ಕಡಬ: ಆಲ್ಟೋ ಕಾರು- ಜೀಪ್ ಮುಖಾಮುಖಿ ಡಿಕ್ಕಿ: ನಾಲ್ವರ ಸಾವು; ಹಲವರಿಗೆ ಗಾಯ

ಕಡಬ: ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ನೆಟ್ಟಣ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಎರಡು ವಾಹನಗಳಲ್ಲಿ ಒಟ್ಟು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಹಾಸನದ ಬೇಲೂರು ತಾಲೂಕಿನ ಟಗರೆ ಮತ್ತು ಚಂದನಹಳ್ಳಿ ನಿವಾಸಿಗಳಾದ ಉಲ್ಲಾಸ್ (28), ಗಣೇಶ್ (26), ತನ್ವಿಕ್ (4) ಮತ್ತು ನೇತ್ರಾವತಿ (28) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆಲ್ಟೋ ಕಾರು ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರು […]
ಕಾರ್ಕಳ: ಬೈಕ್ ಹಾಗೂ ಟ್ಯಾಂಕರ್ ಮಧ್ಯೆ ಅಪಘಾತ, ವಿದ್ಯಾರ್ಥಿ ಸಾವು

ಕಾರ್ಕಳ: ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರನಾಗಿದ್ದ ವಿದ್ಯಾರ್ಥಿಯು ಸ್ಥಳದಲ್ಲೇ ಮೃತಪಟ್ಟ ಘಟನೆ ಬಜಗೋಳಿ- ಮಾಳ ಹೆದ್ದಾರಿಯ ಮಾಳ ಚೆಕ್ ಪೋಸ್ಟ್ ಬಳಿ ಗುರುವಾರ ನಡೆದಿದೆ. ಮಹಾರಾಷ್ಟ್ರ ಮೂಲದ ವೈಭವ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸಹ ಸವಾರೆ ಕೋಲಾರ ಮೂಲದ ವಿದ್ಯಾರ್ಥಿನಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರೂ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ವೈಭವ್ ಮತ್ತು ಇನ್ನೋರ್ವ ವಿದ್ಯಾರ್ಥಿನಿ ಹೊರನಾಡು ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದರು. ಈ […]
ಹೆಬ್ರಿ: ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದ ಓಮ್ನಿ

ಹೆಬ್ರಿ: ವಾಹನಚಲಾಯಿಸುತ್ತಿದ್ದಾಗ ಹಸುವೊಂದು ಅಡ್ಡಬಂತೆಂದು ಅದನ್ನು ತಪ್ಪಿಸಲು ಹೋಗಿ ಒಮ್ನಿಯೊಂದು ಹೊಂಡಕ್ಕೆ ಬಿದ್ದ ಘಟನೆ ಹೆಬ್ರಿಯ ಎಸ್‌ಆರ್ ಶಾಲೆಯ ಬಳಿ ನಡೆದಿದೆ. ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ನಿಯು ಹಸುವನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಅಜಾಗರೂಕತೆಯ ಬೈಕ್ ಚಲಾವಣೆಯಿಂದ ಪಾದಚಾರಿಯ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ

ಉಡುಪಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2018 ಮೇ 28 ರಂದು ದೀಪ್‌ರಾಜ್ ನಾಯ್ಕ್ ಎಂಬಾತನು ಕೊಕ್ಕರ್ಣೆ ಯಿಂದ ಮುದ್ದೂರು ಕಡೆಗೆ ಹೋಗುವಾಗ ತನ್ನ ಬೈಕನ್ನು ಅತೀವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾಕು ಪೂಜಾರ್ತಿ ಎಂಬ ಮಹಿಳೆಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಅವರು ರಸ್ತೆಗೆ ಬಿದ್ದು ಹಣೆಗೆ […]
ಅಂಬಲಪಾಡಿ ಜಂಕ್ಷನ್ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ

ಉಡುಪಿ : ಇಲ್ಲಿನ ಅಂಬಲಪಾಡಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಭಿನಂದನಾ ಪೆಟ್ರೋಲ್ ಬಂಕ್ ಎದುರು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಆದರೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುರುವಾರ ಸರಕು ತುಂಬಿದ ಲಾರಿ ಹಾಗೂ 3 ಪ್ರಯಾಣಿಕರ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರುಗಳಲ್ಲಿದ್ದ ಈರ್ವರು ಮಹಿಳೆಯರು, ಓರ್ವ ಗಂಡಸು ಹಾಗೂ ಒಂದು ಮಗು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ಸಹಕಾರದೊಡನೆ ಗಾಯಾಳುಗಳನ್ನು […]