ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ನಿರಾಕರಣೆ : ಬರಗೂರು ರಾಮಚಂದ್ರಪ್ಪ

ಬೆಂಗಳೂರು : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ತಾತ್ಕಾಲಿಕ ಸಮಿತಿ ರಚನೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದರೆ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಾಹಿತಿ ನಿರಾಕರಿಸಿದ್ದಾರೆ. ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ತಿಳಿಸಿದ್ದಾರೆ. ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರದ […]

ನೈವೇದ್ಯ ಸಲ್ಲಿಸುವ ಅವಕಾಶ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ಇ-ಕಾಣಿಕಾ ಸೌಲಭ್ಯ

ಶಬರಿಮಲೆ (ಕೇರಳ): ಈ ಹಿಂದೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ವರ್ಚುವಲ್​ ಸರತಿಯ ವ್ಯವಸ್ಥೆಯಲ್ಲಿ ದೇವಸ್ವಂ ಮಂಡಳಿ ಪ್ರಾರಂಭಿಸಿತ್ತು. ದೇವಾಲಯಗಳಲ್ಲಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಬೇಕಾದರೆ ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ. ಈಗ ಮನೆಯಲ್ಲೇ ಕುಳಿತು ದೇವರಿಗೆ ಸಲ್ಲಿಸುವಂತಹ ತಂತ್ರಜ್ಞಾನಗಳು ಬೆಳೆದಿವೆ. ಆ ತಂತ್ರಜ್ಞಾನವನ್ನು ಹಲವು ದೇವಾಲಯಗಳು ಕೂಡ ಅಳವಡಿಸಿಕೊಂಡಿವೆ ಕೂಡ. ಅದರಂತೆಯೇ ಇನ್ಮುಂದೆ ಅಯ್ಯಪ್ಪ ಸ್ವಾಮಿಯ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬಹುದು. ಶಬರಿಮಲೆಯ ಅಯ್ಯಪ್ಪನಿಗೆ ಭಕ್ತರು ಕಾಣಿಕೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಇ-ಕಾಣಿಕಾ […]

2023 ಸಿಇಟಿ ಪರೀಕ್ಷೆಯ ಆರ್​ಡಿ ಸಂಖ್ಯೆ ತಿದ್ದುಪಡಿಗೆ ಮತ್ತೊಂದು ಅವಕಾಶ

ಬೆಂಗಳೂರು : ಆರ್​ಡಿ ಸಂಖ್ಯೆ ತಿದ್ದುಪಡಿಗೆ ಜೂನ್‌ 7 ರಿಂದ ಜೂನ್‌ 12 ರವರೆಗೆ ಅವಕಾಶ ನೀಡಲಾಗಿದೆ. ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ ನಮೂದಿಸಿರುವ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್‌ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯ ಆರ್​.ಡಿ ಸಂಖ್ಯೆ ಜೊತೆ ನಮೂದಿಸುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಆದರೆ, ಸಾವಿರಾರು ಅಭ್ಯರ್ಥಿಗಳ ಈ ಸಂಖ್ಯೆಗಳು ನಾನಾ ಕಾರಣಗಳಿಗಾಗಿ ತಾಳೆಯಾಗದೆ ಇರುವ ಹಿನ್ನೆಲೆಯಲ್ಲಿ ಸೂಕ್ತ ತಿದ್ದುಪಡಿಗೆ ಜೂನ್‌ 7ರ ಸಂಜೆ 4 ಗಂಟೆಯಿಂದ ಜೂನ್‌ 12ರ ಬೆಳಿಗ್ಗೆ […]

ಜೂ.30 ರಂದು 3 ಸ್ಥಾನಗಳಿಗೆ ವಿಧಾನ ಪರಿಷತ್ತಿನ ಉಪಚುನಾವಣೆ

ಬೆಂಗಳೂರು : ಸದಸ್ಯರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಈ ತಿಂಗಳ 30ರಂದು ಉಪಚುನಾವಣೆ ನಡೆಯಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ್, ಆರ್. ಶಂಕರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣಾ ಆಯೋಗ ಇಂದು ಉಪಚುನಾವಣೆ ವೇಳಾಪಟ್ಟಿ ಘೋಷಿಸಿತು. ವಿಧಾನಸಭೆಯ ಶಾಸಕರು ಚುನಾವಣೆಯ ಮತದಾರರಾಗಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 135, ಬಿಜೆಪಿ […]

ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ:ವೀಕೆಂಡ್​ ವಿತ್​ ರಮೇಶ್

ವೀಕೆಂಡ್​ ವಿತ್​ ರಮೇಶ್​’ ಅಪಾರ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಕನ್ನಡದ ಜನಪ್ರಿಯ ಕಾರ್ಯಕ್ರಮ.ಅಂತಿಮ ಘಟ್ಟ ತಲುಪಿರುವ ವೀಕೆಂಡ್​ ವಿತ್​ ರಮೇಶ್​ ಶೋನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಆಗಮಿಸಲಿದ್ದಾರೆ ಕನ್ನಡಿಗರ ಮನೆಗೆದ್ದಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಬಂದು ತಮ್ಮ ಸಾಧನೆಯ ಪುಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ. ‘ವೀಕೆಂಡ್​ ವಿತ್​ ರಮೇಶ್​’ ಶೋನ ಈ ವಾರದ ಪ್ರೋಮೋ ರಿಲೀಸ್​ ಆಗಿದೆ. ಸೋಷಿಯಲ್​ ಮೀಡಿಯಾಗಳಲ್ಲೂ ಪ್ರೋಮೋ ರಿಲೀಸ್​ ಮಾಡಿರುವ ಜೀ ವಾಹಿನಿ, ”ರಾಜ್ಯ ಕಂಡ […]