ಭಾರತೀಯ ಆಯುರ್ವೇದ ಪರಂಪರೆಗೆ ಪಕೃತಿ ನೀಡಿದ ವರದಾನ: ‘ಅಮೃತಬಳ್ಳಿಯ’ ಅನನ್ಯ ಆರೋಗ್ಯ ಪ್ರಯೋಜನಗಳು

ವಿಶ್ವದಾದ್ಯಂತ ನಡೆಸಿದ ಅನೇಕ ಅಧ್ಯಯನಗಳ ಆಧಾರದಲ್ಲಿ ಭಾರತದ ಆಯುರ್ವೇದ ಚಿಕಿತ್ಸೆಯನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೋಗ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಆಯುರ್ವೇದ ಪರಂಪರೆಯಲ್ಲಿ ಪಕೃತಿ ವರವಾಗಿ ನೀಡಿರುವ ಮೂರು ಅಮೃತ ಸಸ್ಯಗಳಿವೆ. ಬೆಳ್ಳುಳ್ಳಿ, ಹರೀತಕಿ ಮತ್ತು ಅಮೃತಬಳ್ಳಿ ಇವೇ ಆ ಮೂರು ಸಸ್ಯಗಳು.

VibeX Neem Giloy-Heart-leaved moonseed-Guduchi Herb Fresh Cutting Seed  Price in India - Buy VibeX Neem Giloy-Heart-leaved moonseed-Guduchi Herb  Fresh Cutting Seed online at Flipkart.com

ಹೆಸರೇ ಸೂಚಿಸುವಂತೆ ಸಾವಿನದವಡೆಯಲ್ಲಿರುವವರನ್ನೂ ಬದುಕಿಸುವ ಶಕ್ತಿ ಉಳ್ಳ ಸಸ್ಯವೇ ಅಮೃತ ಬಳ್ಳಿ. ಸಂಸ್ಕೃತದಲ್ಲಿ ಅಮೃತವಲ್ಲಿ, ಅಮೃತ, ಗುಡೂಚಿ ಮತ್ತು ಹಿಂದಿಯಲ್ಲಿ ಗಿಲೋಯ್ ಎಂದು ಕರೆಯಲ್ಪಡುವ ಈ ಸಸ್ಯವು ಕತ್ತರಿಸಿ ಬಿಸಾಕಿದರೂ ಸಾಯುವುದೇ ಇಲ್ಲ! ಇದರಲ್ಲಿರುವ ಗುಣಗಳನ್ನು ವರ್ಣಿಸಲು ಸಾಧ್ಯವೆ ಇಲ್ಲವೇನೋ ಎಂಬಷ್ಟು ಅದ್ಭುತ ಶಕ್ತಿ ಈ ಸಸ್ಯಕ್ಕಿದೆ.

ಅಮೃತ ಎಂದರೆ ಅಮರತ್ವದ ಮೂಲ. ಗುಡೂಚಿ ಎಂದರೆ ದೇಹವನ್ನು ರೋಗಗಳಿಂದ ರಕ್ಷಿಸುವುದು. ಈ ಹಸಿರು ಬಣ್ಣದ ಹೃದಯದ ಆಕಾರದ ಎಲೆಗಳನ್ನು ಹೊಂದಿರುವ ಪೊದೆ ಬಳ್ಳಿಯ ಸಸ್ಯವನ್ನು ‘ರಸ’ ಅಥವಾ ಕಹಿ ಮತ್ತು ಸಂಕೋಚಕ ಮತ್ತು ‘ವೀರ್ಯ’ ಅಂದರೆ ಬಿಸಿ ಎಂದು ವರ್ಗೀಕರಿಸಲಾಗಿದೆ. ಇದು ಜೀರ್ಣಕಾರಿ ಬೆಂಕಿಯನ್ನು ಹೊತ್ತಿಸುವ ಕರ್ಮ (ಕ್ರಿಯೆ) ಹೊಂದಿದೆ ಎಂದು ಉಲ್ಲೇಖವಿದೆ. ಈ ಸಸ್ಯವು ಮನುಷ್ಯನ ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫದೋಷಗಳನ್ನು ಸಮತೋಲನಗೊಳಿಸುತ್ತದೆ.

Amrutha Balli Powder 100g - Suggi

ಪಿತ್ತದ ಅತಿಯಾದ ಶಾಖದಿಂದ ಉಂಟಾಗುವ ಕಣ್ಣು, ಮೂತ್ರ, ಚರ್ಮ, ಉಸಿರಾಟ ಮತ್ತು ಅಜೀರ್ಣದ ಅಸ್ವಸ್ಥತೆಗಳಂತಹ ಉರಿಯೂತದ ಪರಿಸ್ಥಿತಿಗಳಿಗೆ ಅಮೃತಬಳ್ಳಿ ಉಪಯುಕ್ತವೆಂದು ಆಯುರ್ವೇದ ವೈದ್ಯರು ಕಂಡುಕೊಂಡಿದ್ದಾರೆ. ಅದರ ಉರಿಯೂತ ನಿರೋಧಕ ಗುಣಲಕ್ಷಣಗಳಿಂದಾಗಿ ಕೀಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುವ ಚರ್ಮ ಮತ್ತು ಅಜೀರ್ಣದ ಸಮಸ್ಯೆಗಳಿಗೆ, ಸೆಳೆತವನ್ನು ಉಂಟುಮಾಡುವ ವಾತ ದೋಷಗಳಿಗೆ ಸಸ್ಯವು ಉಪಯುಕ್ತವಾಗಿದೆ.

ಡಾ. ಜಯದೇವ್ ಸಿಂಗ್ ಅವರ ಪ್ರಕಾರ ಪುರಾತನ ಆಯುರ್ವೇದ ಚಿಕಿತ್ಸಾ ಪ್ರವರ್ತಕರಾದ ಚರಕ ಮಹರ್ಷಿಗಳು ಅಮೃತ ಬಳ್ಳಿಯನ್ನು ವಯ, ವಯಸ್ಸಿಗೆ ಸಂಬಂಧಿಸಿದ ಮತ್ತು ಸ್ಥಪನ, ಜೀವನ ಮತ್ತು ಆರೋಗ್ಯದ ಪುನಃಸ್ಥಾಪನೆಗೆ ಸಂಬಂಧಿಸಿದ ಗಿಡಮೂಲಿಕೆಗಳ ಗುಂಪಿನ ಅಡಿಯಲ್ಲಿ ವರ್ಗೀಕರಿಸಿದ್ದಾರೆ. ಮಹರ್ಷಿ ಈ ನಾಲ್ಕು ಗಿಡಮೂಲಿಕೆಗಳ ಗುಂಪನ್ನು ಮೇಧ್ಯ ರಸಾಯನ ಎಂದು ವರ್ಗೀಕರಿಸಿದ್ದಾರೆ. ಅಮೃತಬಳ್ಳಿ, ಗೋಟು ಕೊಲ, ಯಷ್ಟಿಮಧು ಮತ್ತು ಶಂಖಪುಷ್ಪಿ ಇವು ಮೇಧಾ ಶಕ್ತಿಯನ್ನು ಉತ್ತೇಜಿಸುವ ಸಸ್ಯಗಳು. ಬುದ್ಧಿಶಕ್ತಿ, ಅರಿವಿನ ಕಾರ್ಯ ಮತ್ತು ಸ್ಮರಣೆಯನ್ನು ಪುನಃಸ್ಥಾಪಿಸುವ ಸಸ್ಯಗಳಲ್ಲಿ ಅಮೃತ ಬಳ್ಳಿಯೂ ಒಂದು. ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತಗೊಳಿಸಲು, ತರ್ಕಬದ್ಧ ಚಿಂತನೆ, ತಾರ್ಕಿಕತೆಯನ್ನು ಉತ್ತೇಜಿಸಲು, ಸ್ಮರಣೆಯನ್ನು ಹೆಚ್ಚಿಸಲು ಮತ್ತು ಧಾರಣಾ ಅವಧಿಯನ್ನು ಸುಧಾರಿಸಲು ಈ ಗಿಡಮೂಲಿಕೆಗಳನ್ನು ಶಿಫಾರಸು ಮಾಡಲಾಗಿದೆ.

ಆಯುರ್ವೇದ ಸಂಶೋಧಕ ಅವ್ನೀಶ್ ಉಪಾಧ್ಯಾಯ್ ಅವರ ಪ್ರಕಾರ ಅಮೃತಬಳ್ಳಿಯ ಔಷಧೀಯ ಗುಣಗಳು ಇಂತಿವೆ:

# ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುವುದು
# ಜ್ವರ ಮತ್ತು ಸೆಳೆತವನ್ನು ನಿವಾರಿಸುವುದು
# ಉರಿಯೂತದ ವಿರುದ್ಧ ಹೋರಾಡುವುದು
# ಉತ್ಕರ್ಷಣ ನಿರೋಧಕ ಕಾರ್ಯಗಳನ್ನು ನಿರ್ವಹಿಸುವುದು
# ಗಂಟುಗಳ ಆರೋಗ್ಯವನ್ನು ಉತ್ತೇಜಿಸುವುದು
# ಅಲರ್ಜಿಯ ಪ್ರತಿಕ್ರಿಯೆಗಳನ್ನು ಶಮನಗೊಳಿಸುವುದು
# ಒತ್ತಡವನ್ನು ಕಡಿಮೆ ಮಾಡುವುದು
# ಮೂತ್ರಪಿಂಡಗಳನ್ನು ರಕ್ಷಿಸುವುದು
# ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದು
# ತಾರುಣ್ಯ ಪೂರ್ಣ ತ್ವಚೆ ಹೊಂದಲು ಸಹಕಾರಿ
# ಸುಧಾರಿತ ಉಸಿರಾಟದ ಆರೋಗ್ಯ
# ಕಣ್ಣಿನ ದೃಷ್ಟಿ ಸುಧಾರಿಸುವುದು

ಆಯುರ್ವೇದದ ಪ್ರಕಾರ, ಅಮೃತ ಬಳ್ಳಿಯನ್ನು ಪುಡಿಯ ರೂಪದಲ್ಲಿ ಅಥವಾ ಕಷಾಯ ಅಥವಾ ರಸದ ರೂಪದಲ್ಲಿ ಸೇವಿಸಬಹುದು. ದಿನಕ್ಕೆ ಎರಡು ಬಾರಿ ಒಂದು ಟೀ ಚಮಚದಷ್ಟು ಸೇವನೆ ಉತ್ತಮ. ಬಳ್ಳಿಯ ಕಾಂಡ, ಅಥವಾ ಎಲೆಗಳನ್ನು ನೀರಿನಲ್ಲಿ ಕುದಿಸಿಯೂ ಸೇವಿಸಬಹುದು.

Amruthaballi stem kashaya/ Amruthaballi kashaya/Guduchi kashaya/Giloy kadha/Heart  shaped moonseed - YouTube

ಆಮ ಕಾರಣದಿಂದ ಉಂಟಾಗುವ ಜ್ವರ ಅಥವಾ ವೈರಾಣು/ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಜ್ವರಗಳಾದ ಚಿಕನ್ ಗುನ್ಯಾ, ಡೆಂಗ್ಯೂ, ಫ್ಲೂ, ಕೊರೊನಾ ಮುಂತಾದವುಗಳಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಅಧ್ಯಯನಗಳ ಮೂಲಕ ಸಾಬೀತಾಗಿದೆ.

ಅಡ್ಡಪರಿಣಾಮಗಳು

ಗಿಡಮೂಲಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಆದಾಗ್ಯೂ, ಇತರ ಮಧುಮೇಹ ಔಷಧಿಗಳೊಂದಿಗೆ ತೆಗೆದುಕೊಂಡಾಗ ಅದು ಕಡಿಮೆ ಸಕ್ಕರೆ ಮಟ್ಟಕ್ಕೆ ಕಾರಣವಾಗಬಹುದು. ಪ್ರತಿರಕ್ಷಣಾ ವ್ಯವಸ್ಥೆಯು ಹೆಚ್ಚು ಸಕ್ರಿಯವಾಗಲು ಕಾರಣವಾಗಬಹುದು, ಇದು ರುಮಟಾಯ್ಡ್ ಸಂಧಿವಾತದಂತಹ ಸ್ವಯಂ ನಿರೋಧಕ ಕಾಯಿಲೆಗಳ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಹಾಲುಣಿಸುವ ತಾಯಂದಿರ ಮೇಲೆ ಇದರ ಪರಿಣಾಮ ತಿಳಿದಿಲ್ಲ. ಆದ್ದರಿಂದ, ಹಾಲುಣಿಸುವ ಸಮಯದಲ್ಲಿ ಸೇವನೆಯನ್ನು ತಪ್ಪಿಸುವುದು ಒಳಿತು ಎನ್ನಲಾಗಿದೆ.

ವಿ.ಸೂ: ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ಮಾತಿದೆ. ಯಾವುದೇ ಔಷಧವನ್ನು ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಒಳಿತು.

ಕೃಪೆ: ಆರ್ಗಾನಿಕ್ ಇಂಡಿಯಾ, ಫಾರ್ಮ್ ಈಸಿ