ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!

ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ.

ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ.

ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ ಮಾಡಿದವರು ಕೌಶಿಕ್.

ಚಿತ್ರಕಲೆಯೊಂದಿಗೆ ನೀನಾಸಂ ತಿರುಗಾಟದ ನಾಟಕಗಳನ್ನು ನೋಡುತ್ತ ರಂಗ ನಿರ್ದೇಶನದತ್ತಲೂ ಇವರಿಗೆ ಒಲವು ಬೆಳೆಯಿತು.ನಾಟಕವೂ ಕೂಡ ಚಿತ್ರಕಲೆಗೆ ಸ್ಪೂರ್ತಿ ನೀಡಿತು.

ಈಗಾಗಲೇ ಹಲವಾರು ವೇದಿಕೆಗಳಲ್ಲಿ ನಾಟಕ ಮತ್ತು ಚಿತ್ರಕಲೆಗಳ ಪ್ರದರ್ಶನ ಮತ್ತು ಕಥೆಗಳನ್ನು ಬರೆದು ನಿರ್ದೇಶಿಸಿದ್ದಾರೆ ಕೌಶಿಕ್ .ಇವರು ಬಿಡಿಸಿದ ಅಂದದ ಚಿತ್ರಗಳನ್ನು ನೀವೊಮ್ಮೆ ಕಣ್ತುಂಬಿಕೊಳ್ಳಿ.