MSDC ಕೌಶಲ್ ಮಣಿಪಾಲ ಸ್ಕಿಲ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ ನೋಂದಣಿ:ಕಲಿಕಾ ಅವಕಾಶಗಳ ಜೊತೆಗೆ ಗಿಫ್ಟ್ ವೋಚರ್ ಪಡೆಯುವ ಅವಕಾಶ!

ಮಣಿಪಾಲ: ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಮತ್ತು ಹೊಸ ಕೌಶಲ್ಯಗಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ MSDC ಕೌಶಲ್ ಮಣಿಪಾಲ ಸ್ಕಿಲ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. ಸ್ಕಿಲ್ ಕ್ಲಬ್‌ನ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳು ಮತ್ತು ಕಲಿಕಾ ಅವಕಾಶಗಳ ಜೊತೆಗೆ ₹3,000 ಮೌಲ್ಯದ ಸ್ಕಿಲ್ ರೂಪೀಸ್ ಗಿಫ್ಟ್ ವೋಚರ್ ಪಡೆಯುವ ಅವಕಾಶವಿದೆ. ಸದಸ್ಯರಿಗೆ ಆನ್‌ಲೈನ್ ಪ್ರಮಾಣೀಕೃತ ಲೈವ್ ಇಂಟರಾಕ್ಟಿವ್ ಕೋರ್ಸ್‌ಗಳಿಗೆ 10ರಿಂದ 90ರಷ್ಟು ಕೋರ್ಸ್ […]

MSDC ಕೊಡುತ್ತಿದೆ ಸೃಜನಶೀಲ ಪ್ರತಿಭೆಗೆ ವೇದಿಕೆ: ಸೆ.19 ರಂದು ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026: ವಿವಿಧ ಸ್ಪರ್ಧೆಗಳ ಸುರಿಮಳೆ

ಮಣಿಪಾಲ: ಯುವಜನರಲ್ಲಿರುವ ಸೃಜನಶೀಲತೆ ಹಾಗೂ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ MSDC–School of Fashion & Interior ವತಿಯಿಂದ ‘ದಿ ಸ್ಕಿಲ್ ಫೆಸ್ಟ್–ಕೌಶಲ್ 2026’ ಒಂದು ದಿನದ ಕಾರ್ಯಕ್ರಮವನ್ನು ಸೆಪ್ಟೆಂಬರ್ 19ರಂದು ಆಯೋಜಿಸಲಾಗಿದೆ. 15 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿರುವ ಕಾರ್ಯಕ್ರಮದಲ್ಲಿ ಪರ್ಲ್ ನೆಕ್ಲೇಸ್ ಮೇಕಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಫ್ಯಾಬ್ರಿಕ್ ಪೇಂಟಿಂಗ್, ಫ್ಯಾಬ್ರಿಕ್ ರಂಗೋಲಿ, ಬೆಸ್ಟ್ ಔಟ್ ಆಫ್ ವೇಸ್ಟ್ ಹಾಗೂ ನ್ಯೂಟ್ರಿಷಿಯಸ್ ಸಲಾಡ್ ಮೇಕಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವವರು ತಮ್ಮ ಕಲಾತ್ಮಕತೆ, ಸೃಜನಶೀಲತೆ ಹಾಗೂ ಕೌಶಲ್ಯವನ್ನು […]

ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಇದೀಗ ಇನ್ನಷ್ಟು ಉತ್ತಮ ಸೇವೆ, ಮಕ್ಕಳ ಹಾಗೂ ನವಜಾತ ಶಿಶುಗಳ ವಿಭಾಗ ವಿಸ್ತರಣೆ

ಉಡುಪಿ: ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇನ್ನಷ್ಟು ಉತ್ತಮ ಹಾಗೂ ಸಮಗ್ರ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಮಕ್ಕಳ ಹಾಗೂ ನವಜಾತ ಶಿಶುಗಳ ವಿಭಾಗವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನುಭವಿ ತಜ್ಞ ವೈದ್ಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಪರಿಚಯಿಸಲಾಗಿದೆ. ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ಗುಣಮಟ್ಟದ ಮತ್ತು ತ್ವರಿತ ಚಿಕಿತ್ಸಾ ಸೇವೆ ಒದಗಿಸುವ ಉದ್ದೇಶದಿಂದ ವಿಭಾಗದಲ್ಲಿ ತಜ್ಞ ವೈದ್ಯರ ತಂಡವನ್ನು ಬಲಪಡಿಸಲಾಗಿದೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಜೊತೆಗೆ ನವಜಾತ ಶಿಶುಗಳ ವಿಶೇಷ […]

ಹೆಂಡತಿ-ಮಕ್ಕಳಿಲ್ಲದೆ ವ್ಯಕ್ತಿ ಮೃತಪಟ್ಟರೆ ಆಸ್ತಿ ಯಾರ ಪಾಲಿಗೆ ಹೋಗುತ್ತದೆ? ಮಾಹಿತಿ ತಿಳಿಯಿರಿ

ಒಬ್ಬ ವ್ಯಕ್ತಿ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ಅದರಲ್ಲೂ ಮೃತರಿಗೆ ಹೆಂಡತಿ, ಮಕ್ಕಳು ಇಲ್ಲದಿದ್ದರೆ ಇಡೀ ಆಸ್ತಿ ಅಣ್ಣ-ತಂಗಿಯರಿಗೆ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾನೂನಿನಲ್ಲಿ ಉತ್ತರಾಧಿಕಾರಿಗಳಿಗೆ ನಿಗದಿತ ಆದ್ಯತೆಯ ಕ್ರಮವಿದೆ. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಸಂಬಂಧಿಸಿದಂತೆ ಉತ್ತರಾಧಿಕಾರದ ಪ್ರಮುಖ ನಿಯಮಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ನಿಯಂತ್ರಿಸುತ್ತದೆ. ವಿಲ್ ಇಲ್ಲದೆ ಹಿಂದೂ ಪುರುಷ ಮೃತಪಟ್ಟಾಗ ಮೊದಲು Class I ಉತ್ತರಾಧಿಕಾರಿಗಳನ್ನು ಪರಿಗಣಿಸಲಾಗುತ್ತದೆ. […]

ವಿಶ್ವದ ಏಕೈಕ ‘ಓಂ’ ಆಕಾರದ ಶಿವ ದೇವಾಲಯ; ಇಲ್ಲಿದೆ 1,008 ಶಿವಲಿಂಗಗಳು

ದೇವಾಲಯಗಳ ವಾಸ್ತುಶಿಲ್ಪವೇ ಒಂದು ಅದ್ಭುತ. ‘ಓಂ ಆಶ್ರಮ’ ತನ್ನ ವಿಶಿಷ್ಟ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ‘ಓಂ’ ಸಂಕೇತದ ಆಕಾರದಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಅಪರೂಪದ ಸಂಗಮವಾಗಿದ್ದು, ರಾಜಸ್ಥಾನದ ಪಾಲಿ ಜಿಲ್ಲೆಯ ಜಾದನ್ ಗ್ರಾಮದಲ್ಲಿದೆ ಈ ದೇವಾಲಯ. ಸುಮಾರು 250 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇವಾಲಯ ಸಂಕೀರ್ಣವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸುಮಾರು 2,000 ಕಂಬಗಳ ಮೇಲೆ ನಿಂತಿರುವ ಮುಖ್ಯ ರಚನೆ ಸುಮಾರು 135 ಅಡಿ ಎತ್ತರ ಹೊಂದಿದೆ. 1,008 ಶಿವಲಿಂಗಗಳು, […]