ಮಹಿಳೆಯರಿಗೊಂದು ಸದವಕಾಶ: ಮಾಂಟೇಸ್ಸರಿ/ ನರ್ಸರಿ ಟೀಚರ್ ಟ್ರೈನಿಂಗ್ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಕಳೆದ 7 ವರ್ಷಗಳಿಂದ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಮಹಿಳೆಯರಿಗೆ ಮಾಂಟೇಸರಿ, ನರ್ಸರಿ ಟೀಚರ್ ಟ್ರೈನಿಂಗ್ ನಡೆಸುತ್ತಿದೆ. ಮಕ್ಕಳನ್ನು ಸಹಜವಾಗಿ 2.5 – 3 ವರ್ಷಗಳಿಂದ ಸರ್ಕಾರಿ ಶಾಲೆ ಕಲಿಸಲಾಗುತ್ತದೆ. ಮಾಂಟೆಸ್ಸರಿ ಬೋಧನೆಯೂ ಮಗುವಿನ ಎಲ್ಲಾ ಅಂಶಗಳನ್ನು ಬೆಳೆಸುವ ಕಡೆಗೆ ವ್ಯವಹರಿಸುತ್ತದೆ. ವಿಶೇಷ ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳನ್ನು ಈ ತರಬೇತಿಯ ಅವಧಿಯಲ್ಲಿ ಒಳಗೊಂಡಿದೆ. ಮಾಂಟೆಸ್ಸರಿ ವಿಧಾನದ ಸಲಕರಣೆಗಳನ್ನು ಉಪಯೋಗಿಸುವುದು ಮತ್ತು ಮಗುವಿನ ದೈಹಿಕ ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅನುಕೂಲವಾಗುವ ಬೋಧನಾ […]

ಶ್ರೀ ಗಣೇಶ ಚತುರ್ಥಿಗೆ ಭಕ್ತಿಪೂರ್ವಕವಾಗಿ ಶುಭಹಾರೈಸಿದ್ದಾರೆ ನಾಡಿನ ಗಣ್ಯರು.

ಉಡುಪಿ: ಶ್ರೀ ಗಣೇಶ ಚತುರ್ಥಿಗೆ ಕರಾವಳಿಯ ವಿವಿಧ ಗಣ್ಯರು ಉಡುಪಿXPRESS ಸುದ್ದಿ ಮೂಲಕ ಶುಭಕೋರಿದ್ದಾರೆ. ಗಣೇಶೋತ್ಸವ ಎಲ್ಲರಿಗೂ ಒಳಿತನ್ನು ತರಲಿ ಎಂದು ಹಾರೈಸಿದ್ದಾರೆ.  

ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಅಗ್ರಮಾನ್ಯ ಶ್ರೇಯಾಂಕ: 2020-21ನೇ ಸಾಲಿನ ದಾಖಲಾತಿ ಆರಂಭ

ಬ್ರಹ್ಮಾವರ: ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ್ಯಾಧಾರಿತ ವೃತ್ತಿ ತರಬೇತಿಯನ್ನು ನೀಡುತ್ತಿರುವ ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಜಿಲ್ಲೆಯಲ್ಲೇ ಅಗ್ರಮಾನ್ಯ ಗ್ರೇಡಿಂಗ್ ಲಭಿಸಿದೆ. ಕೇಂದ್ರ ಸರ್ಕಾರದ ಡಿಜಿಟಿ ಇಲಾಖೆಯಿಂದ ನಡೆಸಿದ 2019-20ರ ಗ್ರೇಡಿಂಗ್ ಪರಿವೀಕ್ಷಣೆಯಲ್ಲಿ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಅಧೀನದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮಟ್ಟದ ಕೌಶಲ ತರಬೇತಿಯನ್ನು ರಾಜ್ಯ ಸರಕಾರದ ಕೌಶಲ ತರಬೇತಿ ಮತ್ತು ಉದ್ಯೋಗ ಇಲಾಖೆಯ ಅಧೀನದಲ್ಲಿ ಕಾರ್ಯ […]

74ನೇ ಸ್ವಾತಂತ್ರ್ಯೋತ್ಸವಕ್ಕೆ ನಾಡಿನ ಗಣ್ಯರು ಶುಭಹಾರೈಸಿದ್ದಾರೆ.

ಉಡುಪಿ: 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇಡೀ ದೇಶ ಮಿಂದೇಳುವ ಹೊತ್ತಿದು‌. ಸ್ವಾತಂತ್ರ್ಯಕ್ಕೋಸ್ಕರ ಬಲಿದಾನಗೈದ ನೂರಾರು ಹೋರಾಟಗಾರನ್ನು, ವೀರಯೋಧರನ್ನು ಸ್ಮರಿಸುವ ಅಭೂತಪೂರ್ವ ಗಳಿಗೆಯಿದು. ಇಲ್ಲಿ ಗಣ್ಯರು ಸ್ವಾತಂತ್ರ್ಯೋತ್ಸವಕ್ಕೆ ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.

ಪ್ರೀತಿಯ ಬಂಧನವೂ ಸ್ವಾತಂತ್ರ್ಯವೇ!: ಟಿ.ದೇವಿದಾಸ್ ಬರೆದ ವಿಶೇ‍ಷ ಲೇಖನ

       ಟಿ. ದೇವಿದಾಸ್ ಸ್ವಾತಂತ್ರ್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದಾ? ಮನಸಿಗೆ ಸಂಬಂಧಿಸಿದ್ದಾ? ಬುದ್ಧಿಗೆ ಸಂಬಂಧಿಸಿದ್ದಾ? ಅರೆ, ಇದೆಂಥಾ ವಿಚಿತ್ರವಾದ ಪ್ರಶ್ನೆ. ಅಷ್ಟಕ್ಕೂ ಸ್ವಾತಂತ್ರ್ಯವೆಂಬುದು ದೇಹಕ್ಕೆ, ಮನಸಿಗೆ ಸಂಬಂಧಿಸಿದ್ದೇ? ಅಹುದು, ಸ್ವಾತಂತ್ರ್ಯವೆಂಬುದು ದೇಹ ಮತ್ತು ಮನಸು ಎರಡಕ್ಕೂ ಸಂಬಂಧಿಸಿದ್ದು. ದೇಹಕ್ಕೆ ನಾವೇ ಹಾಕಿಕೊಂಡ ಬಂಧನವೂ ಸ್ವಾತಂತ್ರ್ಯ ಎನಿಸಿಬಿಡುತ್ತದೆ. ಆಹಾರ-ವಿಹಾರ, ಉಡುಗೆ-ತೊಡುಗೆಗಳಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದರೂ ನಮಗೆ ನಾವೇ ಬೇಲಿಗಳನ್ನು ಹಾಕಿಕೊಂಡಿದ್ದೇವೆ. ಮನಸಿಗೂ ಅಂದರೆ ನಮ್ಮ ಮಾತು, ನಗು, ಚಿಂತನೆ, ಅಭಿವ್ಯಕ್ತಿಗಳಲ್ಲಿ ಮಿತಿಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ಒಟ್ಟಲ್ಲಿ, ಸ್ವಾತಂತ್ರ್ಯವೆಂದರೆ ನಾವೇ […]