ಖಾಸಗಿ ಬಸ್ ನ ಅವಾಂತರ: ಬಲಗೈ ಕಳೆದುಕೊಂಡ ಹುಡುಗನ ಚಿಕಿತ್ಸೆಗೆ ನೆರವಾಗುವಿರಾ?

ಉಡುಪಿ: ಬಸ್ ನ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅತೀ ಧಾವಂತದಲ್ಲಿ ನುಗ್ಗಿ ಬಂದ ಬಸ್ ವೊಂದು ಅಂತಿಮ ವರ್ಷದ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯೋರ್ವನ ಬಲಗೈಯನ್ನು ಬಲಿ ಪಡೆದುಕೊಂಡ ದಾರುಣ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದ್ದು, ಸದ್ಯ ಆತನ ಚಿಕಿತ್ಸೆ ಗೆ ನೆರವು‌ ನೀಡಬೇಕಾಗಿದೆ.
ಅಜಿತ್ ಶೆಟ್ಟಿ ಮೂಲತ: ಹಿರಿಯಡಕದ ಅಂಜಾರಿನವರಾಗಿದ್ದು, ಎಂಜಿಎಂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅಜಿತ್ ಮಂಗಳವಾರದಂದು ತರಗತಿ ಮುಗಿಸಿಕೊಂಡು ಕಾಲೇಜಿನಿಂದ ಮನೆಯತ್ತಾ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ಕಳದ ಸಮೀಪ  ಕಾರೊಂದನ್ನು ಓವರ್ ಟೇಕ್ ಮಾಡಿಕೊಂಡು ಬಂದ ಬಸ್ ವೊಂದು ಕಿಟಿಕಿಯ ಬಳಿ ಆರಾಮವಾಗಿ ಕುಳಿತಿದ್ದ ಅಜಿತ್ ಕೈಗೆ ಬಡೆದಿದೆ. ಬಸ್ ಹೊಡೆದ ರಭಸಕ್ಕೆ ಅಜಿತ್ ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಏನಾಯಿತು ಎಂಬ ಅರಿವೇ ಆತನಿಗೆ ಇರಲಿಲ್ಲ. ಎಚ್ಚರ ಆಗುವಷ್ಟರಲ್ಲಿ ಮಣಿಪಾಲದ ಕೆಎಂಸಿ  ಆಸ್ಪತ್ರೆಯ ಬೆಡ್ ನಲ್ಲಿದ್ದರು.
ಅಜಿತ್ ತನ್ನ ಬಲಗೈಯನ್ನು ಕಳೆದುಕೊಂಡಿದ್ದಾನೆ. ಸದ್ಯ ಅಜಿತ್ಗೆ ಕೃತಕ ಕೈಜೋಡಣೆ ಮಾಡುವ ಉದ್ದೇಶದಿಂದ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ಹೆಚ್ಚಿನ ಆರ್ಥಿಕ ನೆರವಿನ ಹಸ್ತ ನೀಡಬೇಕಾಗಿದೆ. ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರು ಈ ಬ್ಯಾಂಕ್ ಖಾತೆಗೆ ಕಳುಹಿಸಬಹುದು.
Ajith Shetty
A/C :- 01482200088432
IFSC:- SYNB0000148
Hiriadka Branch