ಚೀನಾದಲ್ಲಿದೆ ವಿಶ್ವದ ಮೊದಲ ಮತ್ತು ಏಕೈಕ ಸಂಪೂರ್ಣ ಬಿಳಿ ಬಣ್ಣದ ಪಾಂಡಾ!

ವಿಶ್ವದ ಮೊದಲ ಮತ್ತು ಏಕೈಕ ಅಲ್ಬಿನೋ ಪಾಂಡಾ ಅಂತಿಮವಾಗಿ ಚೀನಾದ ಪರ್ವತಗಳಲ್ಲಿ ಚಲನೆ-ಸೂಕ್ಷ್ಮ ಕ್ಷೇತ್ರ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದೆ. 2019 ರಲ್ಲಿ ಪತ್ತೆಯಾದ ಬಳಿಕ ಇದು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಸಂಪೂರ್ಣ ಬಿಳಿ ಬಣ್ಣದ ಪಾಂಡಾವನ್ನು ಗುರುತಿಸಲಾಗಿದೆ. Sciencealert.com ವರದಿಯ ಪ್ರಕಾರ, ಈ ಅಪರೂಪದ ಪ್ರಾಣಿ ತನ್ನ ವಿಶಿಷ್ಟ ನೋಟದ ಹೊರತಾಗಿಯೂ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಆರೋಗ್ಯಕರವಾಗಿರುವಂತೆ […]

ಆಕಾಶದಲ್ಲಿ ಶುಕ್ರ-ಮಂಗಳ ಸಂಯೋಗ: ಈ ರಾಶಿಗಳವರಿಗೆ ನೀಡಲಿದೆ ಶುಭ ಫಲ

ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವಾಗ ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಬೀಳುತ್ತದೆ. ಗ್ರಹಗಳ ಚಲನೆಯ ಪ್ರಭಾವವು ಶುಭಾಶುಭ ಫಲಗಳೆರಡನ್ನೂ ನೀಡಬಹುದು. ಶುಕ್ರ ಮತ್ತು ಮಂಗಳ ಸಂಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಮೇಲೆ ಬೀಳಲಿದ್ದು, ಈ ಕೆಳಗಿನ ರಾಶಿಗಳಿಗೆ ಶುಭ ಫಲಗಳು ಗೋಚರವಾಗಲಿವೆ ಮೇಷ ಶುಕ್ರ ಮತ್ತು ಮಂಗಳನ ಸಂಯೋಗವು ಮೇಷ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದೆ. ಈ ಸಮಯವು ವಿಶೇಷವಾಗಿ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮೇಷ ರಾಶಿಯವರಿಗೆ […]

ಜೂ.3 ಮತ್ತು 4ರಂದು ಮಂಗಳೂರಿನಲ್ಲಿ 6ನೇ ವರ್ಷದ ಹಲಸು ಹಬ್ಬ

ಮಂಗಳೂರು: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು ‌4ರಂದು ಶರವು ದೇವಳ ಬಳಿಯ‌ ಬಾಳಂಭಟ್ ಹಾಲ್‌ನಲ್ಲಿ ನಡೆಯಲಿದೆ. ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಭಟ್ ಆಯಂಡ್ ಭಟ್ ಯೂ ಟ್ಯೂಬ್ ಚಾನಲ್‌ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಣ್ಣು ತುಂಡು‌ ಮಾಡಿ ಹಬ್ಬಕ್ಕೆ ಚಾಲನೆ‌ ನೀಡುವರು. ಹೋಳಿಗೆ‌ ಮಾಡಿ‌ ಹಲಸು ಮೌಲ್ಯ ವರ್ಧನೆ‌ ಮಾಡಿದ‌ ಲಕ್ಷ್ಮೀ ಚಿದಾನಂದರನ್ನು […]

ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ನಾಣ್ಯದ ವಿಶೇಷತೆ:75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು […]

KANTAR – CHD ಗ್ರೂಪ್ ಪಾಲುದಾರಿಕೆಯಿಂದ ಮಹಿಳಾ ಸಬಲೀಕರಣ ಉಪಕ್ರಮ; ನಿರುದ್ಯೋಗಿ ಮಹಿಳೆಯರ ತಬೇತಿ ಕಾರ್ಯಕ್ರಮ

ಕಾಂತಾರ್ ಇಂಡಿಯಾ ಫೌಂಡೇಶನ್ ಬೆಂಬಲಿತ ಸಿಎಸ್‌ಆರ್ ಉಪಕ್ರಮದ ಸಹಯೋಗದೊಂದಿಗೆ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಕಾರ್ಯಕ್ರಮದ ಪ್ರಮುಖ ಉಪಕ್ರಮದ ಅಡಿಯಲ್ಲಿ ಯುನೆಕೋಸಾಕ್‌ನಲ್ಲಿ ವಿಶೇಷ ಸಮಾಲೋಚನಾ ಸ್ಥಾನಮಾನವನ್ನು ಹೊಂದಿರುವ ಸಿಎಚ್‌ಡಿ ಗ್ರೂಪ್ ಪ್ರಸ್ತುತ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಮಾರು 40 ಮಹಿಳೆಯರಿಗೆ ಸಾಮಾನ್ಯ ಕರ್ತವ್ಯ ಸಹಾಯಕರಾಗಿ ಬಮೊನ್‌ಪೋ ಕಾಲೇಜಿನ ಸಹಭಾಗಿತ್ವ ಮತ್ತು ರೋಟರಿ ಇ-ಕನೆಕ್ಟ್ ಮೂಲಕ ತರಬೇತಿ ನೀಡುತ್ತಿದೆ. ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಮಂಗಳೂರಿನ ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನಿಂದ ರಚಿಸಲ್ಪಟ್ಟ […]