ಸೂರತ್ ಕಟ್ಟಡದಲ್ಲಿ ಬೆಂಕಿ ಅವಘಡ- 20 ವಿದ್ಯಾರ್ಥಿಗಳು ದಾರುಣ ಸಾವು

ಸೂರತ್, ಮೇ 25: ಗುಜರಾತ್ ನ ಸೂರತ್ ನಲ್ಲಿರುವ ತಕ್ಷಿಲಾ ಆರ್ಕೇಡ್ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಕನಿಷ್ಠ 20 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಅದು ಮೇಲ್ಭಾಗಕ್ಕೂ ಆವರಿಸಿತ್ತು. ಈ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಕೋಚಿಂಗ್ ಕೇಂದ್ರಗಳು ನಡೆಯುತ್ತಿದ್ದವು. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆವರಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದರು. […]
ಖಾಸಗಿ ಬಸ್ ನ ಅವಾಂತರ: ಬಲಗೈ ಕಳೆದುಕೊಂಡ ಹುಡುಗನ ಚಿಕಿತ್ಸೆಗೆ ನೆರವಾಗುವಿರಾ?

ಉಡುಪಿ: ಬಸ್ ನ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅತೀ ಧಾವಂತದಲ್ಲಿ ನುಗ್ಗಿ ಬಂದ ಬಸ್ ವೊಂದು ಅಂತಿಮ ವರ್ಷದ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯೋರ್ವನ ಬಲಗೈಯನ್ನು ಬಲಿ ಪಡೆದುಕೊಂಡ ದಾರುಣ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದ್ದು, ಸದ್ಯ ಆತನ ಚಿಕಿತ್ಸೆ ಗೆ ನೆರವು ನೀಡಬೇಕಾಗಿದೆ. ಅಜಿತ್ ಶೆಟ್ಟಿ ಮೂಲತ: ಹಿರಿಯಡಕದ ಅಂಜಾರಿನವರಾಗಿದ್ದು, ಎಂಜಿಎಂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅಜಿತ್ ಮಂಗಳವಾರದಂದು ತರಗತಿ ಮುಗಿಸಿಕೊಂಡು ಕಾಲೇಜಿನಿಂದ ಮನೆಯತ್ತಾ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ಕಳದ […]
ಉಡುಪಿ: ವಾಹನ ಅಪಘಾತ ಅಪರಿಚಿತ, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ

ಉಡುಪಿ: ಉಡುಪಿ ಪುತ್ತೂರು ಗ್ರಾಮದ ಹನುಮಂತನಗರ ಪ್ರಾಥಮಿಕ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಸಾರ್ವಜನಿಕ ರಸ್ತೆಯಲ್ಲಿ ಮಾ.8 ರಂದು ಬೆಳಗ್ಗೆ 6.30 ಕ್ಕೆ ಸುಮಾರು ಸುಮಾರು 35 ವರ್ಷ, 5.4 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯೋರ್ವನಿಗೆ ಯಾವುದೋ ವಾಹನ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವೆಸಗಿ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ […]
ಕಾರು ಢಿಕ್ಕಿ: ಇಬ್ಬರು ಮಕ್ಕಳ ಸಹಿತ ನಾಲ್ವರು ಸಜೀವ ದಹನ

ಕುಂದಾಪುರ: ಕಾರೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಶೌಚಾಲಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎಂಜಿನ್ ಸ್ಪೋಟಗೊಂಡು ಕಾರಿನೊಳಗಿದ್ದ ಕುಂದಾಪುರ ಮೂಲದ ನಾಲ್ವರು ಸಜೀವ ದಹನಗೊಂಡ ಖೇದಕರ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚನ್ನರಾಯ ಪಟ್ಟಣದ ಉದಯಪುರ ಎಂಬಲ್ಲಿ ಬುಧವಾರ ತಡರಾತ್ರಿ ಘಟಿಸಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ನಿವಾಸಿ ವಿವೇಕ ನಾಯಕ್(39), ಪತ್ನಿ ರೇಷ್ಮಾ, ಮಕ್ಕಳಾದ ವಿನಂತಿ(9) ಹಾಗೂ ವಿಘ್ನೇಶ್(5) ಸಾವನ್ನಪ್ಪಿದ ದುರ್ದೈವಿಗಳು. ವಿವೇಕ್ ನಾಯಕ್ ಮುಂಬೈ ಮೂಲದ ಗಾರ್ಮೆಂಟ್ ಕಂಪೆನಿಯೊಂದರ […]