫ್ ಸಹಭಾಗಿತ್ವದಲ್ಲಿ ‘ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳನ್ನು ಪಡೆಯಲು ಸಮುದಾಯಗಳಲ್ಲಿ ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಎನ್. ಎಸ್. ಎಸ್. ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆ ಯೋಜನೆ’ ಕಾರ್ಯಕ್ರಮ ನಡೆಯಿತು. ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಡಾ. ಸುದೀಪ ಇವರು ಎನ್. ಎಸ್. ಎಸ್. ಮಹತ್ವ ಮತ್ತು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು. […]