ಕಾರ್ಕಳ: ಬೈಕ್ ಹಾಗೂ ಟ್ಯಾಂಕರ್ ಮಧ್ಯೆ ಅಪಘಾತ, ವಿದ್ಯಾರ್ಥಿ ಸಾವು

ಕಾರ್ಕಳ: ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರನಾಗಿದ್ದ ವಿದ್ಯಾರ್ಥಿಯು ಸ್ಥಳದಲ್ಲೇ ಮೃತಪಟ್ಟ ಘಟನೆ ಬಜಗೋಳಿ- ಮಾಳ ಹೆದ್ದಾರಿಯ ಮಾಳ ಚೆಕ್ ಪೋಸ್ಟ್ ಬಳಿ ಗುರುವಾರ ನಡೆದಿದೆ. ಮಹಾರಾಷ್ಟ್ರ ಮೂಲದ ವೈಭವ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸಹ ಸವಾರೆ ಕೋಲಾರ ಮೂಲದ ವಿದ್ಯಾರ್ಥಿನಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರೂ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ವೈಭವ್ ಮತ್ತು ಇನ್ನೋರ್ವ ವಿದ್ಯಾರ್ಥಿನಿ ಹೊರನಾಡು ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದರು. ಈ […]
ಹೆಬ್ರಿ: ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಹೊಂಡಕ್ಕೆ ಬಿದ್ದ ಓಮ್ನಿ

ಹೆಬ್ರಿ: ವಾಹನಚಲಾಯಿಸುತ್ತಿದ್ದಾಗ ಹಸುವೊಂದು ಅಡ್ಡಬಂತೆಂದು ಅದನ್ನು ತಪ್ಪಿಸಲು ಹೋಗಿ ಒಮ್ನಿಯೊಂದು ಹೊಂಡಕ್ಕೆ ಬಿದ್ದ ಘಟನೆ ಹೆಬ್ರಿಯ ಎಸ್‌ಆರ್ ಶಾಲೆಯ ಬಳಿ ನಡೆದಿದೆ. ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ನಿಯು ಹಸುವನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಅಜಾಗರೂಕತೆಯ ಬೈಕ್ ಚಲಾವಣೆಯಿಂದ ಪಾದಚಾರಿಯ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ

ಉಡುಪಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2018 ಮೇ 28 ರಂದು ದೀಪ್‌ರಾಜ್ ನಾಯ್ಕ್ ಎಂಬಾತನು ಕೊಕ್ಕರ್ಣೆ ಯಿಂದ ಮುದ್ದೂರು ಕಡೆಗೆ ಹೋಗುವಾಗ ತನ್ನ ಬೈಕನ್ನು ಅತೀವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾಕು ಪೂಜಾರ್ತಿ ಎಂಬ ಮಹಿಳೆಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಅವರು ರಸ್ತೆಗೆ ಬಿದ್ದು ಹಣೆಗೆ […]
ಅಂಬಲಪಾಡಿ ಜಂಕ್ಷನ್ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ

ಉಡುಪಿ : ಇಲ್ಲಿನ ಅಂಬಲಪಾಡಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಭಿನಂದನಾ ಪೆಟ್ರೋಲ್ ಬಂಕ್ ಎದುರು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಆದರೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುರುವಾರ ಸರಕು ತುಂಬಿದ ಲಾರಿ ಹಾಗೂ 3 ಪ್ರಯಾಣಿಕರ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರುಗಳಲ್ಲಿದ್ದ ಈರ್ವರು ಮಹಿಳೆಯರು, ಓರ್ವ ಗಂಡಸು ಹಾಗೂ ಒಂದು ಮಗು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ಸಹಕಾರದೊಡನೆ ಗಾಯಾಳುಗಳನ್ನು […]
ಸ್ಕೂಟಿಗೆ ಢಿಕ್ಕಿ ಹೊಡೆದು 7 ಕಿ.ಮೀ ಎಳೆದೊಯ್ದು ಯುವತಿಯ ಸಾವಿಗೆ ಕಾರಣವಾಯ್ತು ಕುಡಿದ ಮತ್ತಿನ ವಾಹನ ಚಲಾವಣೆ

ದೆಹಲಿ: ಭಾನುವಾರ ಮುಂಜಾನೆ ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕಾರೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಸುಮಾರು ಏಳು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಪರಿಣಾಮ 20 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಈ ಐವರನ್ನು ನಿರ್ಲಕ್ಷದ ಸಾವಿಗೆ ಕಾರಣರಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗವು ದೆಹಲಿ […]