ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆ: ನಾಳೆ ಉಡುಪಿಯಲ್ಲಿ ಮೂರು ಬಸ್ಸುಗಳಿಂದ ಉಚಿತ ಸೇವೆ

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಹಾಗೆಯೇ ನಾಳೆ ಉಡುಪಿಯಿಂದ ಹೆಬ್ರಿಗೆ ತೆರಳುವ ಎಸ್ ಆರ್ ಎಮ್, ಎಸ್ ಡಿ ಎಮ್, ಮುಟ್ಲುಪಾಡಿಯಿಂದ ಉಡುಪಿಗೆ ತೆರಳುವ ಎಸ್ ಎಮ್ ಎಮ್ ಎಸ್ ಬಸ್ಸಿನವರು ದಿನವಿಡೀ ಉಚಿತ ಪ್ರಯಾಣವನ್ನು ನಾಗರಿಕರಿಗೆ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಚಿವ ರಾಮಲಿಂಗಾ ರೆಡ್ಡಿ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಸಾರಿಗೆ ಮತ್ತು ಮುಜರಾಯಿ ಸಚಿವರಾದ ಡಾ.ರಾಮಲಿಂಗಾ ರೆಡ್ಡಿ ಅವರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೆಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾದರು. ಹಾಗೂ ಶ್ರೀಪಾದರು ಅವರನ್ನು ಗೌರವಿಸಿದರು.

ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ (ಸಮಗ್ರ ಆರೋಗ್ಯ ತಪಾಸಣೆ) ಕಾರ್ಯಕ್ರಮ

ಉಡುಪಿ: ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯು ಆರೋಗ್ಯವಂತ ವೃದ್ಧಾಪ್ಯದ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಸಹಯೋಗದಲ್ಲಿ ಹಿರಿಯ ನಾಗರಿಕರ ಸಮುದಾಯಕ್ಕಾಗಿ ಮಹತ್ವದ ಕಾರ್ಯಕ್ರಮವನ್ನು ಪ್ರಕಟಿಸಿದೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಉಚಿತ ಆರೋಗ್ಯಕರ ವೃದ್ಧಾಪ್ಯದ ಜಾಗೃತಿ ಮತ್ತು ಸ್ಕ್ರೀನಿಂಗ್ ಪರೀಕ್ಷೆ ಕಾರ್ಯಕ್ರಮವನ್ನು 2024 ರ ಜನವರಿ 23 ಮತ್ತು 24 ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ಮೂರನೇ […]

ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ “ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ “ಛಾಯಾಚಿತ್ರ ಪ್ರದರ್ಶನವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ. 18 ರಂದು ಉದ್ಘಾಟನೆಗೊಂಡಿತು. ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ. ಕೋಶೊ ನಿವಾನೋ ಪ್ರದರ್ಶನವನ್ನು ಉದ್ಘಾಟಿಸಿದರು. ಆಸ್ಟ್ರೇಲಿಯಾ, ವಿಕ್ಟೋರಿಯಾದ ಮಾಜಿ ಸಚಿವ, ಲ್ಯೂಕ್ ಡನೆಲನ್ , […]

ಸರಸ್ವತಿಯ ಉಗಮ ಸ್ಥಾನದಿಂದ ಅಯೋಧ್ಯೆಗೆ ತೀರ್ಥ ಕಳುಹಿಸಿದ ಗೌಡಪಾದಾಚಾರ್ಯ ಮಠ: ಪಿ.ರಾಮಚಂದ್ರ ಕಾಮತ್ ಅವರಿಂದ ಹಸ್ತಾಂತರ

ಶ್ರೀಮದ್ ಗೌಡಪಾದಾಚಾರ್ಯ ಮಠವು ತನ್ನ ಪರಂಪರೆಯಲ್ಲಿ 77 ನೇ ಸ್ವಾಮೀಜಿಯನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ಮಠ ಪರಂಪರೆಯಾಗಿದೆ. ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರು ದೈವಿಕ ಸಂಪ್ರದಾಯಗಳನ್ನು ಗೌರವಿಸಿ ಹಿಮಾಲಯದಲ್ಲಿರುವ ಗರ್ವಾಲ್ ಉತ್ತರಾಖಂಡದಿಂದ ಸರಸ್ವತಿ ನದಿಯ ಮೂಲದಿಂದ ಪಡೆದ ಮಂಗಳಕರವಾದ ಸರಸ್ವತಿ ನದಿಯ ಶುಭ ಉಗಮ ತೀರ್ಥವನ್ನು ಕಳುಹಿಸಿ ಕೃಪೆ ತೋರಿದ್ದಾರೆ. ಈ ಅಪರೂಪದ ಮತ್ತು ಪವಿತ್ರ ತೀರ್ಥವನ್ನು ಶ್ರೀ ಸರಸ್ವತಿ ಹೆರಿಟೇಜ್ ಪ್ರತಿಷ್ಠಾನದ ಜಗದೀಶ್ ಗಾಂಧಿಯವರ ಮೂಲಕ ಭಕ್ತಿಯಿಂದ ಸಂಗ್ರಹಿಸಲಾಗಿದೆ. ಪೂಜೆಯ ನಂತರ ಸ್ವಾಮೀಜಿಯವರು […]