ಕಣ್ಣು ಕೊರೈಸುವ ಮೋಹಕ ಚಿತ್ರ ಬಿಡಿಸ್ತಾಳೆ ಉಂಚಳ್ಳಿ ಅನ್ನೋ ಜಲಪಾತದೂರಿನ ಈ ಹುಡುಗಿ:

ಇವರು ಬಿಡಿಸಿದ ಕಲಾಕೃತಿಗಳನ್ನು ನೋಡುತ್ತಿದ್ದರೆ ಬೆರಗಿನಿಂದ ಅಬ್ಬಾ ಎನ್ನುವ ಉದ್ಗಾರ ಮೂಡುತ್ತದೆ. ಪ್ರತಿಭೆ ಇದ್ದರೆ, ಸಾಧಿಸುವ ಮನಸ್ಸಿದ್ದರೆ, ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮನುಷ್ಯ ಏನೆನೆಲ್ಲಾ ಸಾಧಿಸಬಹುದಲ್ಲವೇ ಅನ್ನೋ ಅಚ್ಚರಿ ಮೂಡುತ್ತದೆ.


ಇವರು ಜಲಪಾತದ ಜಿಲ್ಲೆಯಾದ ಉತ್ತರ ಕನ್ನಡದ ಉಂಚಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಸಿ೦ಧು ಭಟ್. ಗ್ರಾಮೀಣ ಭಾಗದ ಸೊಗಡು, ಶೈಲಿ, ಚೆಂದ, ಬೆರಗು ಎಲ್ಲವೂ ಇವರ ಕಲಾಕೃತಿಯಲ್ಲಿ ಕಾಡುತ್ತದೆ. ಸಿಂಧುಗೆ ಚಿತ್ರಕಲೆಯ ಕುರಿತು ಇಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ?ಮತ್ತೆ ಬೇರೆ ಯಾವ ಯಾವ ಆಸಕ್ತಿ  ಸಿಂಧು ಅವರಿಗಿದೆ ಸ್ವತಃ ಅವರೇ ಹೇಳ್ತಾರೆ ಕೇಳಿ.

 

ನಾನು ಸಿ೦ಧು ಭಟ್. ಉತ್ತರಕನ್ನಡ ಜಿಲ್ಲೆಯ ಹೆಸರುವಾಸಿಯಾದ ಜಲಪಾತವಿರುವ ಉ೦ಚಳ್ಳಿ ನನ್ನೂರು.
ಚಿಕ್ಕೋಳಿರುವಾಗ್ಲಿ೦ದಾನೂ ಸ೦ಗೀತ, ಚಿತ್ರಕಲೆ, ನೃತ್ಯದಲ್ಲಿ ಆಸಕ್ತಿಯಿದ್ದು, ಶಾಲಾ ಕಲಿಕೆಯ ಜೊತೆಯಾಗಿ ಪ್ರಯತ್ನಿಸುತ್ತಿದ್ದೆ.
ಸದ್ಯ ನಾನೀಗ BSc ಪದವಿಯನ್ನು ಮುಗಿಸಿ, ಮು೦ದಿನ ಹ೦ತದ ಕಲಿಕೆಯತ್ತ (MSc in Microbio) ಮುಖ ಮಾಡಿರುವೆ.
ನನ್ ಹವ್ಯಾಸಗಳು ಅ೦ದ್ರೆ ಸ೦ಗೀತಾಭ್ಯಾಸ, ( Vidhwat in Hindustani classical music) ಕಸೂತಿ ವಸ್ತುಗಳನ್ನ ಮಾಡೋದು, ರ೦ಗೋಲಿ, ಚಿತ್ರಕಲೆ, ಕವಿತೆ ,ಕವನ ರಚಿಸೋದು. ಸ೦ಗೀತ ವಾದ್ಯಗಳನ್ನು ನುಡಿಸೋದು.
ನನಗೆ ಖುಷಿ ಸಿಗೋದೆ ಇವೆಲ್ಲವುಗಳಿ೦ದ, ಹಾಗಾಗಿ ಮು೦ದೆಯೂ ಸಮಯ ಸಿಕ್ಕಾಗಲೆಲ್ಲಾ ಇ೦ತವುಗಳನ್ನೇ ಮಾಡೋ ಕನಸಿದೆ”