ಸೆ.24: ಇಂಧನ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಸೆಪ್ಟಂಬರ್ 24 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ಸಮೀಪದ ಮಥುರ ಛತ್ರ ಇಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪ್ರಶಿಕ್ಷಣ ವರ್ಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ತೆರಳಲಿರುವರು.

ಉಡುಪಿ: ಅಪಾರ್ಟ್ ಮೆಂಟ್ ಮಹಡಿಯಿಂದ ಕೆಳಗೆ ಬಿದ್ದು 13 ವರ್ಷದ ಬಾಲಕ‌ ಮೃತ್ಯು

ಉಡುಪಿ ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಬಳಿಯ ಫ್ಲ್ಯಾಟ್ ನ ಅಪಾರ್ಟ್ ಮೆಂಟ್ ನಲ್ಲಿದ್ದ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಸೆ.22ರಂದು ನಡೆದಿದೆ. ಮೃತ ಬಾಲಕನನ್ನು ಆಂಧ್ರಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ 13ವರ್ಷ ಪ್ರಾಯದ ಆಶಿಕ್ ಎಂದು ಗುರುತಿಸಲಾಗಿದೆ. ಬಾಲಕನ ತಾಯಿ ರೀನಾ ಮಂಡೆಲ್ ಅವರು ಜೇನು ತೆಗಿಯುವ ಕೆಲಸ ಮಾಡಿಕೊಂಡಿದ್ದು, 3 ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರ ಚರ್ಚ್ […]

ಹಾಸ್ಯ ಜಗತ್ತಿನ ಹೆಸರಾಂತ ಕಲಾವಿದ ರಾಜು ಶ್ರೀವಾಸ್ತವ್ ಇನ್ನಿಲ್ಲ

ನವದೆಹಲಿ: ಹೆಸರಾಂತ ಹಾಸ್ಯನಟ ರಾಜು ಶ್ರೀವಾಸ್ತವ ಅವರು 58 ನೇ ವಯಸ್ಸಿನಲ್ಲಿ ದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ಇದನ್ನು ಅವರ ಕುಟುಂಬದವರು ಖಚಿತಪಡಿಸಿದ್ದಾರೆ. ಜಿಮ್ ನಲ್ಲಿ ತಾಲೀಮು ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅವರನ್ನು ಆಗಸ್ಟ್ 10ರಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. 42 ದಿನಗಳ ಕಾಲ ಕೋಮಾದಲ್ಲಿದ್ದ ಅವರು ಬುಧವಾರದಂದು ನಿಧನ ಹೊಂದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಉ.ಪ್ರ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮು.ಮಂ. ಅರವಿಂದ್ […]

ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಪ್ರತಿಭಟನೆ: ಶಿರವಸ್ತ್ರಗಳನ್ನು ಸುಟ್ಟ ಇರಾನಿ ಮಹಿಳೆಯರು

ತೆಹ್ರಾನ್: ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯೊಬ್ಬರು ಬಂಧನದ ಸಮಯದಲ್ಲಿ ಸಾವನ್ನಪ್ಪಿದ ನಂತರ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇರಾನಿ ಮಹಿಳೆಯರು, ಶಿರವಸ್ತ್ರಗಳನ್ನು ಸುಟ್ಟು ಮತ್ತು ತಲೆಕೂದಲನ್ನು ಕತ್ತರಿಸುವ ಮೂಲಕ ತಮ್ಮ ಅಸಮ್ಮತಿಯನ್ನು ಹೊರಹಾಕುತ್ತಿದ್ದಾರೆ. ಇರಾನಿ ಆಡಳಿತದ ವಿರುದ್ದ ಮಹಿಳೆಯರ ಪ್ರತಿಭಟನೆಯು ಐದನೇ ದಿನವನ್ನು ಪ್ರವೇಶಿಸಿದ್ದು, ವ್ಯಾಪಕವಾಗಿ ಇತರ ನಗರ ಮತ್ತು ಪಟ್ಟಣಗಳನ್ನು ಆವರಿಸುತ್ತಿವೆ. ಹಿಜಾಬ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಮೂರು ದಿನ ಕೋಮಾದಲ್ಲಿದ್ದ ಮಹ್ಸಾ ಅಮಿನಿ ಎಂಬ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಪ್ರತಿಭಟನೆಯ […]

ಕೊಡವೂರು: ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವ ಮೂಲಕ ಮೋದಿ ಜನ್ಮ ದಿನಾಚರಣೆ

ಕೊಡವೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಕೊಡವೂರಿನ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಸೇರಿಕೊಂಡು ಕೊಡವೂರು ವಾರ್ಡಿನಲ್ಲಿರುವ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ವಚ್ಛ, ಸುಂದರಗೊಳಿಸುವ ಮೂಲಕ ಪ್ರಯಾಣಿಕರಿಗೆ ಒಳ್ಳೆಯ ವಾತಾವರಣ ಕಲ್ಪಿಸಿದ್ದೇವೆ. ನಾವೆಲ್ಲರೂ ಮೋದಿಯವರು ಹಾಕಿಕೊಟ್ಟ ಹೆಜ್ಜೆಗುರುತಿನಲ್ಲಿ ನಡೆಯಬೇಕು. ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಈ ಕಾರ್ಯದಲ್ಲಿ ಹಲವಾರು ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು. ಪ್ರಧಾನಿ ಮೋದಿ […]