ಉಡುಪಿಯ ಆಚಾರ್ಯ ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ಶಾರ್ವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ

ಉಡುಪಿ: ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾಗಿರುವ ಉಡುಪಿಯ ಆಚಾರ್ಯ ಏಸ್ ತರಬೇತಿ ಸಂಸ್ಥೆಯ ಆನಲೈನ್ ಮುಖಾಂತರ ತರಬೇತಿ ಪಡೆದ ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ವಿದ್ಯಾಲಯದ ಶಾರ್ವರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕವನ್ನು ಪಡೆದಿದ್ದಾರೆ. ಶಾರ್ವರಿ ಉಡುಪಿ ಮೂಲದ ವಾದಿರಾಜ ಪೆಜತ್ತಾಯ ಹಾಗೂ ಸಹನಾ ಪೆಜತ್ತಾಯ ಅವರ ಸುಪುತ್ರಿ. ಅವರು ಉಡುಪಿಯ ಆಚಾರ್ಯ ಏಸ್ ರೂಪಿಸಿದ ಪಠ್ಯ ಪುಸ್ತಕ, ಕಾರ್ಯಾಗಾರ ಕ್ರಾಶ್ ಕೋರ್ಸ್ ಹಾಗೂ ಆನ್ ಲೈನ್ ತರಬೇತಿ ಪಡೆದಿದ್ದರು. ಆಚಾರ್ಯ ಏಸ್ ಗೆ […]
ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಶುಭಹಾರೈಸಿದ ಪ್ರಮುಖರು ಇಲ್ಲಿದ್ದಾರೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಚಂದದ ಮಂದಿರ ನಿರ್ಮಾಣಕ್ಕಿಂದು ಭೂಮಿ ಪೂಜೆಯ ಸಂಭ್ರಮ. ಈ ಸುಮುಹೂರ್ತಕ್ಕೆ ವಿವಿಧ ಗಣ್ಯರು ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.
ಶಿರಿಯಾರ-ಕಲ್ಮರ್ಗಿ: ಜೆರಾಕ್ಸ್ ಸೇವಾ ಕೇಂದ್ರ ಉದ್ಘಾಟನೆ

ಉಡುಪಿ: ಶಿರಿಯಾರ-ಕಲ್ಮರ್ಗಿ ಶ್ರೀರಾಮ ಮಂದಿರದ ಬಳಿಯಲ್ಲಿ ಪ್ರೀತಿ ನಾಯಕ್ ಅವರ ಮಾಲಕತ್ವದಲ್ಲಿ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು. ಇಲ್ಲಿ ಕರೆಂಟ್ ಬಿಲ್, ಆರ್ಟಿಸಿ ಜೆರಾಕ್ಸ್, ಟಿವಿ, ಮೊಬೈಲ್ ರೀಚಾರ್ಜ್, ಎಲ್ಐಸಿ ಪ್ರೀಮಿಯಂ ಇತ್ಯಾದಿ ಸೇವೆಗಳು ಲಭ್ಯವಿದೆ ಎಂದು ಮಾಲಕಿ ಪ್ರೀತಿ ನಾಯಕ್ ತಿಳಿಸಿದರು. ಬ್ರಹ್ಮಾವರ, ಕುಂದಾಪುರ ತಾಲೂಕು ಕಚೇರಿ, ಕೋಟ ನಾಡಕಚೇರಿಗೆ ರೈತರ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಈ ಕೇಂದ್ರ ತೆರೆಯಲಾಗಿದೆ ಎಂದು ಉಡುಪಿಯ ನೋಟರಿ ಕಲ್ಮರ್ಗಿ ಶಿರಿಯಾರ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ. ಉದ್ಯಮಿ ಕಲ್ಮರ್ಗಿ ಎಸ್. […]
ಸುಣ್ಣಾರಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜ್: ಸಾಯಿ ಪುಷ್ಪಾಂಜಲಿಗೆ ರಾಜ್ಯದಲ್ಲಿ 9ನೇ ರ್ಯಾಂಕ್

ಕುಂದಾಪುರ: ತಾಲೂಕಿನ ಕೋಟೆಶ್ವರ ಸಮೀಪದ ಸುಣ್ಣಾರಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದ ಸಾಯಿ ಪುಷ್ಪಾಂಜಲಿ ಶೆಟ್ಟಿ ಅವರು 588 ಅಂಕಗಳಿಸಿ ರಾಜ್ಯದಲ್ಲಿ 9ನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ವಕ್ವಾಡಿಯ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ಗುರುಕುಲ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ವಕ್ವಾಡಿ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ಗುರುಕುಲ ಪದವಿಪೂರ್ವ ಕಾಲೇಜು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100 ಪರ್ಸೆಂಟ್ ವಾಣಿಜ್ಯ ವಿಭಾಗದಲ್ಲಿ ಶೇ.100, ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ಒಟ್ಟು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಶೇ.33ರಷ್ಟು ಉನ್ನತ ಶ್ರೇಣಿಯಲ್ಲಿ, ಶೇ.67ರಷ್ಟು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಸಂಸ್ಥೆಯ ಆಡಳಿತ ಮಂಡಳಿ […]