ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನಿಂದಾಗುವ ಆರೋಗ್ಯ ಪ್ರಯೋಜನಗಳು

ಆಡುಭಾಷೆಯಲ್ಲಿ ಮಜ್ಜಿಗೆ ಸೊಪ್ಪು ಎಂದು ಚಿರಪರಿಚಿತವಾಗಿರುವ ಹುಲ್ಲಿನ ಜಾತಿಯ ಈ ಸಸ್ಯದ ಎಲೆಗಳು ಮತ್ತು ಎಣ್ಣೆಯನ್ನು ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ಸಂಸ್ಕೃತದಲ್ಲಿ ತಕೃ ತೃಣ, ತುಳುವಿನಲ್ಲಿ ಅಲೆಪಂತಿ, ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಅಥವಾ ನಿಂಬೆ ಸೊಪ್ಪು ಮತ್ತು ಇಂಗೀಷ್ ನಲ್ಲಿ ಲೆಮನ್ ಗ್ರಾಸ್ ಎಂದು ಕರೆಯುತ್ತಾರೆ.   ನಿಂಬೆಯ ಪರಿಮಳವನ್ನು ಸೂಸುವ ಮಜ್ಜಿಗೆ ಸೊಪ್ಪನ್ನು ಸಾಮಾನ್ಯವಾಗಿ ಮೌಖಿಕವಾಗಿ, ಚರ್ಮಕ್ಕೆ ನೇರವಾಗಿ ಅನ್ವಯಿಸಲಾಗುತ್ತದೆ ಅಥವಾ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಡಿಯೋಡರೆಂಟ್ ಗಳು, ಸಾಬೂನುಗಳು ಮತ್ತು […]

ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ, ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಸಂಪನ್ನ

ಉಡುಪಿ: ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು. ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಭಜನ ಸಂಕೀರ್ತನೆ, ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜರಗಿತು. ಸಂಸ್ಥೆಯ ಅಧ್ಯಕ್ಷ ಜಗದೀಶ ಕೋಟ್ಯಾನ್, ಮುಖ್ಯ ಶಿಕ್ಷಕ ನೋಣಯ್ಯ ಮಾಸ್ತರ್, ಶಿಕ್ಷಕ ಸಿರಿಲ್ ನೊರೊನ್ಹಾ, ಕೌರವ ಸಲಹೆಗಾರ ಕುಡ್ಟ […]

ಕೃಷಿಕ ಮಿತ್ರರ ನಂಬಿಕೆ: ಈಸಿ ಲೈಫ್ ಗೆ ದಶಮಾನೋತ್ಸವದ ಸಂಭ್ರಮ

ಕೃಷಿಕ ಮಿತ್ರರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸಾರ್ಹತೆಗೆ ಹೆಸರಾದ ಈಸಿ ಲೈಫ್ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಗ್ರಾಹಕರ ಸಹಕಾರದಿಂದ ಸಂಸ್ಥೆಯು ಅಭಿವೃದ್ದಿಯನ್ನು ಹೊಂದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಸಂಸ್ಥೆಯು ಧನ್ಯವಾದಗಳನ್ನು ಸಲ್ಲಿಸಿದೆ.   ಗ್ರಾಹಕರ ಪ್ರೀತಿ, ವಿಶ್ವಾಸ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸಿರುವ ಸಂಸ್ಥೆಯು ಮುಂದೆಯೂ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನಿರಂತರವಾಗಿ ನೀಡಲಿದೆ.

ಏಪ್ರಿಲ್ 10 ರಿಂದ ಮೇ 10 ರವರೆಗೆ Kids Isle ಲಿಟಲ್ ಏಂಜೆಲ್ಸ್ ಸಮ್ಮರ್ ಕ್ಯಾಂಪ್

ಉಡುಪಿ: ಬ್ರಹ್ಮಗಿರಿಯಲ್ಲಿರುವ ಫಾರ್ಚೂನ್ ಕ್ಯಾಂಪಸ್ ನಲ್ಲಿ Kids Isle ವತಿಯಿಂದ ಏಪ್ರಿಲ್ 10 ರಿಂದ ಮೇ 10 ರವರೆಗೆ 14 ವರ್ಷದೊಳಗಿನ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್-2023 ಅನ್ನು ಆಯೋಜಿಸಲಾಗಿದ್ದು, ವಿವಿಧ ಚಟುವಟಿಕೆಗಳಾದ ಸ್ವಿಮ್ಮಿಂಗ್, ಕರಾಟೆ, ಡ್ರಾಯಿಂಗ್, ಡ್ಯಾನ್ಸ್, ಸಿಂಗಿಂಗ್, ಇನ್ ಡೋರ್ ಗೇಮ್ಸ್ ಮತ್ತು ಔಟ್ ಡೋರ್ ಗೇಮ್ಸ್ ಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ನಿತ್ಯ ಮಧ್ಯಾಹ್ನದವರೆಗೆ ನುರಿತ ಶಿಕ್ಷಕ ವರ್ಗ ದವರಿಂದ ವಿವಿಧ ತರಗತಿಗಳು ನಡೆಯುತ್ತವೆ. ಮಧ್ಯಾಹ್ನದ ಬಳಿಕ ನಿತ್ಯವೂ ಪ್ರವಾಸಗಳನ್ನು ಏರ್ಪಡಿಸಲಾಗುತ್ತದೆ. ಆಹಾರ, ಸಸ್ಯಾಹಾರಿ ಭೋಜನ […]

ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡುವ ಸಿ-ವಿಜಿಲ್ ಆ್ಯಪ್ ನಿಂದ ಪಾರದರ್ಶಕ ಚುನಾವಣೆಗೆ ಮುನ್ನುಡಿ

ಮುಕ್ತ-ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಮುಖ್ಯ ಉದ್ದೇಶವಾಗಿದ್ದು, ಈ ಉದ್ದೇಶ ಈಡೇರಿಕೆಗೆ ಚುನಾವಣಾ ಸಮಯದಲ್ಲಿ ನಡೆಯುವ ಹಲವು ಅಕ್ರಮಗಳು ಅಡ್ಡಿಯಾಗುತ್ತವೆ. ಇಂತಹ ಅಕ್ರಮಗಳನ್ನು ತಡೆಯಲು ಹಾಗೂ ಇವುಗಳ ವಿರುದ್ದ ತ್ವರಿತಗತಿಯಲ್ಲಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸಿ-ವಿಜಿಲ್ ಆ್ಯಪ್ ಅನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಚುನಾವಣಾ ಸಮಯದಲ್ಲಿ ಮತದಾರರಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯ ಆಮಿಷ ನೀಡಬಹುದಾದ, ಹಣ ವಿತರಣೆ, ಉಡುಗೊರೆಗಳು ಹಾಗೂ ಕೂಪನ್ ವಿತರಣೆ, […]