ಉಡುಪಿ “ಗೀತಾಂಜಲಿ ಸಿಲ್ಕ್ಸ್” ನಲ್ಲಿ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್ ಜೂನ್ 7ರಿಂದ ಪ್ರಾರಂಭ

ಉಡುಪಿ: ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಜನಪ್ರಿಯ ಬಟ್ಟೆ ಮಳಿಗೆಯಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಮೆಗಾ ಸೇಲ್- ಡಬಲ್ ಧಮಾಕ ಆಫರ್ ನೀಡಲಾಗಿದೆ. ಈ ಕೊಡುಗೆಯು ಇದೇ ಜೂನ್ 7ರಿಂದ ಆರಂಭಗೊಳ್ಳಲಿದೆ. ಈ ಕೊಡುಗೆಯಲ್ಲಿ ಮಹಿಳೆಯರ, ಪುರುಷರ, ಮಕ್ಕಳ ಎಲ್ಲಾ ಉಡುಪುಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ನಿತ್ಯ ಉಪಯೋಗದ ಬೆಡ್ ಶೀಟ್, ಬೆಡ್ ಸ್ಪೇಡ್, ಪ್ಲೋರ್ ಮ್ಯಾಟ್, ಕರ್ಟನ್ ಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ದರ ಕಡಿತ ಲಭ್ಯವಿದೆ. […]

ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ನಂಜುಂಡೇಗೌಡ

ಬೆಂಗಳೂರು: ಇದುವರೆಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯನ್ನು 29 ಹಿರಿಯ ಪತ್ರಕರ್ತರು ಪಡೆದಿದ್ದು, ಇವರು 30ನೇಯವರು. ಪ್ರಶಸ್ತಿ 15 ಸಾವಿರ ರೂ ನಗದು ಹಾಗೂ ಫಲಕ ಹೊಂದಿದೆ. ನಂಜುಂಡೇಗೌಡರು ನಡೆ-ನುಡಿಯಲ್ಲಿ ಕಟ್ಟುನಿಟ್ಟು. ಮೈಸೂರಿನ ಪತ್ರಕರ್ತರ ಪಡೆಗೆ ಸೇರಿದ ಇವರು ದೆಹಲಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಬಳ್ಳಾರಿಯ ವಿಶೇಷ ವರದಿಗಾರರಾದ ಹೊನಕೆರೆ ನಂಜುಂಡೇಗೌಡ ಅವರಿಗೆ ಲಭಿಸಿದೆ. ಅವರು ಪ್ರಜಾವಾಣಿ ಪತ್ರಿಕೆಯಲ್ಲಿ […]

ರಾಜೀವನಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ

ಮಣಿಪಾಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಉಡುಪಿ ತಾಲೂಕು ಇದರ ವತಿಯಿಂದ 80ನೇ ಬಡಗಬೆಟ್ಟು ಗ್ರಾಮದ ರಾಜೀವನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಜ್ಯೋತಿ’ ಹೊಸ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ ಹಾಗೂ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜನಜಾಗೃತಿ ವೇದಿಕೆಯ ಮಣಿಪಾಲ ವಲಯದ ಅಧ್ಯಕ್ಷ ಶಂಕರ್ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 80 ಬಡಗಬೆಟ್ಟು ಬಿ ಒಕ್ಕೂಟದ ಅಧ್ಯಕ್ಷೆ ಪ್ರಿಯಾಂಕಾ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ನಾಗೇಶ್ ನಾಯಕ್ ದುಶ್ಚಟದಿಂದಾಗುವ ದುಷ್ಪರಿಣಾಮಗಳ ಕುರಿತು […]

ಹೊಸದಾಗಿ 50 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೊಸದಾಗಿ ಸುಮಾರು 50 ಇಂದಿರಾ ಕ್ಯಾಂಟೀನ್​ಗಳು ತಲೆ ಎತ್ತಲಿವೆ. ಬೆಂಗಳೂರಿನಲ್ಲಿ ಸುಮಾರು 175 ಇಂದಿರಾ ಕ್ಯಾಂಟೀನ್​ಗಳಿದ್ದು, 163 ಕ್ಯಾಂಟೀನ್​​ಗಳು ಸದ್ಯ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಇನ್ನೂ ಸುಮಾರು 50 ಹೊಸ ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಬಿಬಿಎಂಪಿ ಮುಂದಾಗಿದೆ. ವಾರ್ಡ್‌ಗೊಂದರಂತೆ ಇಂದಿರಾ ಕ್ಯಾಂಟೀನ್​ಗಳು ಬಡವರ ಹೊಟ್ಟೆಯನ್ನು ತುಂಬಿಸುತ್ತಿವೆ. ಕ್ಯಾಂಟೀನ್‌ ಕಟ್ಟಡ ಇಲ್ಲದ ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಸೇವೆ ನೀಡುತ್ತಿವೆ. ಇದರ ಜೊತೆಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೊಸದಾಗಿ 50 ಇಂದಿರಾ ಕ್ಯಾಂಟಿನ್​ಗಳು […]

ಚೀನಾದಲ್ಲಿದೆ ವಿಶ್ವದ ಮೊದಲ ಮತ್ತು ಏಕೈಕ ಸಂಪೂರ್ಣ ಬಿಳಿ ಬಣ್ಣದ ಪಾಂಡಾ!

ವಿಶ್ವದ ಮೊದಲ ಮತ್ತು ಏಕೈಕ ಅಲ್ಬಿನೋ ಪಾಂಡಾ ಅಂತಿಮವಾಗಿ ಚೀನಾದ ಪರ್ವತಗಳಲ್ಲಿ ಚಲನೆ-ಸೂಕ್ಷ್ಮ ಕ್ಷೇತ್ರ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದೆ. 2019 ರಲ್ಲಿ ಪತ್ತೆಯಾದ ಬಳಿಕ ಇದು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಸಂಪೂರ್ಣ ಬಿಳಿ ಬಣ್ಣದ ಪಾಂಡಾವನ್ನು ಗುರುತಿಸಲಾಗಿದೆ. Sciencealert.com ವರದಿಯ ಪ್ರಕಾರ, ಈ ಅಪರೂಪದ ಪ್ರಾಣಿ ತನ್ನ ವಿಶಿಷ್ಟ ನೋಟದ ಹೊರತಾಗಿಯೂ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಆರೋಗ್ಯಕರವಾಗಿರುವಂತೆ […]