ಆಗಸ್ಟ್ 22 ರಿಂದ 29ರವರೆಗೆ ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಕೆಗೆ ಅವಕಾಶ

ಉಡುಪಿ: ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಬಯಸುವ ಜಿಲ್ಲೆಯ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಆಗಸ್ಟ್ 22 ರಂದು ಬೈಂದೂರು ಪ್ರವಾಸಿ ಮಂದಿರ, ಆಗಸ್ಟ್ 23 ರಂದು ಕುಂದಾಪುರ ಪ್ರವಾಸಿ ಮಂದಿರ, ಆಗಸ್ಟ್ 24 ರಂದು ಹೆಬ್ರಿ ಪ್ರವಾಸಿ ಮಂದಿರ, ಆಗಸ್ಟ್ 25 ರಂದು ಕಾರ್ಕಳ ಪ್ರವಾಸಿ ಮಂದಿರ, ಆಗಸ್ಟ್ 26 ರಂದು ಬ್ರಹ್ಮಾವರ ಚಾಂತಾರು ಗ್ರಾಮ […]

ಕುಂದಾಪುರ ಗಾಂಧಿ ಮೈದಾನದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ- 2022

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕ್ರಿಕೆಟ್ ಆಡುವವರಿಗಾಗಿ ಆಗಸ್ಟ್ 21 ರಂದು ಇಂಡಿಪೆಂಡೆನ್ಸ್ ಡೇ ಕಪ್- 2022 ಆಯೋಜಿಸಲಾಗಿದೆ. ಒಟ್ಟು 6 ತಂಡಗಳು ‌ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ವಿಶೇಷವಾಗಿ ತಂಡಗಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ವೀರರ ಹೆಸರಿಡಲಾಗಿದೆ. ತಂಡಗಳ ವಿವರ: 1)ನೇತಾಜಿ ವಾರಿಯರ್ಸ್ 2)ಸುಖದೇವ್ ವಾರಿಯರ್ಸ್ 3)ಭೋಸ್ ಆರ್ಮಿ 4)ರಾಯಣ್ಣ ವಾರಿಯರ್ಸ್ 5)ರಾಣಿ ಚೆನ್ನಮ್ಮ ವಾರಿಯರ್ಸ್ 6)ಭಗತ್ ಸಿಂಗ್ ವಾರಿಯರ್ಸ್ ಪಂದ್ಯಾವಳಿಯ ವಿಜೇತ ತಂಡಗಳು […]

ಗೋಪಾಲಕೃಷ್ಣನಾಗಿ ಅಲಂಕೃತಗೊಂಡ ದೊಡ್ಡಣ್ಣ ಗುಡ್ಡೆ ಆದಿಶಕ್ತಿ ದುರ್ಗಾದೇವಿ

ದೊಡ್ಡಣ್ಣಗುಡ್ಡೆ: ಪ್ರಥಮ ಸೋಣ ಶುಕ್ರವಾರದಂದು, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಪಾಲಕೃಷ್ಣನಾಗಿ ಅಲಂಕೃತಗೊಂಡು ಭಕ್ತರನ್ನು ಅನುಗ್ರಹಿಸಿದ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ಆನಂದ ಬಾಯರಿ ಸ್ವಸ್ತಿಕ ಆಚಾರ್ಯ, ಅನೀಶ್ ಆಚಾರ್ಯ ಈ ಮನಮೋಹಕ ಅಲಂಕಾರವನ್ನು ಮಾಡಿದ್ದರು.

ಮಾಹೆ: ಮಾಹೆಯ ಗಾಂಧಿಯನ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಹೊಸ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವು ಆಗಸ್ಟ್ 22, 2022 ರಂದು ಬೆಳಿಗ್ಗೆ 10.30 ಕ್ಕೆ ಓಲ್ಡ್ ಟ್ಯಾಪ್ಮಿ ಕಟ್ಟಡದಲ್ಲಿರುವ ಜಿಸಿಪಿಎಎಸ್ ನ ಸರ್ವೋದಯ ಹಾಲ್ ನಲ್ಲಿ ನಡೆಯಲಿದೆ. ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಜನರಲ್ ಸರ್ವಿಸಸ್ ನ ನಿರ್ದೇಶಕ ಕರ್ನಲ್ ಪ್ರಕಾಶ್ ಚಂದ್ರ, ಮಣಿಪಾಲ ಎಂಕೊಡ್ಸ್ ನ ಪ್ರಾಧ್ಯಾಪಕರಾದ ಡಾ.ಶಶಿರಶ್ಮಿ ಆಚಾರ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದೇಶ ಮತ್ತು ವಿದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು […]

ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ರಕ್ತದಾನ ಶಿಬಿರ

ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಗಣಿತನಗರ ಕಾರ್ಕಳ, ನಾಗಬನ ಕ್ಯಾಂಪಸ್ ಉಡುಪಿ, ಜ್ಞಾನಸುಧಾ ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಹಳೆ ವಿದ್ಯಾರ್ಥಿ ಸಂಘ, ರೆಡ್ ಕ್ರಾಸ್ ಸೊಸೈಟಿ ಕಾರ್ಕಳ-ಕುಂದಾಪುರದ ಸಹಯೋಗದೊಂದಿಗೆ ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ಗಣಿತ ನಗರ ಕ್ಯಾಂಪಸ್ ನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.